ಕೋಟಿಗೊಬ್ಬ-3 ಚಿತ್ರದ ಅಫೀಷಿಯಲ್ ಪೋಸ್ಟರ್​​ ಡೀಸೈನರ್​​ ಅಲ್ಲ, ಮಾಹಿತಿ ನೀಡದೇ ನನ್ನನ್ನು ನಿರ್ಮಾಣ ಸಂಸ್ಥೆ ಹೊರಹಾಕಿದೆ; ಸಾಯಿ ಕೃಷ್ಣ

|

Updated on: Apr 14, 2021 | 11:43 AM

Kotigobba 3 Designer Sai Krishna: ಅಭಿನಯ ಚಕ್ರವರ್ತಿ ನಟಿಸಿರುವ ಕೆಂಪೇಗೌಡ, ವಿಷ್ಣುವರ್ಧನ, ವರದ ನಾಯಕ ಸೇರಿದಂತೆ ಇನ್ನಿತರ ಅಧ್ಬುತ ಸಿನಿಮಾಗಳಿಗೆ ಸಾಯಿ ಕೃಷ್ಣ ಅವರೇ ಪೋಸ್ಟರ್​​ ಡಿಸೈನ್​ ಮಾಡಿದ್ದಾರೆ. ಇದೀಗ ಕೋಟಿಗೊಬ್ಬ-3 ಚಿತ್ರ ತಂಡದಿಂದ ಹೊರಬಂದಿರುವುದು ಸುದೀಪ್​ ಅಭಿಮಾನಿಗಳಿಗೆ ಬೇಸರ ನೀಡಿದೆ.

ಕೋಟಿಗೊಬ್ಬ-3 ಚಿತ್ರದ ಅಫೀಷಿಯಲ್ ಪೋಸ್ಟರ್​​ ಡೀಸೈನರ್​​ ಅಲ್ಲ, ಮಾಹಿತಿ ನೀಡದೇ ನನ್ನನ್ನು ನಿರ್ಮಾಣ ಸಂಸ್ಥೆ ಹೊರಹಾಕಿದೆ; ಸಾಯಿ ಕೃಷ್ಣ
kotigobba 3
Follow us on

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊವಿಡ್​ ಸೋಂಕು ದೇಶದೆಲ್ಲೆಡೆ ಹರಡಿರುವುದರಿಂದ ಸಿನಿಮಾರಂಗಕ್ಕೆ ದೊಡ್ಡಹೊಡೆತ ಉಂಟಾಗಿದೆ. ಹಾಗಾಗಿ ಬಿಡುಗಡೆಗೊಳ್ಳಲು ಸಿದ್ಧವಾಗಿದ್ದ ಚಿತ್ರಗಳೆಲ್ಲವೂ ಮುಂದೂಡಿಕೆಯಾಗುತ್ತಿದೆ. ಅಂದುಕೊಂಡಂತೆಯೇ ಎಲ್ಲವೂ ಸರಿಯಾಗಿ ನಡೆಯುತ್ತಿದ್ದರೆ ಇದೇ ತಿಂಗಳಲ್ಲಿ ಕೋಟಿಗೊಬ್ಬ-3 ಚಿತ್ರ ಜನಮನ ತಲುಪುತ್ತಿತ್ತು. ಈ ನಡುವೆಯೇ ಆದರೆ ಸುದೀಪ್​ ಅಭಿಮಾನಿಗಳಿಗೆ ನಿರಾಸೆಯ ಮೂಡಿರುವ ಸಂಗತಿಯೊಂದು ನಡೆದಿದೆ.

ಇದೆಲ್ಲದರ ಮಧ್ಯೆ ಸುದೀಪ್​ ಅವರ ಸಿನಿಮಾಗಳ ಪೋಸ್ಟರ್​ ಡಿಸೈನ್​ ಮಾಡುತ್ತಿದ್ದ ಸಾಯಿ ಕೃಷ್ಣ ಅವರು ಕೋಟಿಗೊಬ್ಬ-3 ಚಿತ್ರ ತಂಡ ಬಿಟ್ಟು ಹೊರ ಬಂದಿದ್ದಾರೆ ಎಂಬ ಮಾಹಿತಿಗಳು ಹರಿ ಬರುತ್ತಿದೆ. ನಿನ್ನೆ ಏಪ್ರಿಲ್​ 14ರಂದು ಈ ಕುರಿತಂತೆ ಸಾಯಿ ಕೃಷ್ಣ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಅಸಮಾಧಾನವನ್ನು ಹೊರಹಾಕಿದ್ದರೆ. ಕಾರಣ ಕೊಡದೆ ಕೋಟಿಕೊಬ್ಬ-3 ಚಿತ್ರ ತಂಡ ನನ್ನನ್ನು ಹೊರಹಾಕಿದೆ ಎಂದು ಹೇಳಿಕೊಂಡಿದ್ದಾರೆ. ನಾನು ಈ ಚಿತ್ರದ ಪೋಸ್ಟರ್​ ತಯಾರಿಗೆ ಒಪ್ಪಿಕೊಂಡಿರುವುದು ಒಂದು ಪ್ರಮುಖ ಕಾರಣ ಸುದೀಪ್​ , ಅವರ ಅಭಿಮಾನಿಗಳು ಮತ್ತೊಂದು ಕೊವಿಡ್​ ಪರಿಣಾಮವಾಗಿ ಹಣ. ಇವುಗಳನ್ನು ಬಿಟ್ಟು ಇನ್ಯಾರೂ ಅಲ್ಲ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಇಂದಿನಿಂದ ನಾನು ಕೋಟಿಗಿಬ್ಬ-3 ಚಿತ್ರದ ಅಫೀಷಿಯಲ್​ ಪೋಸ್ಟರ್​ ಡಿಸೈನರ್​ ಅಲ್ಲ ಎಂದು ಸಾಯಿ ಕೃಷ್ಣ ಸುದೀಪ್​ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ.

ಗೆಳೆಯರೇ.. ನಾನು ಪೋಸ್ಟರ್​ ಡೀಸೈನ್​ ನಿಲ್ಲಿಸಿ ತುಂಬಾ ದಿನಗಳಾಯಿತು. ಲಾಕ್​ಡೌನ್​ ಸಮಯದಲ್ಲಿ ಈ ಸಿನಿಮಾ ಒಪ್ಪಿಕೊಂಡಿದ್ದೆ. ನನ್ನ ಮೊದಲನೇ ಸಿನಿಮಾ ಅಪ್ಪು ಅವರದ್ದು.. ಅಜಯ್​.. ನಂತರ ಪರಮಾತ್ಮ, ರಣವಿಕ್ರಮ ಮಾಡಿದ್ದೀನಿ. ಇನ್ನೇನಾದರೂ ಕಾಲ ಕೂಡಿಬಂದರೆ, ಹಣೆಬರಹ ಚೆನ್ನಾಗಿದ್ದರೆ ನಿರ್ದೇಶನ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಾಯಿ ಕೃಷ್ಣ ಅವರು ಇತ್ತೀಚಿನ ದಿನಗಳಲ್ಲಿ ಪೋಸ್ಟರ್​ ಡಿಸೈನ್​ ಮಾಡುವುದನ್ನು ನಿಲ್ಲಿಸಿದ್ದರು. ಕೊವಿಡ್​ ಕಾರಣದಿಂದ ಅನಿವಾರ್ಯತೆ ಇದ್ದರಿಂದ ಕೋಟಿಗೊಬ್ಬ-3 ಚಿತ್ರ ಒಪ್ಪಿಕೊಂಡಿದ್ದರು ಎಂದು ಖುದ್ದಾಗಿ ಅವರೇ ಹೇಳಿಕೊಂಡಿದ್ದಾರೆ.

ಸಾಯಿ ಕೃಷ್ಣ ಅವರ ಟ್ವೀಟ್​ ಗಮನಿಸಿದ ಕಿಚ್ಚ ಸುದೀಪ್​ ಪ್ರತಿಕ್ರಿಯಿಸಿದ್ದು, ಕೋಟಿಗೊಬ್ಬ-3 ಚಿತ್ರತಂಡದ ಜತೆಗೆ ಇಲ್ಲಿಯವರೆಗೆ ಜೊತೆಯಾಗಿದ್ದೀರಿ. ಈ ಸಿನಿಮಾ ಮುಗಿಯುವವರೆಗೂ ನಿಮ್ಮ ಪ್ರಯಾಣ ಮುಂದುವರೆಯಬೇಕು ಎಂಬುದು ನನ್ನ ಆಸೆ. ಈ ನಿಮ್ಮ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಇದೀಗ ನೀವು ಹೇಳಿರುವ ವಿಷಯದ ಕುರಿತಾಗಿ ಗಮನ ಹರಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಭಿನಯ ಚಕ್ರವರ್ತಿ ನಟಿಸಿರುವ ಕೆಂಪೇಗೌಡ, ವಿಷ್ಣುವರ್ಧನ, ವರದ ನಾಯಕ ಸೇರಿದಂತೆ ಇನ್ನಿತರ ಅಧ್ಬುತ ಸಿನಿಮಾಗಳಿಗೆ ಸಾಯಿ ಕೃಷ್ಣ ಅವರೇ ಪೋಸ್ಟರ್​​ ಡಿಸೈನ್​ ಮಾಡಿದ್ದಾರೆ. ಇದೀಗ ಕೋಟಿಗೊಬ್ಬ-3 ಚಿತ್ರ ತಂಡದಿಂದ ಹೊರಬಂದಿರುವುದು ಸುದೀಪ್​ ಅಭಿಮಾನಿಗಳಿಗೆ ಬೇಸರ ನೀಡಿದೆ.

ಇದನ್ನೂ ಓದಿ:
ರುಕ್ಮಿಣಿ ವಿಜಯಕುಮಾರ್ ಸೀರೆಯುಟ್ಟು ಕಸರತ್ತು ಮಾಡಿದ ವಿಡಿಯೋ ವೈರಲ್; ಮಹಿಳೆಯರಿಗೆ ಇದು ಸ್ಫೂರ್ತಿ ಎಂದ ನೆಟ್ಟಿಗರು

 

(Kotigobba 3 poster designer Sai Krishna Enreddy walked out of Movie Crew)

Published On - 10:18 am, Wed, 14 April 21