Power Star Puneeth Rajkumar: ಪುನೀತ್ ರಾಜ್​ಕುಮಾರ್ ಮುಂದಿನ ಸಿನಿಮಾಕ್ಕೆ ಲೂಸಿಯಾ ಪವನ್ ನಿರ್ದೇಶಕ

ಹೊಂಬಾಳೆ ಫಿಲ್ಮ್ ನಿರ್ಮಿಸಲಿರುವ ಪುನೀತ್ ರಾಜ್​ಕುಮಾರ್ ಮುಂದಿನ ಸಿನಿಮಾವನ್ನು ಲೂಸಿಯಾ ಪವನ್ ನಿರ್ದೇಶಿಸಲಿದ್ದಾರೆ. ಈ ಕುರಿತು ಸ್ವತಃ ಪುನೀತ್ ರಾಜ್​ಕುಮಾರ್ ಟ್ವೀಟ್ ಮಾಡಿ ವಿಷಯ ಬಹಿರಂಗಪಡಿಸಿದ್ದಾರೆ.

Power Star Puneeth Rajkumar: ಪುನೀತ್ ರಾಜ್​ಕುಮಾರ್ ಮುಂದಿನ ಸಿನಿಮಾಕ್ಕೆ ಲೂಸಿಯಾ ಪವನ್ ನಿರ್ದೇಶಕ
ಪುನೀತ್ ಹೊಸ ಚಿತ್ರ
Follow us
guruganesh bhat
|

Updated on: Apr 13, 2021 | 9:35 PM

ಯುಗಾದಿಯ ಶುಭ ಸಂದರ್ಭದಲ್ಲಿ ಯುವರತ್ನ ಹೊಸ ಸುದ್ದಿ ನೀಡಿದ್ದಾನೆ. ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಮುಂದಿನ ಚಿತ್ರ ಘೋಷಣೆಯಾಗಿದೆ. ಹೊಂಬಾಳೆ ಫಿಲ್ಮ್ ನಿರ್ಮಿಸಲಿರುವ ಪುನೀತ್ ರಾಜ್​ಕುಮಾರ್ ಮುಂದಿನ ಸಿನಿಮಾವನ್ನು ಲೂಸಿಯಾ ಪವನ್ ನಿರ್ದೇಶಿಸಲಿದ್ದಾರೆ. ಈ ಕುರಿತು ಸ್ವತಃ ಪುನೀತ್ ರಾಜ್​ಕುಮಾರ್ ಟ್ವೀಟ್ ಮಾಡಿ ವಿಷಯ ಬಹಿರಂಗಪಡಿಸಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಿತ್ತು. ಈ ಚಿತ್ರಕ್ಕೆ ಎದುರಾಗಿದ್ದ ಅಡ್ಡಿ ಆತಂಕಗಳು ಒಂದೆರಡಲ್ಲ. ಯುವರತ್ನ ಬಿಡುಗಡೆಯಾದ ಸಮಯದಲ್ಲೇ ಕೊರೊನಾ ವೈರಸ್​ ಹಾವಳಿ ಹೆಚ್ಚಾಯಿತು. ಪೈರಸಿ​ ಕಾಟವನ್ನೂ ಈ ಸಿನಿಮಾ ಎದುರಿಸಬೇಕಾಯಿತು. ನಂತರ ಶೇ.50 ಆಸನ ಮಿತಿ ನಿಯಮ ಜಾರಿ ಆಯಿತು. ಇದೆಲ್ಲದರ ನಡುವೆಯೂ ಹೆಚ್ಚು ಜನರನ್ನು ತಲುಪುವ ಸಲುವಾಗಿ ಯುವರತ್ನ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿತ್ತು. ಇದಾದ ನಂತರ ಪುನೀತ್ ರಾಜ್​ಕುಮಾರ್  ಯಾರ ಜತೆಗೆ ಮುಂದಿನ ಸಿನಿಮಾ ಮಾಡಲಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಮುಂದಿನ ಸಿನಿಮಾವನ್ನೂ ವಿಜಯ್​ ಕಿರಗಂದೂರು ಅವರೇ ನಿರ್ಮಾಣ ಮಾಡಲಿದ್ದಾರೆ.

ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳು, ವಿದ್ಯಾರ್ಥಿಗಳಿಗೆ ಅಂಟಿರುವ ಡ್ರಗ್ಸ್​ ನಂಟು ಮುಂತಾದ ಗಂಭೀರ ವಿಷಯದ ಕುರಿತು ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಅವರು ಯುವರತ್ನದಲ್ಲಿ ಮೆಸೇಜ್​ ನೀಡಿದ್ದಾರೆ. ಇದು ಎಲ್ಲ ರಾಜ್ಯಗಳ ಪ್ರೇಕ್ಷಕರಿಗೂ ಅನ್ವಯ ಆಗುವಂತಹ ವಸ್ತುವಿಷಯವಾಗಿತ್ತು.  ಹಾಗಾಗಿ ದೇಶಾದ್ಯಂತ ಇರುವ ಸಿನಿಪ್ರಿಯರಿಗೆ ಮತ್ತು ಪರಭಾಷೆಯ ಯುವಜನತೆಗೆ ‘ಯುವರತ್ನ’ ಮನರಂಜನೆ ನೀಡಿತ್ತು. ಇನ್ನು ಮುಂದಿನ ಸಿನಿಮಾದದಲ್ಲಿ ಲೂಸಿಯಾ ಪವನ್ ಪವರ್​ ಸ್ಟಾರ್​ಗೆ ಯಾವ ಕಥೆ ಹೆಣೆಯುತ್ತಾರೆ ಕಾದು ನೋಡಬೇಕಿದೆ.

(Powerstar Puneethrajkumar announced his next film with Lucia Pawan and Hombale films)

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್