ರುಕ್ಮಿಣಿ ವಿಜಯಕುಮಾರ್ ಸೀರೆಯುಟ್ಟು ಕಸರತ್ತು ಮಾಡಿದ ವಿಡಿಯೋ ವೈರಲ್; ಮಹಿಳೆಯರಿಗೆ ಇದು ಸ್ಫೂರ್ತಿ ಎಂದ ನೆಟ್ಟಿಗರು
ಸೀರೆಯನ್ನುಟ್ಟು ನೃತ್ಯ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸೀರೆಯು ಮಹಿಳೆಯರಿಗೆ ಶೋಭೆ ತರುವಂತಹ ಉಡುಪು. ಸೀರೆಯೆಂದರೆ ಮಹಿಳೆಯರಿಗೆ ಅದೇನೋ ರೀತಿಯ ನಂಟು. ಸೀರೆಯನ್ನುಟ್ಟು ಮಾಡಿದ ನೃತ್ಯದಿಂದ ಇವರು ನೆಟ್ಟಿಗರ ಹೃದಯ ಗೆದ್ದಿದ್ದಾರೆ. ನರ್ತಕಿ ವಿಜಯಕುಮಾರಿ ಸೀರೆಯನ್ನುಟ್ಟು ಮಾಡಿದ ನೃತ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಸೀರೆಯನ್ನುಟ್ಟು ನೃತ್ಯ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ನೋಡಿದಂತೆ, ಸಲಿಲವಾಗಿ ತೊಡುವ ಸೀರೆಯನ್ನು ನರ್ತಕಿ ರುಕ್ಮಿಣಿ ವಿಜಯಕುಮಾರಿ ಧರಿಸಿದ್ದಾರೆ. ಬಂಗಾರದ ಬಣ್ಣದ ಅಂಚು ಹೊಂದಿರುವ ಕಂದು ಬಣ್ಣದ ಸೀರೆ ತೊಟ್ಟು ನಗುಮುಖದಲ್ಲಿ ನೃತ್ಯ ಮಾಡಿದ್ದಾರೆ. ಸೀರೆಯನ್ನುಟ್ಟು ಮಾಡಿದ ನೃತ್ಯದಲ್ಲಿ ಯೋಗದ ಕೆಲವು ಆಸನಗಳನ್ನೂ ಅವರು ಮಾಡಿದ್ದಾರೆ.
ನರ್ತಕಿ ರುಕ್ಮಿಣಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಕ್ಲಿಪ್ಸ್ಗಳು, ಯೋಗದಿನದಂದು ಮಾಡಿದ ಕೆಲವು ನೃತ್ಯದ ತುಣುಕುಗಳಾಗಿವೆ. ಸೀರೆಯನ್ನು ಸರಿಯಾಗಿ ತೊಟ್ಟು, ಬಳಸಿಕೊಂಡರೆ ಸೀರೆಯಲ್ಲೂ ಹೀಗೆ ಮಾಡಬಹುದು ಎಂದು ಅವರು ಬರೆದುಕೊಂಡಿದ್ದಾರೆ. ರುಕ್ಮಿಣಿ ವಿಜಯಕುಮಾರ್ ಭಾರತೀಯ ಖ್ಯಾತ ನೃತ್ಯ ಸಂಯೋಜಕಿ ಮತ್ತು ಭರತನಾಟ್ಯ ನರ್ತಕಿ. ಅವರು ದಕ್ಷಿಣ ಭಾರತದ ಅನೇಕ ಚಲನಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅಲ್ಲದೆ, ಕನ್ನಡ ಚಲನಚಿತ್ರಗಳಲ್ಲಿ ಅತ್ಯುತ್ತಮ ನೃತ್ಯ ಸಂಯೋಜಕರಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ವಿಡಿಯೋವನ್ನು ಏಪ್ರಿಲ್ 10 ರಂದು ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಮಾಡಿದ ತಕ್ಷಣವೇ ವೀಡಿಯೊ ವೈರಲ್ ಆಗಿದೆ. ಇಲ್ಲಿಯವರೆಗೆ ವೀಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಸುಮಾರು 6.5 ಲಕ್ಷ ಜನ ನೋಡಿದ್ದಾರೆ. ಮತ್ತು ವಿಡಿಯೋವನ್ನು ಇನ್ನಿತರ ಸಾಮಾಜಿಕ ಜಾಲತಾಣದಲ್ಲೂ ಶೇರ್ ಮಾಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ನರ್ತನ ಒಳ್ಳೆಯದಿದೆ ಅಕ್ಕಾ.. ಎಂದು ಕಮೆಂಟ್ ಮಾಡಿದ್ದಾರೆ. ಜತೆಗೆ ಇದು ಸ್ಪೂರ್ತಿ ನೀಡುವ ವಿಚಾರ ಎಂದೂ ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
View this post on Instagram