ಮತ್ತೊಂದು ಟಿವಿ ಶೋ ನಿರೂಪಣೆ ಒಪ್ಪಿಕೊಂಡ್ರಾ ಕಿಚ್ಚ ಸುದೀಪ್​? ಇದು ಬಿಗ್​ ಬಾಸ್​ಗಿಂತ ಡಿಫರೆಂಟ್!

ಬಿಗ್​ ಬಾಸ್​ನ ಈ ಹಿಂದಿನ ಸೀಸನ್​ಗಳಲ್ಲಿ ಸುದೀಪ್​ ಅವರು ಅಡುಗೆ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಅಡುಗೆಗೆ ಸಂಬಂಧಿಸಿದ ಒಂದು ಕಾರ್ಯಕ್ರಮವನ್ನು ಅವರು ನಡೆಸಿಕೊಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಮತ್ತೊಂದು ಟಿವಿ ಶೋ ನಿರೂಪಣೆ ಒಪ್ಪಿಕೊಂಡ್ರಾ ಕಿಚ್ಚ ಸುದೀಪ್​? ಇದು ಬಿಗ್​ ಬಾಸ್​ಗಿಂತ ಡಿಫರೆಂಟ್!
ಕಿಚ್ಚ ಸುದೀಪ್​
Edited By: ಆಯೇಷಾ ಬಾನು

Updated on: Mar 11, 2021 | 6:41 AM

ಕಿರುತೆರೆಯ ಜೊತೆಗೆ ಕಿಚ್ಚ ಸುದೀಪ್​ ಅವರಿಗೆ ಒಳ್ಳೆಯ ಬಾಂಧವ್ಯ ಇದೆ. ಈಗಾಗಲೇ ಬಿಗ್​ ಬಾಸ್​ ನಿರೂಪಣೆ ಮಾಡುತ್ತಿರುವ ಅವರು ಜನಮನ ಗೆದ್ದಿದ್ದಾರೆ. ಹಾಗೆಯೇ ಇನ್ನೊಂದು ಟಿವಿ ಕಾರ್ಯಕ್ರಮವನ್ನು ಕೂಡ ಕಿಚ್ಚ ಸುದೀಪ್​ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ನಟನೆ, ನಿರೂಪಣೆ, ನಿರ್ಮಾಣ, ನಿರ್ದೇಶನ ಮತ್ತು ಕ್ರಿಕೆಟ್​ನಲ್ಲಿ ಸುದೀಪ್​ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅದರ ಜೊತೆಗೆ ಅವರಿಗೆ ಅಡುಗೆ ಬಗ್ಗೆಯೂ ಅಷ್ಟೇ ಆಸಕ್ತಿ ಇದೆ. ಅನೇಕ ಸಂದರ್ಭದಲ್ಲಿ ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ. ಬಿಗ್​ ಬಾಸ್​ನ ಈ ಹಿಂದಿನ ಸೀಸನ್​ಗಳಲ್ಲಿ ಅವರು ಅಡುಗೆ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಅಡುಗೆಗೆ ಸಂಬಂಧಿಸಿದ ಒಂದು ಕಾರ್ಯಕ್ರಮವನ್ನು ಅವರು ನಡೆಸಿಕೊಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ನಾಲ್ಕು ಭಾಷೆಗಳಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆಯಂತೆ. ಕನ್ನಡದಲ್ಲಿ ಸುದೀಪ್​ ನಿರೂಪಣೆ ಮಾಡಿದರೆ, ತಮಿಳಿನಲ್ಲಿ ವಿಜಯ್​ ಸೇತುಪತಿ, ತೆಲುಗಿನಲ್ಲಿ ವೆಂಕಟೇಶ್​ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್​ ಸುಕುಮಾರ್​ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ ಎನ್ನಲಾಗಿದೆ. ಒಟ್ಟು 150ಕ್ಕೂ ಹೆಚ್ಚು ಎಪಿಸೋಡ್​ಗಳಲ್ಲಿ ಈ ಶೋ ಪ್ರಸಾರ ಆಗುವ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.

ಯಾವ ಚಾನಲ್​ನಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗಲಿದೆ? ಯಾವಾಗಿನಿಂದ ಶುರು ಆಗಲಿದೆ ಎಂಬಿತ್ಯಾದಿ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಸುದೀಪ್​ ಅವರಿಗೆ ಸಾಕಷ್ಟು ಅಡುಗೆ ಬರುತ್ತದೆ. ‘ನನಗೆ ಬರುವಷ್ಟು ಅಡುಗೆ ಯಾರಿಗಾದರೂ ಬಂದರೆ ಒಂದು ಹೋಟೆಲ್​ ನಡೆಸಬಹುದು’ ಎಂದು ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಲಾಂಚ್​ ವೇದಿಕೆಯಲ್ಲಿ ಸುದೀಪ್​ ಹೇಳಿದ್ದರು. ಒಂದು ವೇಳೆ ಅಡುಗೆ ಕಾರ್ಯಕ್ರಮದ ಸುದ್ದಿ ನಿಜವೇ ಹೌದಾದರೆ ಆ ಮೂಲಕ ಇನ್ನಷ್ಟು ಸಂಖ್ಯೆಯ ಅಭಿಮಾನಿಗಳನ್ನು ಸುದೀಪ್​ ಸಂಪಾದಿಸುವುದರಲ್ಲಿ ಅನುಮಾನವಿಲ್ಲ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಇತ್ತೀಚೆಗಷ್ಟೇ ಈ ಸಿನಿಮಾದ ಮೇಕಿಂಗ್​ ವಿಡಿಯೋ ಬಿಡುಗಡೆ ಆಗಿದ್ದು ಮಿಲಿಯನ್​ಗಟ್ಟಲೆ ವ್ಯೂಸ್​ ಪಡೆದುಕೊಂಡಿದೆ. ಶಿವ ಕಾರ್ತಿಕ್​ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಸುದೀಪ್​ಗೆ ಮಡೋನ್ನಾ ಸೆಬಾಸ್ಟಿಯನ್​ ನಾಯಕಿಯಾಗಿ ನಟಿಸಿದ್ದಾರೆ. ಏಪ್ರಿಲ್​ 29ರಂದು ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್​ ಧರಿಸೋ ವಾಚ್​ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?

Kichcha Sudeep: ನಟ ಕಿಚ್ಚ ಸುದೀಪ್​​ಗೆ ಸನ್ಮಾನ ಮಾಡಲಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us