Kichcha Sudeep: ಕಿಚ್ಚ ಸುದೀಪ್​ ಧರಿಸೋ ವಾಚ್​ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?

ಸುದೀಪ್​ ಧರಿಸಿದ್ದ ವಾಚ್​ ರಿಚರ್ಡ್​ ಮಿಲ್ಲೆ (Richard Mille) ಕಂಪೆನಿಗೆ ಸೇರಿದ್ದಾಗಿದೆ. ಸ್ವಿಸ್​ ಮೂಲದ ಈ ಕಂಪೆನಿ 2001ರಲ್ಲಿ ಸ್ಥಾಪನೆಗೊಂಡಿತ್ತು.

Kichcha Sudeep: ಕಿಚ್ಚ ಸುದೀಪ್​ ಧರಿಸೋ ವಾಚ್​ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?
ಸದೀಪ್ ಧರಿಸಿದ ವಾಚ್​
Follow us
| Updated By: ಮದನ್​ ಕುಮಾರ್​

Updated on: Mar 10, 2021 | 4:08 PM

ಸೆಲೆಬ್ರಿಟಿಗಳು ಧರಿಸುವ ಬಟ್ಟೆಯಿಂದ ಹಿಡಿದು ಅವರು ಹಾಕುವ ವಾಚ್, ಶೂ, ಚೈನ್​ ಮತ್ತಿತ್ಯಾದಿ ವಿಚಾರಗಳು ಫ್ಯಾನ್ಸ್​ ಗಮನ ಸೆಳೆಯುತ್ತಲೇ ಇರುತ್ತವೆ. ಸೆಲೆಬ್ರಿಟಿಗಳು ಸ್ಪೋರ್ಟ್ಸ್​ ಬಟ್ಟೆ ತೊಟ್ಟು ಜಿಮ್​ಗೆ ಹೋದರೆ ಅದರ ಬೆಲೆಯನ್ನು ಹುಡುಕಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಚ್ಚರಿ ಹೊರ ಹಾಕುವವರ ಪಟ್ಟಿ ದೊಡ್ಡದಿದೆ. ಈಗ ಇಂಥದ್ದೇ ವಿಚಾರಕ್ಕೆ ಕಿಚ್ಚ ಸುದೀಪ್​ ಸುದ್ದಿಯಾಗಿದ್ದಾರೆ. ಅವರು ಧರಿಸಿದ ದುಬಾರಿ ಬೆಲೆಯ ವಾಚ್​ ಎಲ್ಲರ ಕಣ್ಣು ಕುಕ್ಕಿದೆ. ಕಿಚ್ಚ ಸುದೀಪ್​ ಕಾರು ಹಾಗೂ ಬೈಕ್​ಗಳ ಬಗ್ಗೆ ಕ್ರೇಜ್​ ಹೊಂದಿದ್ದಾರೆ. ಅವರ ಕಾರ್​​ ಕಲೆಕ್ಷನ್​ ಎಲ್ಲರ ಗಮನ ಸೆಳೆಯುವಂಥದ್ದು. ಇದರ ಜತೆಗೆ ಅವರು ವಾಚ್​ ಪ್ರಿಯರು! ಅವರ ಬಳಿ ಸಾಕಷ್ಟು ದುಬಾರಿ ವಾಚ್​ಗಳಿವೆ ಅನ್ನೋದು ವಿಶೇಷ. ಇತ್ತೀಚೆಗೆ ಅವರು ಧರಿಸಿದ್ದ ವಾಚ್​ ಒಂದು ಎಲ್ಲರ ಗಮನ ಸೆಳೆದಿದೆ.

ಕಿಚ್ಚ ಸುದೀಪ್​ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಇದೇ ವಿಶೇಷ ದಿನದಂದು ಕನ್ನಡ ಸಂಘಟನೆಗಳೆಲ್ಲ ಸೇರಿ ಸುದೀಪ್​ಗೆ ಸನ್ಮಾನ ಮಾಡಿದ್ದವು. ಈ ವೇಳೆ ಸುದೀಪ್​ ಧರಿಸಿದ್ದ ವಾಚ್​ ಎಲ್ಲರ ಗಮನ ಸೆಳೆದಿದೆ. ಅವರು ಧರಿಸಿದ್ದ ವಾಚ್​ ಯಾವುದು? ಇದರ ಬೆಲೆ ಎಷ್ಟು ಎನ್ನುವ ಬಗ್ಗೆ ಅಭಿಮಾನಿಗಳು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಾರೆ.

ಸುದೀಪ್​ ಧರಿಸಿದ್ದ ವಾಚ್​ ರಿಚರ್ಡ್​ ಮಿಲ್ಲೆ (Richard Mille) ಕಂಪೆನಿಗೆ ಸೇರಿದ್ದಾಗಿದೆ. ಸ್ವಿಸ್​ ಮೂಲದ ಈ ಕಂಪೆನಿ 2001ರಲ್ಲಿ ಸ್ಥಾಪನೆಗೊಂಡಿತ್ತು. ಐಷಾರಾಮಿ ವಾಚ್​ಗಳನ್ನು ಸಿದ್ಧಪಡಿಸೋದಕ್ಕೆ ಈ ಕಂಪೆನಿ ಹೆಸರುವಾಸಿಯಾಗಿದೆ.

ಸುದೀಪ್​ ಧರಿಸಿರೋ ವಾಚ್​ ಬೆಲೆ 1.5 ಕೋಟಿ ರೂಪಾಯಿ ಇದೆ ಎಂದು ಅಂದಾಜಿಸಲಾಗಿದೆ. ಈ ಸಂಸ್ಥೆ ಸಿದ್ಧಪಡಿಸುವ ವಾಚ್​ನ ಆರಂಭಿಕ ಬೆಲೆ 1 ಕೋಟಿ ಮೇಲಿದೆ. ಸದ್ಯ, ಸುದೀಪ್​ ವಾಚ್​ ಮೌಲ್ಯ ಕೇಳಿ ಅನೇಕರು ಅಚ್ಚರಿ ಹೊರ ಹಾಕಿದ್ದಾರೆ. ಸುದೀಪ್​ಗೆ ಕಾರು, ಬೈಕ್ ಕ್ರೇಜ್ ಇದೆ ಎಂಬುದು ಅಭಿಮಾನಿಗಳಿಗೆ ಗೊತ್ತಿತ್ತು. ಇದರ ಜತೆಗೆ ವಾಚ್ ಕ್ರೇಜ್ ಇದೆ ಎಂಬ ವಿಚಾರವೂ ಈಗ ಅಭಿಮಾನಿಗಳಿಗೆ ತಿಳಿದಂತಾಗಿದೆ.

ಇದನ್ನೂ ಓದಿ: Kichcha Sudeep: ನಟ ಕಿಚ್ಚ ಸುದೀಪ್​​ಗೆ ಸನ್ಮಾನ ಮಾಡಲಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು