ಪುನೀತ್ ರಾಜ್ಕುಮಾರ್ ಅವರು ಅಕಾಲಿಕ ಮರಣ ಹೊಂದುತ್ತಾರೆ ಎಂದು ಯಾರೆಂದರೆ ಯಾರೂ ಭಾವಿಸಿರಲಿಲ್ಲ. ಅವರ ಆಪ್ತ ವರ್ಗದವರಿಗೆ, ಅಭಿಮಾನಿಗಳಿಗೆ ಈ ಸುದ್ದಿಯನ್ನು ಇನ್ನೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಸಾಕಷ್ಟು ಅಭಿಮಾನಿಗಳು ಪುನೀತ್ ಸಮಾಧಿಗೆ ತೆರಳಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸ್ಯಾಂಡಲ್ವುಡ್ನ ಸ್ಟಾರ್ ನಟ ಶ್ರೀಮುರಳಿ ಹಾಗೂ ಪುನೀತ್ ಆಪ್ತರಾಗಿದ್ದರು. ಅಪ್ಪು ನಿಧನ ಹೊಂದಿದ ವಿಚಾರ ಶ್ರೀಮುರಳಿಗೆ ಬೇಸರಮೂಡಿಸಿದೆ. ಡಿಸೆಂಬರ್ 17 ಅವರ ಬರ್ತ್ಡೇ. ಪುನೀತ್ ಇಲ್ಲ ಎಂಬ ಕಾರಣಕ್ಕೆ ಶ್ರೀಮುರಳಿ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಡಿಸೆಂಬರ್ 3ರಂದು ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಸಾಕಷ್ಟು ಆ್ಯಕ್ಷನ್ ದೃಶ್ಯಗಳನ್ನು ಹೊಂದಿರುವ ಈ ಚಿತ್ರ ಕೋಟ್ಯಂತರ ರೂಪಾಯಿ ಕಮಾಯಿ ಮಾಡಿದೆ. ಈ ಕಾರಣಕ್ಕೆ ಅವರಿಗೆ ಈ ಬಾರಿಯ ಬರ್ತ್ಡೇ ವಿಶೇಷವಾಗಬೇಕಿತ್ತು. ಆದರೆ, ಆ ರೀತಿ ಆಗಿಲ್ಲ. ಪುನೀತ್ ನಿಧನದ ನೋವು ಅವರನ್ನು ಇನ್ನೂ ಕಾಡುತ್ತಿದೆ. ಹೀಗಾಗಿ, ಬರ್ತ್ಡೇ ಆಚರಣೆ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಶ್ರೀಮುರಳಿ ಬರ್ತ್ಡೇ ದಿನ ಅವರ ಅಭಿಮಾನಿಗಳು ಮನೆಯ ಮುಂದೆ ಜಮಾಯಿಸುತ್ತಿದ್ದರು. ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಅವರು ಕೂಡ ಅಭಿಮಾನಿಗಳ ಜತೆಗೂಡಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದರು. ಆದರೆ, ಪುನೀತ್ ಸಾವಿನಿಂದ ಇಡೀ ಕರ್ನಾಟಕಕ್ಕೆ ಸೂತಕದ ಛಾಯೆ ಆವರಿಸಿದೆ.
‘ನನ್ನ ಪ್ರೀತಿಯ ಅಭಿಮಾನಿಗಳೇ. ಈ ಬಾರಿ ನಿಮ್ಮೊಂದಿಗೆ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣವೇನೆಂದು ನಿಮಗೆ ಗೊತ್ತಿರುವುದೆಂದು ಭಾವಿಸುವೆ. ನಾನು ಬೆಂಗಳೂರಿನಲ್ಲೂ ಇರುವುದಿಲ್ಲ. ಸದಾ ನಿಮ್ಮ ಪ್ರೀತಿ ಹಾಗು ಆಶೀರ್ವಾದವನ್ನು ಬಯಸುವ ನಿಮ್ಮ, ಶ್ರೀಮುರಳಿ (ಅಭಿಮಾನಿಗಳ ಅಭಿಮಾನಿ)’ ಎಂದು ಶ್ರೀಮುರಳಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ನನ್ನ ಪ್ರೀತಿಯ ಅಭಿಮಾನಿಗಳೆ. ಈ ಬಾರಿ ನಿಮ್ಮೊಂದಿಗೆ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣವೇನೆಂದು ನಿಮಗೆ ಗೊತ್ತಿರುವುದೆಂದು ಭಾವಿಸುವೆ. ನಾನು ಬೆಂಗಳೂರಿನಲ್ಲೂ ಇರುವುದಿಲ್ಲ. ಸದಾ ನಿಮ್ಮ ಪ್ರೀತಿ ಹಾಗು ಆಶೀರ್ವಾದವನ್ನು ಬಯಸುವ… ನಿಮ್ಮ ,
ಶ್ರೀಮುರಳಿ (ಅಭಿಮಾನಿಗಳ ಅಭಿಮಾನಿ)— #SRIIMURALI (@SRIMURALIII) December 16, 2021
ಇದನ್ನೂ ಓದಿ: ‘ಮದಗಜ’ ಫಸ್ಟ್ ಡೇ ಕಲೆಕ್ಷನ್ ಎಷ್ಟು ಕೋಟಿ? ಶ್ರೀಮುರಳಿ ಚಿತ್ರದ ಬಾಕ್ಸ್ ಆಫೀಸ್ ಲೆಕ್ಕ ಇಲ್ಲಿದೆ
ಮುಂದುವರಿದ ‘ಮದಗಜ’ ಆರ್ಭಟ; 2ನೇ ದಿನಕ್ಕೆ ಶ್ರೀಮುರಳಿ ಚಿತ್ರದ ಕಲೆಕ್ಷನ್ ಎಷ್ಟು?