ರಾಜ್ ಬಿ. ಶೆಟ್ಟಿ ನಟನೆಯ ಮೊದಲ ಮಲಯಾಳಂ ಸಿನಿಮಾ ಅನೌನ್ಸ್​; ವೆಲ್ಕಮ್ ಎಂದ ಮಮ್ಮೂಟಿ

‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ರುದ್ರಾವತಾರ ತೋರಿದ್ದರು. ಈಗ ‘ಟರ್ಬೋ’ ಸಿನಿಮಾದಲ್ಲಿ ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.  

ರಾಜ್ ಬಿ. ಶೆಟ್ಟಿ ನಟನೆಯ ಮೊದಲ ಮಲಯಾಳಂ ಸಿನಿಮಾ ಅನೌನ್ಸ್​; ವೆಲ್ಕಮ್ ಎಂದ ಮಮ್ಮೂಟಿ
ಟರ್ಬೋ

Updated on: Nov 22, 2023 | 7:00 PM

ನಟ ಮಮ್ಮೂಟಿ ಅವರು ಮಲಯಾಳಂನಲ್ಲಿ ಸಖತ್ ಫೇಮಸ್. ಅವರು ‘ಟರ್ಬೋ’ ಸಿನಿಮಾದಲ್ಲಿ (Turbo Movie) ನಟಿಸುತ್ತಿದ್ದಾರೆ. ಈಗ ಈ ಚಿತ್ರಕ್ಕೆ ಕನ್ನಡದ ಜನಪ್ರಿಯ ನಟ ರಾಜ್ ಬಿ. ಶೆಟ್ಟಿ ಸೇರ್ಪಡೆ ಆಗಿದ್ದಾರೆ. ಮಮ್ಮೂಟಿ ಅವರೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅವರ ಕಡೆಯಿಂದಲೇ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ‘ರಾಜ್ ಬಿ. ಶೆಟ್ಟಿ ಅವರಿಗೆ ಸ್ವಾಗತ’ ಎಂದು ಬರೆಯಲಾಗಿದೆ.

‘ಅಪಾರ ಟ್ಯಾಲೆಂಟೆಂಡ್ ನಟ ರಾಜ್ ಬಿ ಶೆಟ್ಟಿ ಅವರಿಗೆ ಟರ್ಬೋ ಚಿತ್ರಕ್ಕೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ ಮಮ್ಮೂಟಿ. ರಾಜ್ ಬಿ ಶೆಟ್ಟಿ ಅವರು ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು. ಇದಾದ ಬಳಿಕ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ನಿರ್ದೇಶಿಸಿದ್ದಾರೆ. ಈಗ ಪರಭಾಷೆಯವರೂ ಅವರ ಟ್ಯಾಲೆಂಟ್​ನ ಗುರುತಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಅವರ ನಟನೆಯ ‘ಟೋಬಿ’ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆಯಿತು. ಅವರು ನಟಿಸಿ, ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆಹನಿಯೇ’ ಈ ವಾರ ರಿಲೀಸ್ ಆಗುತ್ತಿದೆ.

‘ಟರ್ಬೋ’ ಸಿನಿಮಾ ವೈಶಾಖ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ವೈಶಾಖ್ ಹಾಗೂ ಮಮ್ಮೂಟಿ ಜೊತೆ ಅವರು ‘ಪೊಕಿರಿ ರಾಜ’ ಹಾಗೂ ‘ಮಧುರ ರಾಜ’ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ಆ್ಯಕ್ಷನ್ ಕಾಮಿಡಿ ಶೈಲಿಯಲ್ಲಿ ಮೂಡಿಬರುತ್ತಿದೆ.

ರಾಜ್ ಬಿ. ಶೆಟ್ಟಿ ಅವರಿಗೆ ಕನ್ನಡದಲ್ಲಿ ಸಾಕಷ್ಟು ಬೇಡಿಕೆ ಇದೆ. ಕಾಮಿಡಿ ಸಿನಿಮಾಗಳ ಮೂಲಕ ಜನರ ಎದುರು ಬಂದ ಅವರು ಆ ಬಳಿಕ ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ರುದ್ರಾವತಾರ ತೋರಿದ್ದರು. ಈಗ ‘ಟರ್ಬೋ’ ಸಿನಿಮಾದಲ್ಲಿ ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: ಸಿನಿಮಾಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಹೆಸರಿಟ್ಟಿದ್ದೇಕೆ? ವಿವರಿಸಿದ್ದಾರೆ ರಾಜ್ ಬಿ ಶೆಟ್ಟಿ

2018ರಲ್ಲಿ ಈ ಮೊದಲು ‘ಟರ್ಬೋ ಪೀಟರ್’ ಸಿನಿಮಾ ಅನೌನ್ಸ್ ಆಗಿತ್ತು. ಈ ಚಿತ್ರದಲ್ಲಿ ಜಯಸೂರ್ಯ ನಟಿಸಬೇಕಿತ್ತು. ಆದರೆ, ಈ ಸಿನಿಮಾ ಫೈನಲ್ ಆಗಿತ್ತು. ಆ ಚಿತ್ರಕ್ಕೂ ಈಗಿನ ‘ಟರ್ಬೋ’ಗೂ ಯಾವುದೇ ಸಂಬಂಧ ಇಲ್ಲ ಎಂದು ತಂಡ ಹೇಳಿದೆ. ‘ಟರ್ಬೋ’ ಚಿತ್ರವನ್ನು ದುಲ್ಕರ್ ಸಲ್ಮಾನ್ ಪ್ರೊಡಕ್ಷನ್ ಹೌಸ್ ಹಂಚಿಕೆ ಮಾಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ