ಸ್ಯಾಂಡಲ್ವುಡ್ನ ಖ್ಯಾತ ನಟಿ ಮೇಘನಾ ರಾಜ್ (Meghana Raj) ಅವರು ಇತ್ತೀಚೆಗೆ ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಪತಿ ಚಿರಂಜೀವಿ ಸರ್ಜಾ (Chiranjeevi Sarja) ನಿಧನದ ನಂತರ ಅವರ ಬದುಕಿನಲ್ಲಿ ಕತ್ತಲು ಆವರಿಸಿತ್ತು. ಬಳಿಕ ಅವರ ಮೊಗದಲ್ಲಿ ನಗು ಮೂಡಿಸಿದ್ದು ಪುತ್ರ ಜ್ಯೂ. ಚಿರು (Jr Chiru) ಆಗಮನ. ಆ ನಂತರ ಅವರ ಇಡೀ ಕುಟುಂಬಕ್ಕೆ ಕೊರೊನಾ ವೈರಸ್ ಕಾಟ ಕೊಟ್ಟಿತ್ತು. ಇಷ್ಟೆಲ್ಲ ಸಂಕಷ್ಟಗಳನ್ನು ಎದುರಿಸಿದ ಅವರು ಈಗ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಸುದ್ದಿ ಕೇಳಿದರೆ ಅವರ ಅಭಿಮಾನಿಗಳು ಖುಷಿ ಆಗುವುದು ಗ್ಯಾರಂಟಿ. ಹೌದು, ಮೇಘನಾ ರಾಜ್ ಮತ್ತೆ ಕ್ಯಾಮೆರಾ ಎದುರಿಸುತ್ತಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತ ಬ್ಯುಸಿ ಆಗಿದ್ದ ಮೇಘನಾ ಅವರು ಕಳೆದೊಂದು ವರ್ಷದಿಂದೀಚೆಗೆ ನಟನೆಯಿಂದ ದೂರ ಉಳಿದುಕೊಂಡಿದ್ದರು. ಮದುವೆ, ಸಂಸಾರದ ಕಡೆಗೆ ಅವರು ಗಮನ ಹರಿಸಿದ್ದರು. ಬದುಕಿನಲ್ಲಿ ನಡೆದ ಕಹಿ ಘಟನೆಗಳಿಂದ ಅವರು ಸುಧಾರಿಸಿಕೊಳ್ಳಲು ಕೂಡ ಸಮಯ ಹಿಡಿಯಿತು. ಈಗ ಆ ಎಲ್ಲ ಸಂಕಷ್ಟಗಳನ್ನು ಎದುರಿಸಿ ಬಂದಿರುವ ಮೇಘನಾ ರಾಜ್ ಅವರು ಮತ್ತೆ ನಟನೆಗೆ ಮರಳಿದ್ದಾರೆ.
ಮೇಘನಾ ರಾಜ್-ಚಿರಂಜೀವಿ ಸರ್ಜಾ ದಂಪತಿಯ ಪುತ್ರ ಜ್ಯೂ. ಚಿರು ಜನಿಸಿ 9 ತಿಂಗಳು ಕಳೆದಿವೆ. ಈ ಸಂದರ್ಭಕ್ಕೆ ಸರಿಯಾಗಿ ಮೇಘನಾ ಈ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಅವರು, ‘ಜ್ಯೂ. ಚಿರುಗೆ ಈಗ 9 ತಿಂಗಳು ಆಯಿತು. ಒಂದು ವರ್ಷದ ಬಳಿಕ ಕ್ಯಾಮೆರಾ ಎದುರಿಸುವ ಮೂಲಕ ಈ ಕ್ಷಣವನ್ನು ನಾನು ಸೆಲೆಬ್ರೇಟ್ ಮಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಶೂಟಿಂಗ್ ಸೆಟ್ನಲ್ಲಿ ಡೈಲಾಗ್ ಓದುತ್ತ ನಿಂತಿರುವ ಮೇಘನಾ ಅವರನ್ನು ಕಂಡು ಅಭಿಮಾನಿಗಳು ಖುಷಿ ಆಗಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕರು ಮೇಘನಾಗೆ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಕಮ್ಬ್ಯಾಕ್ ಮಾಡುತ್ತಿರುವ ಅವರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಗುತ್ತಿದೆ. ತಾವು ಕ್ಯಾಮೆರಾ ಎದುರಿಸುತ್ತಿರುವುದು ಯಾವ ಪ್ರಾಜೆಕ್ಟ್ಗಾಗಿ ಎಂಬ ಮಾಹಿತಿಯನ್ನು ಮೇಘನಾ ಸದ್ಯಕ್ಕೆ ಬಿಟ್ಟುಕೊಟ್ಟಿಲ್ಲ. ಸಿನಿಮಾ, ಜಾಹೀರಾತು ಅಥವಾ ಫೋಟೋಶೂಟ್ ಈ ಪೈಕಿ ಯಾವುದಕ್ಕಾಗಿ ಶೂಟಿಂಗ್ ಮಾಡುತ್ತಿದ್ದೀರಿ ಎಂದು ಅಭಿಮಾನಿಗಳು ಕೌತುಕದ ಪ್ರಶ್ನೆ ಇಟ್ಟಿದ್ದಾರೆ.
ಇದನ್ನೂ ಓದಿ:
Meghana Raj: ಮೇಘನಾ ರಾಜ್ ಜನ್ಮದಿನಕ್ಕೆ ವೈರಲ್ ಆಯ್ತು ಜ್ಯೂನಿಯರ್ ಚಿರು ವಿಡಿಯೋ
Meghana Raj: ಚಿರು ಐ ಲವ್ ಯೂ, ಹಿಂದಿರುಗಿ ಬಾ; ಭಾವುಕರಾದ ನಟಿ ಮೇಘನಾ ರಾಜ್
Published On - 5:41 pm, Thu, 22 July 21