ಬೆಳಕಿನ ಹಬ್ಬ ದೀಪಾವಳಿ ಬಂದಿದೆ. 2020ರಂತೆ 2021ರಲ್ಲೂ ಸಾಕಷ್ಟು ಕಹಿಘಟನೆಗಳು ನಡೆದವು. ಮುಂದಿನ ದಿನಗಳಲ್ಲಿ ಇದು ಮರುಕಳಿಸದಿರಲಿ ಎಂದು ಈ ಹಬ್ಬದಂದು ಎಲ್ಲರೂ ಬೇಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ದೀಪ ಹಚ್ಚುವ ಮೂಲಕ ಹಬ್ಬವನ್ನು ಜೋರಾಗಿ ಆಚರಿಸಲಾಗುತ್ತಿದೆ. ನಟ-ನಟಿಯರು ಕೂಡ ಹಬ್ಬದ ಆಚರಣೆಯ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈಗ ನಟಿ ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾ ಕೂಡ ಚಿರು-ಮೇಘನಾ ಅಭಿಮಾನಿಗಳಿಗೆ ವಿಶ್ ಮಾಡಿದ್ದಾನೆ.
ರಾಯನ್ ರಾಜ್ ಸರ್ಜಾಗೆ ಇತ್ತೀಚೆಗಷ್ಟೇ ಒಂದು ವರ್ಷ ತುಂಬಿತ್ತು. ಮೇಘನಾ ರಾಜ್ ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಮನೆಯನ್ನು ಕಾಡಿನ ರೀತಿಯಲ್ಲಿ ಅಲಂಕರಿಸಿ, ರಾಯನ್ ಬರ್ತ್ಡೇ ಸೆಲಬ್ರೇಷನ್ ಮಾಡಲಾಗಿತ್ತು. ಮಗ ಜನಿಸಿದ ನಂತರ ಮೇಘನಾ ಬಾಳಿನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅವರು ಮತ್ತೆ ಮೊದಲಿನ ಖುಷಿಗೆ ಮರಳಿದ್ದಾರೆ. ಈ ಎಲ್ಲಾ ಕಾರಣಕ್ಕೆ ಮಗನ ಮೇಲೆ ಮೇಘನಾಗೆ ಅಪಾರ ಪ್ರೀತಿ. ಹೀಗಾಗಿ, ಮಗನ ಫೋಟೋಗಳನ್ನು ಅವರು ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಈಗ ರಾಯನ್ ಅವರ ವಿವಿಧ ಫೋಟೋವನ್ನು ಮೇಘನಾ ಪೋಸ್ಟ್ ಮಾಡಿದ್ದಾರೆ. ‘ರಾಯನ್ನ ವಿವಿಧ ಫೋಟೋಗಳು ನಿಮಗೆ ದೀಪಾವಳಿಯ ಶುಭಾಶಯ ಹೇಳುತ್ತಿವೆ. ಈ ಚಿಕ್ಕ ಹುಡುಗ ನನ್ನ ಜೀವನದ ಅದ್ಭುತ. ಈ ಹಬ್ಬವು ಎಲ್ಲರ ಬಾಳಲ್ಲಿ ಬೆಳಕು ಹಾಗೂ ಸಂತೋಷ ತರಲಿ’ ಎಂದು ಅವರು ಬರೆದುಕೊಂಡಿದ್ದಾರೆ.
ಮೇಘನಾ ರಾಜ್-ಚಿರಂಜೀವಿ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾ ಅ.22ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಮೇಘನಾ ರಾಜ್ ಮನೆಯಲ್ಲಿ ಆಚರಿಸಲಾಗಿತ್ತು. ಕಾಡಿನ ಥೀಮ್ನಲ್ಲಿ ಅದ್ದೂರಿಯಾಗಿ ಡೆಕೊರೇಷನ್ ಮಾಡಲಾಗಿತ್ತು. ‘ರಾಯನ್ ಕಿಂಗ್ಡಮ್ಗೆ ಸ್ವಾಗತ’ ಎಂಬ ಫಲಕ ಗಮನ ಸೆಳೆದಿತ್ತು. ಚಿತ್ರರಂಗದ ಸ್ನೇಹಿತರು ಮತ್ತು ಕುಟುಂಬದವರಿಗೆ ಆಹ್ವಾನ ನೀಡಲಾಗಿತ್ತು. ಜ್ಯೂ. ಚಿರುಗೆ ಎಲ್ಲರೂ ಶುಭ ಕೋರಿದ್ದರು.
ಇದನ್ನೂ ಓದಿ: Raayan Raj Sarja: ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬಕ್ಕೆ ಧ್ರುವ ಬಂದಿಲ್ಲ; ಕಾರಣ ತಿಳಿಸಿದ ಮೇಘನಾ ರಾಜ್
Published On - 3:17 pm, Thu, 4 November 21