ನಟಿ ಮೇಘನಾ ರಾಜ್ (Meghana Raj) ಬಾಳಲ್ಲಿ ಇತ್ತೀಚೆಗೆ ಎಲ್ಲವೂ ಒಳ್ಳೆಯದೇ ಆಗುತ್ತಿದೆ. ಚಿರಂಜೀವಿ ಸರ್ಜಾ ಮೃತಪಟ್ಟ ನಂತರ ಅವರಿಗೆ ದಿಕ್ಕೇ ತೋಚದಂತಾಗಿತ್ತು. ಚಿರು ಮೃತಪಡುವಾಗ ಅವರು ಪ್ರೆಗ್ನೆಂಟ್ ಆಗಿದ್ದರು. ನಂತರ ರಾಯನ್ (Raayan Raj Sarja ) ಹುಟ್ಟಿದ. ಈಗ ಆತನನ್ನು ಶಾಲೆಗೆ ಸೇರಿಸುವ ಕೆಲಸ ಆಗಿದೆ. ಈ ಖುಷಿಯನ್ನು ಮೇಘನಾ ರಾಜ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. ನಟಿಯ ಸಂಭ್ರಮದಲ್ಲಿ ಅಭಿಮಾನಿಗಳು ಕೂಡ ಕೈ ಜೋಡಿಸಿದ್ದಾರೆ. ಹಾಗಾದರೆ ರಾಯನ್ ರಾಜ್ ಸರ್ಜಾಗೆ ಈಗ ವಯಸ್ಸೆಷ್ಟು? ಆ ಬಗ್ಗೆ ಇಲ್ಲಿದೆ ಮಾಹಿತಿ.
ಮೇ 31ರಂದು ರಾಜ್ಯದ ಎಲ್ಲ ಕಡೆಗಳಲ್ಲಿ ಶಾಲೆ ಆರಂಭ ಆಗಿದೆ. ಮೊದಲ ದಿನ ಎಲ್ಲ ಕಡೆಗಳಲ್ಲಿ ಶಾಲಾ ಆರಂಭೋತ್ಸವ ಮಾಡಲಾಗಿದೆ. ಮೇಘನಾ ರಾಜ್ ಕೂಡ ಮಗನನ್ನು ಶಾಲೆಗೆ ಸೇರಿಸಿ ಸಂಭ್ರಮಿಸಿದ್ದಾರೆ. ‘ಇಂದು ವಿಶೇಷ ದಿನ. ರಾಯನ್ಗೆ ಶಾಲೆಯ ಮೊದಲ ದಿನ. ನಾನು ಅನುಭವಿಸಿದ ಭಾವನೆಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಶಿಕ್ಷಣ, ಜ್ಞಾನ ಮತ್ತು ಮುಖ್ಯವಾಗಿ ಜೀವನ ಪಾಠಗಳ ಕಡೆಗೆ ಅವನ ಮೊದಲ ಹೆಜ್ಜೆ. ನಮ್ಮ ಪುಟ್ಟ ಮಗುವಿಗೆ ನಿಮ್ಮೆಲ್ಲರ ಶುಭಾಶಯ ಮತ್ತು ಆಶೀರ್ವಾದ ಬೇಕು’ ಎಂದು ಬರೆದುಕೊಂಡಿದ್ದಾರೆ.
ರಾಯನ್ಗೆ ಈಗ ಎರಡು ವರ್ಷ ಏಳು ತಿಂಗಳು. ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಮೇಘನಾ ರಾಜ್ ಅವರು ರಾಯನ್ನ ಮಾಂಟೆಸ್ಸರಿ ಶಾಲೆಗೆ ಸೇರಿಸಿದ್ದಾರೆ. ಮೇಘನಾ ರಾಜ್ ಮಗ ರಾಯನ್ ಉತ್ತಮ ಶಿಕ್ಷಣ ಪಡೆಯಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಇದನ್ನೂ ಓದಿ: Meghana Raj: ಬರ್ತ್ಡೇ ಸಂಭ್ರಮದಲ್ಲಿ ಪತಿ ಚಿರು ಸರ್ಜಾ ನೆನಪಿಸಿಕೊಂಡ ಮೇಘನಾ ರಾಜ್
ಕೆಲವು ವರ್ಷಗಳಿಂದ ನಟಿ ಮೇಘನರಾಜ್ ಯಾವುದೇ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ಅವರು ಮರಳಿ ಚಿತ್ರರಂಗಕ್ಕೆ ಬರಬೇಕು ಎಂಬುದು ಅಭಿಮಾನಿಗಳ ಕೋರಿಕೆ ಆಗಿತ್ತು. ಈ ಕೋರಿಕೆ ಈಡೇರಿದೆ. ‘ತತ್ಸಮ ತದ್ಭವ’ ಸಿನಿಮಾ ಮೂಲಕ ಅವರು ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಮೇಘನಾ ರಾಜ್ ಗೆಳೆಯ ಪನ್ನಗ ಭರಣ ಅವರು ಈ ಚಿತ್ರಕ್ಕೆ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಇದೆ. ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 am, Fri, 2 June 23