Meghana Raj: ‘ನನ್ನ ಪತಿ ಕಾಣೆಯಾಗಿದ್ದಾರೆ’; ‘ತತ್ಸಮ ತದ್ಭವ’ ಟೀಸರ್​ನಲ್ಲಿ ಮೇಘನಾ ರಾಜ್ ಸಸ್ಪೆನ್ಸ್ ಕಹಾನಿ

|

Updated on: Jul 17, 2023 | 10:52 AM

ಚಿತ್ರರಂಗದ ಕೆಲಸಗಳಲ್ಲಿ ಮೇಘನಾ ರಾಜ್ ತೊಡಗಿಕೊಂಡಿದ್ದಾರೆ. ಹೀಗಿರುವಾಗಲೇ ಅವರ ಕಂಬ್ಯಾಕ್ ಸಿನಿಮಾ ‘ತತ್ಸಮ ತದ್ಭವ’ ಚಿತ್ರದ ಟೀಸರ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿದೆ.

Meghana Raj: ‘ನನ್ನ ಪತಿ ಕಾಣೆಯಾಗಿದ್ದಾರೆ’; ‘ತತ್ಸಮ ತದ್ಭವ’ ಟೀಸರ್​ನಲ್ಲಿ ಮೇಘನಾ ರಾಜ್ ಸಸ್ಪೆನ್ಸ್ ಕಹಾನಿ
ಮೇಘನಾ ರಾಜ್
Follow us on

ಮೇಘನಾ ರಾಜ್ (Meghana Raj) ಅವರ ಕಂಬ್ಯಾಕ್ ಸಿನಿಮಾ ‘ತತ್ಸಮ ತದ್ಭವ’ (Tatsama Tadbhava Movie) ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ನಿರೀಕ್ಷೆಯನ್ನು ದ್ವಿಗುಣ ಮಾಡುವ ರೀತಿಯಲ್ಲಿ ಈ ಚಿತ್ರದ ಟೀಸರ್ ಮೂಡಿ ಬಂದಿದೆ. ಇಂದು (ಜುಲೈ 17) ಬೆಳಿಗ್ಗೆ 10:31ಕ್ಕೆ ಟೀಸರ್ ರಿಲೀಸ್ ಆಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಈ ಟೀಸರ್ ಇದೆ. ಮೇಘನಾ ರಾಜ್ ಅವರ ನಟನೆ ಎಲ್ಲರ ಗಮನ ಸೆಳೆದಿದೆ. ಆಗಸ್ಟ್​ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಟೀಸರ್​​ನಲ್ಲಿ ಮಾಹಿತಿ ನೀಡಲಾಗಿದೆ.

ಇದೊಂದು ಮಿಸ್ಸಿಂಗ್ ಕೇಸ್​ನ ಕಥೆ. ‘ನನ್ನ ಹೆಸರು ಆರಿಕಾ. ನನ್ನ ಪತಿ ಕಾಣೆ ಆಗಿದ್ದಾರೆ’ ಎಂದು ಮೇಘನಾ ರಾಜ್ ಬಂದು ದೂರು ನೀಡುತ್ತಾರೆ. ಈ ಕೇಸ್​ನ ಕೈಗೆತ್ತಿಕೊಳ್ಳೋದು ಪ್ರಜ್ವಲ್ ದೇವರಾಜ್​. ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್​ನ ಉದ್ದಕ್ಕೂ ಸಸ್ಪೆನ್ಸ್ ಅಂಶ ಇದೆ. ಕಾಣೆಯಾದವರ ಹುಡುಕುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಇದರ ಜೊತೆಗೆ ಒಂದಷ್ಟು ಥ್ರಿಲ್ಲಿಂಗ್ ಅಂಶ ಸೇರಿಸಲಾಗಿದೆ.

ನಟಿ ಮೇಘನಾ ರಾಜ್ ಬದುಕಲ್ಲಿ ಇತ್ತೀಚೆಗೆ ಹಲವು ಏರುಪೇರುಗಳು ಉಂಟಾದವು. ಚಿರಂಜೀವಿ ಮೃತಪಟ್ಟ ಬಳಿಕ ಅವರು ಸಾಕಷ್ಟು ದುಃಖ ನುಂಗಿದರು. ರಾಯನ್ ರಾಜ್ ಸರ್ಜಾ ಜನಿಸಿದ ಬಳಿಕ ಅವರ ಬದುಕಲ್ಲಿ ಮತ್ತೆ ಖುಷಿ ಮೂಡಿದೆ. ಈಗ ಮೇಘನಾ ರಾಜ್ ಅವರು ಸಂತೋಷದಿಂದ ಇದ್ದಾರೆ. ಚಿತ್ರರಂಗದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಹೀಗಿರುವಾಗಲೇ ಅವರ ಕಂಬ್ಯಾಕ್ ಸಿನಿಮಾ ‘ತತ್ಸಮ ತದ್ಭವ’ ಚಿತ್ರದ ಟೀಸರ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ: ಚಿರಂಜೀವಿ ಸರ್ಜಾ ಪುಣ್ಯತಿಥಿ: ಪತಿ ಅಗಲಿಕೆ ಬಳಿಕ ಮೇಘನಾ ರಾಜ್ ವೈಯಕ್ತಿಕ ಜೀವನದ ಬಗ್ಗೆ ಕೇಳಿ ಬಂದಿತ್ತು ದೊಡ್ಡ ವದಂತಿ

ವಿಶಾಲ್ ಆತ್ರೇಯ ಅವರು ‘ತತ್ಸಮ ತದ್ಭವ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಪನ್ನಗ ಭರಣ ಬಂಡವಾಳ ಹೂಡಿದ್ದಾರೆ. ಸ್ಫೂರ್ತಿ ಅನಿಲ್ ಅವರು ಪನ್ನಗ ಭರಣ ಜೊತೆ ನಿರ್ಮಾಣದಲ್ಲಿ ಸೇರಿಕೊಂಡಿದ್ದಾರೆ.. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಇದೆ. ಪ್ರಜ್ವಲ್ ದೇವರಾಜ್ ಸೇರಿ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:46 am, Mon, 17 July 23