ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ (Sandalwood) ಇತ್ತೀಚೆಗೆ ಸೆನ್ಸೇಷನಲ್ ಮೂಡಿಸಿದ ಜೋಡಿಗಳ ಸಾಲಿನಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಇದ್ದಾರೆ (Milana Nagaraj and Darling Krishna). ಲವ್ ಮಾಕ್ಟೇಲ್ (Love Mocktail) ಚಿತ್ರದ ಮೂಲಕ ಮೋಡಿ ಮಾಡಿದ್ದ ಈ ಇಬ್ಬರೂ ನಿಜ ಜೀವನದಲ್ಲಿ ಹಸೆಮಣೆಗೇರುವ ಕಾಲ ಸನ್ನಿಹಿತವಾಗಿದೆ. ತಮ್ಮ ಮದುವೆಯ ಬಗ್ಗೆ ಕಳೆದ ವರ್ಷಾಂತ್ಯದಲ್ಲೇ ದಿನ ನಿಗದಿ ಮಾಡಿದ್ದ ಇವರು ಮುಂದಿನ ಭಾನುವಾರ (ಫೆಬ್ರವರಿ 14) ಪ್ರೇಮಿಗಳ ದಿನಾಚರಣೆಯಂದೇ (Valentine’s Day) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸದ್ಯ ಮದುವೆಗೆ ಸಂಬಂಧಿಸಿದ ಪೂಜಾ ಕಾರ್ಯಗಳು ಆರಂಭವಾಗಿದ್ದು ಮಿಲನಾ ನಾಗರಾಜ್ ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಮದುವೆಯ ಪೂಜಾ ಕಾರ್ಯಕ್ರಮ ಶುರುವಾಗಿದೆ ಎಂಬ ತಲೆಬರಹದಡಿ ವಿಡಿಯೋ ಹಂಚಿಕೊಂಡಿರುವ ಮಿಲನಾ ನಾಗರಾಜ್, ಆ ವಿಡಿಯೋದಲ್ಲಿ ದೇವರ ಗುಡಿಯೊಂದರಲ್ಲಿ ಪೂಜೆ ಮಾಡುತ್ತಿರುವುದು ಕಂಡುಬಂದಿದೆ. ತಲೆಯ ಮೇಲೆ ಬುತ್ತಿಯೊಂದನ್ನು ಹೊತ್ತು ದೇವರ ಗುಡಿ ಪ್ರವೇಶಿಸಿರುವ ಮಿಲನಾ, ಬಾಳೆ ಎಲೆ ಹಾಸಿದ್ದಲ್ಲಿಗೆ ಹೋಗಿ ದೇವರ ಮೂರ್ತಿಗೆ ಆರತಿ ಎತ್ತಿ ಪೂಜೆ ಸಲ್ಲಿಸಿದ್ದಾರೆ.
ಲವ್ ಮಾಕ್ಟೈಲ್ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ ಈ ಜೋಡಿ, ಸದ್ಯದಲ್ಲೇ ಲವ್ ಮಾಕ್ಟೈಲ್ 2 ಸಿನಿಮಾದ ಮೂಲಕ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುವುದು ಈಗಾಗಲೇ ನಿರ್ಧರಿತವಾಗಿದೆ. ಪ್ರೇಮಿಗಳ ದಿನಾಚರಣೆಯಂದು ವೈವಾಹಿಕ ಜೀವನಕ್ಕೆ ಪ್ರವೇಶ ನೀಡುತ್ತಿರುವ ಇವರಿಬ್ಬರಿಗೂ ಅಭಿಮಾನಿಗಳು ಈಗಾಗಲೇ ಶುಭ ಹಾರೈಸಿದ್ದು, ಸುಂದರ ಜೋಡಿ ಸದಾ ಸಂತಸದಿಂದಿರಲಿ ಎಂದು ಶುಭ ಹಾರೈಸಿದ್ದಾರೆ. ಈ ಮೂಲಕ ಚಂದನವನದ ಚೆಂದದ ಜೋಡಿ ನವ ಬದುಕು ಆರಂಭಿಸುವ ಕಾಲ ಹತ್ತಿರಕ್ಕೆ ಬಂದಿದೆ.
Vikrant Rona: 3ಡಿ ರೂಪದಲ್ಲಿ ತೆರೆಗಪ್ಪಳಿಸಲಿದೆ ಆರಡಿ ಕಟೌಟ್ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ
Published On - 8:00 pm, Tue, 9 February 21