ರಿಷಬ್ ತಂದೆ ಪಾತ್ರದಲ್ಲಿ ಮೋಹನ್​ಲಾಲ್; ‘ಕಾಂತಾರ: ಚಾಪ್ಟರ್ 1’ ಬಗ್ಗೆ ಹರಿದಾಡಿದೆ ಸುದ್ದಿ

‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ರಿಷಬ್ ಅವರು ಪಾತ್ರಗಳ ಆಯ್ಕೆಯನ್ನೂ ಮಾಡುತ್ತಿದ್ದಾರೆ. ಹೀಗಿರುವಾಗಲೇ ರಿಷಬ್ ಅವರ ತಂದೆ ಪಾತ್ರದಲ್ಲಿ ಮೋಹನ್​ಲಾಲ್ ನಟಿಸುತ್ತಾರೆ ಎಂದು ವರದಿ ಆಗಿದೆ.

ರಿಷಬ್ ತಂದೆ ಪಾತ್ರದಲ್ಲಿ ಮೋಹನ್​ಲಾಲ್; ‘ಕಾಂತಾರ: ಚಾಪ್ಟರ್ 1’ ಬಗ್ಗೆ ಹರಿದಾಡಿದೆ ಸುದ್ದಿ
Edited By:

Updated on: Oct 01, 2024 | 3:22 PM

ರಿಷಬ್ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್ 1’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ‘ಕಾಂತಾರ’ ಚಿತ್ರದ ಪ್ರೀಕ್ವೆಲ್. ಇಡೀ ಚಿತ್ರದ ಕಥೆ ಕದಂಬರ ಕಾಲದಲ್ಲಿ ಸಾಗಲಿದೆ. ಕೆಲವು ವರದಿಗಳ ಪ್ರಕಾರ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಮೋಹನ್​ಲಾಲ್ ಕೂಡ ನಟಿಸಲಿದ್ದಾರೆ ಎಂದು ವರದಿ ಆಗಿದೆ. ರಿಷಬ್ ಅವರ ತಂದೆಯ ಪಾತ್ರದಲ್ಲಿ ಮೋಹನ್​ಲಾಲ್ ನಟಿಸುತ್ತಾರೆ ಎನ್ನುತ್ತಿವೆ ಮೂಲಗಳು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

‘ಕಾಂತಾರ: ಚಾಪ್ಟರ್ 1’ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಚಿತ್ರಕ್ಕೆ ಹೊಸ ಹೊಸ ತಾರೆಯರು ಸೇರ್ಪಡೆ ಆಗುತ್ತಿದ್ದಾರೆ. ಈ ಪೈಕಿ ಮೋಹನ್​ಲಾಲ್ ಕೂಡ ತಂಡ ಸೇರಿದ್ದಾರೆ ಎನ್ನಲಾಗುತ್ತಿದೆ. ಏಪ್ರಿಲ್​ನಲ್ಲಿ ರಿಷಬ್ ಅವರು ಮೋಹನ್​ಲಾಲ್​ನ ಭೇಟಿ ಮಾಡಿದ್ದರು. ಇದೊಂದು ಸಹಜ ಭೇಟಿ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇದರ ಹಿಂದೆ ಸಿನಿಮಾ ಉದ್ದೇಶ ಇದೆ ಎಂದು ಹೇಳಲಾಗುತ್ತಿದೆ. ತಂಡದ ಕಡೆಯಿಂದ ಈ ಬಗ್ಗೆ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

‘ಕಾಂತಾರ’ದ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಕುಂದಾಪುರದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. 2025ರಲ್ಲಿ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ. ಸಿನಿಮಾದ ರಿಲೀಸ್ ದಿನಾಂಕದ ಕುರಿತು ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಿನಿಮಾದ ಒಟಿಟಿ ಡೀಲ್ ಈಗಾಗಲೇ ಕುದುರಿದೆ. ಅಮೇಜಾನ್ ಪ್ರೈಮ್ ವಿಡಿಯೋ ಚಿತ್ರದ ಒಟಿಟಿ ಹಕ್ಕನ್ನು ಖರೀದಿ ಮಾಡಿದೆ. ಇದಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಪೋಸ್ಟ್​ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ಕಾಂತಾರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬರಲಿ ಎಂಬುದು ನನ್ನ ಆಶಯವೂ ಆಗಿತ್ತು’; ಅಲ್ಲು ಅರ್ಜುನ್

‘ಬರೋಜ್’ ಸಿನಿಮಾದಲ್ಲಿ ಮೋಹನ್​ಲಾಲ್ ನಟಿಸುತ್ತಿದ್ದಾರೆ. ಇದನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಅನ್ನೋದು ವಿಶೇಷ. ಅವರು ‘ಎಲ್​2: ಎಂಪುರಾನ್’ ಹಾಗೂ ಇನ್ನೂ ಶೀರ್ಷಿಕೆ ಇಡದ ಅವರ 360ನೇ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ರಿಷಬ್ ಅವರ ಸಂಪೂರ್ಣ ಗಮನ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.