ಧನಂಜಯ ನಟನೆಯ ‘ಹೆಡ್​ ಬುಷ್​’ ಚಿತ್ರಕ್ಕೆ ಜಯರಾಜ್​ ಪುತ್ರ ಅಜಿತ್​ ತಕರಾರು ತೆಗೆದಿದ್ದು ಯಾಕೆ? ಇಲ್ಲಿದೆ ಕಾರಣ..

| Updated By: ಮದನ್​ ಕುಮಾರ್​

Updated on: May 07, 2022 | 9:24 AM

Ajith Jayaraj: ‘ಹೆಡ್​ ಬುಷ್’ ಸಿನಿಮಾ ತಂಡ ಮತ್ತು ಜಯರಾಜ್​ ಪುತ್ರ ಅಜಿತ್​ ಜಯರಾಜ್​ ನಡುವೆ ಜಟಾಪಟಿ ನಡೆಯುತ್ತಿದೆ. ಈ ಬಗ್ಗೆ ಅಜಿತ್​ ಪ್ರತಿಕ್ರಿಯೆ ನೀಡಿದ್ದಾರೆ.

ಧನಂಜಯ ನಟನೆಯ ‘ಹೆಡ್​ ಬುಷ್​’ ಚಿತ್ರಕ್ಕೆ ಜಯರಾಜ್​ ಪುತ್ರ ಅಜಿತ್​ ತಕರಾರು ತೆಗೆದಿದ್ದು ಯಾಕೆ? ಇಲ್ಲಿದೆ ಕಾರಣ..
ಅಜಿತ್ ಜಯರಾಜ್​
Follow us on

ಸಿನಿಮಾರಂಗದಲ್ಲಿ ವಿವಾದಗಳು ಹೊಸದೇನೂ ಅಲ್ಲ. ಈಗ ಡಾಲಿ ಧನಂಜಯ ನಟನೆಯ ‘ಹೆಡ್​ ಬುಷ್​’ ಸಿನಿಮಾ ಕಾಂಟ್ರವರ್ಸಿ ಮಾಡಿಕೊಂಡಿದೆ. ಅದಕ್ಕೆ ಕಾರಣ ಆಗಿರುವುದು ಬೆಂಗಳೂರಿನ ಮಾಜಿ ಡಾನ್​ ಜಯರಾಜ್​ (MP Jayaraj) ಪುತ್ರ ಅಜಿತ್​ ಜಯರಾಜ್​. ಈ ಸಿನಿಮಾಗೆ ಶೂನ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ಜಯರಾಜ್​ ಪಾತ್ರವನ್ನು ಡಾಲಿ ಧನಂಜಯ ನಿಭಾಯಿಸುತ್ತಿದ್ದಾರೆ. ಅಗ್ನಿ ಶ್ರೀಧರ್ ಬರೆದ ‘ದಾದಾಗಿರಿಯ ದಿನಗಳು’ ಪುಸ್ತಕವನ್ನು ಆಧರಿಸಿ ‘ಹೆಡ್​ ಬುಷ್​’ ಚಿತ್ರ (Head Bush Movie) ಮೂಡಿಬರುತ್ತಿದೆ. ಆದರೆ ಈ ಸಿನಿಮಾ ಬಗ್ಗೆ ಅಜಿತ್​ ಜಯರಾಜ್​ ತಕರಾರು ತೆಗೆದಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಅವರು ಈಗ ಯಾವ ಉದ್ದೇಶದಿಂದ ಆಕ್ಷೇಪ ಎತ್ತುತ್ತಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಯಾರೋ ಹೇಳಿಕೊಟ್ಟ ರೀತಿಯಲ್ಲಿ ಅವರು ನಡೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನ ಕೂಡ ಕೆಲವರ ಮನದಲ್ಲಿ ಮೂಡಿದ್ದುಂಟು. ಈ ಅನುಮಾನದ ಪ್ರಶ್ನೆಗೆ ಅಜಿತ್​ ಜಯರಾಜ್​ (Ajith Jayaraj) ಉತ್ತರಿಸಿದ್ದಾರೆ. ‘ನಾನು ಯಾವುದೇ ಕಾಣದ ಕೈಗಳ ಮಾತು ಕೇಳ್ತಿಲ್ಲ. ನಮ್ಮ ತಾಯಿ‌ಯ ಮಾತು ಕೇಳ್ತಿದ್ದೀನಿ. ನನ್ನ ಈ‌ ಹೋರಾಟ ತಾಯಿಗಾಗಿ’ ಎಂದು ಅಜಿತ್​ ಜಯರಾಜ್​ ಹೇಳಿದ್ದಾರೆ.

‘ಹೆಡ್​ ಬುಷ್​’ ಸಿನಿಮಾದಲ್ಲಿ ಜಯರಾಜ್​ ಪಾತ್ರವನ್ನು ಯಾವ ರೀತಿ ತೋರಿಸಲಾಗುತ್ತಿದೆ ಎಂಬ ಬಗ್ಗೆ ಅಜಿತ್​ ಅವರಿಗೆ ತಕರಾರು ಇದೆ. ತಮ್ಮ ತಂದೆಯನ್ನು ಕೆಟ್ಟದಾಗಿ ತೋರಿಸಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ. ‘ನಮ್ಮ ತಂದೆ ಸ್ಮೋಕಿಂಗ್ ಮಾಡ್ತಿದ್ದಾರೆ ಅಂತ ಹೆಡ್ ಬುಷ್ ಟೀಸರ್​ನಲ್ಲಿ ತೋರಿಸ್ತಾರೆ. ನಮ್ಮ ತಂದೆ ಸ್ಮೋಕಿಂಗ್ ಮಾಡ್ತಿರಲಿಲ್ಲ’ ಎಂದು ಜಯರಾಜ್​ ಹೇಳಿದ್ದಾರೆ. ಇತ್ತೀಚೆಗೆ ವಿವಾದದ ಬಗ್ಗೆ ಮಾತನಾಡಿದ್ದ ಅಗ್ನಿ ಶ್ರೀಧರ್ ಅವರು, ‘ಈ ಸಿನಿಮಾ ಜಯರಾಜ್​ನ ಸಾರ್ವಜನಿಕ ಬದುಕಿನ ಕುರಿತಾಗಿದೆ. ಹಾಗಾಗಿ ಅದನ್ನು ಪ್ರಶ್ನಿಸುವ ಹಕ್ಕು ಅಜಿತ್​ಗೆ ಇಲ್ಲ’ ಎಂದಿದ್ದರು. ಅದಕ್ಕೂ ಕೂಡ ಅಜಿತ್​ ಈಗ ಪ್ರತಿಕ್ರಿಯೆ ನೀಡಿದ್ದಾರೆ.

‘ಶ್ರೀಧರ್ ಆಂಕಲ್ ಕಪಾಳಕ್ಕೆ ಬಾರಿಸ್ತೀನಿ ಅಂತಾರೆ. ಇದರಿಂದ ನಮ್ಮ ತಾಯಿಗೆ ಬೇಜಾರಾಗಿದೆ. ಅವರು ಸಂಕಟ ಪಡ್ತಿದ್ದಾರೆ. ಸಿನಿಮಾದ ನಿರ್ದೇಶಕ ‌ಶೂನ್ಯ ಏಕವಚನದಲ್ಲಿ ನಮ್ಮ ತಂದೆ ಬಗ್ಗೆ ಮಾತನಾಡ್ತಾರೆ. ನನ್ನ ಮತ್ತು ನನ್ನ ತಾಯಿಯನ್ನು ಕಾರ್ನರ್ ಮಾಡಿದ್ದಾರೆ. ನಮ್ಮ ತಂದೆ ಬಗ್ಗೆ ಇರುವ ಸಿನಿಮಾ ಇದು. ಹಾಗಾಗಿ ನಮಗೆ ಹಕ್ಕಿದೆ. ತಂದೆ ಬಗ್ಗೆ ನಾಳೆ ಮತ್ತಿನ್ಯಾರೋ ಬಂದು ಸಿನಿಮಾ ‌ಮಾಡ್ತಾರೆ. ಅಪ್ಪನ ಬಗ್ಗೆ ಕೆಟ್ಟದಾಗಿ‌ ತೋರಿಸೋದನ್ನ ಯಾವ ಮಗ ನೋಡ್ತಾನೆ?’ ಎಂದಿದ್ದಾರೆ ಅಜಿತ್​ ಜಯರಾಜ್​.

ಇದನ್ನೂ ಓದಿ
‘ನನ್ನ ಸಿನಿಮಾಗಳನ್ನು ಗಿಮಿಕ್ ಮಾಡಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ’: ಧನಂಜಯ
‘ಹೆಡ್ ಬುಷ್’ ಚಿತ್ರದ ಜೊತೆ ಅಜಿತ್ ಜಯರಾಜ್ ಗೆ ಯಾವುದೇ ಸಂಬಂಧವಿಲ್ಲ: ಅಗ್ನಿ ಶ್ರೀಧರ್
‘ಜಯರಾಜ್​ ಒಬ್ಬ ಸಂತ ಅಂತ ತೋರಿಸೋಕೆ ಆಗಲ್ಲ; ಸತ್ಯವನ್ನೇ ತೋರಿಸಿದ್ದೇನೆ’: ಅಗ್ನಿ ಶ್ರೀಧರ್​ ತಿರುಗೇಟು
ಹಿರಿದಾಯಿತು ‘ಹೆಡ್​ ಬುಷ್​’ ತಂಡ; ಪ್ರಮುಖ ಪಾತ್ರದಲ್ಲಿ ವಸಿಷ್ಠ ಸಿಂಹ, ಶ್ರುತಿ ಹರಿಹರನ್​

‘ಅಗ್ನಿ ಶ್ರೀಧರ್​ ಅವರು ದಾದಾಗಿರಿಯ ದಿನಗಳು ಪುಸ್ತಕ ಬರೆದಾಗ, ಆ ದಿನಗಳು ಸಿನಿಮಾ ಬಂದಾಗ ಕೇಳೋಕೆ ನಾನಿನ್ನೂ ಚಿಕ್ಕವನು. ಹೆಡ್​ ಬುಷ್​ ಸಿನಿಮಾ‌ ‌ಮಾಡೋಕೆ ನಾನು ವಿಶ್ ಮಾಡಿದ್ದೀನಿ. ನಾನ್ಯಾಕೆ ಅವ್ರಿಗೆ ತೊಂದರೆ ಕೊಡ್ತೀನಿ? ನನ್ನ ಹಕ್ಕಿನ ಬಗ್ಗೆ ಅಷ್ಟೇ ನನ್ನ ಹೋರಾಟ. ದುಡ್ಡಿನ ಆಸೆಗೋ ಮತ್ತಿನ್ನೊಂದಕ್ಕೋ ನಾನು ಈ ರೀತಿ ಮಾಡ್ತಿಲ್ಲ. ನಾನು‌ ಯಾವ ಪಾತ್ರವನ್ನೂ ಕೊಡಿ ಅಂತ ಕೇಳಿಲ್ಲ. ನಾನು ಧನಂಜಯ್ ಅವರ ದೊಡ್ಡ ಫ್ಯಾನ್. ನನಗೆ ಶ್ರೀಧರ್ ಅಂಕಲ್ ಅಪ್ಪನ ಸಮಾನ. ಆದರೆ ಈ ವಿಷ್ಯದಲ್ಲಿ ನಾನು ಸೋಲೋದಿಲ್ಲ. ಸೋಲಲಿ ಗೆಲ್ಲಲಿ‌, ಕಾನೂನಾತ್ಮಕವಾಗಿ ಮುಂದೆ ಹೋಗ್ತೀನಿ’ ಎಂದು ಅಜಿತ್​ ಜಯರಾಜ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 9:23 am, Sat, 7 May 22