MS Dhoni: ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಧೋನಿ? ಶೀಘ್ರವೇ ಘೋಷಣೆ

|

Updated on: Apr 06, 2024 | 10:23 AM

ಧೋನಿ ಮೊದಲು ತಮಿಳು ಭಾಷೆಯಲ್ಲಿ ‘ಲೆಟ್ಸ್ ಗೆಟ್ ಮ್ಯಾರೀಡ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಥಿಯೇಟರ್​ನಲ್ಲೇ ರಿಲೀಸ್ ಆಗಿತ್ತು. ಆದರೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಈಗ ಅವರು ಕನ್ನಡ ಚಿತ್ರರಂಗದತ್ತ ಒಲವು ತೋರಿದ್ದಾರೆ.

MS Dhoni: ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಧೋನಿ? ಶೀಘ್ರವೇ ಘೋಷಣೆ
ಧೋನಿ-ಸಾಕ್ಷಿ
Follow us on

ಕ್ರಿಕೆಟರ್ ಎಂಎಸ್ ಧೋನಿ (MS Dhoni) ಅವರಿಗೆ ಸಿನಿಮಾ ಮೇಲೂ ಪ್ರೀತಿ ಇದೆ. ಟೀಂ ಇಂಡಿಯಾದಿಂದ ಹೊರ ಬಂದ ಬಳಿಕ ಅವರು ಧೋನಿ ಎಂಟರ್​ಟೇನ್​ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದರು. ಈ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಒಂದು ಸಿನಿಮಾ ಕೂಡ ನಿರ್ಮಾಣ ಆಗಿದೆ. ಶೀಘ್ರವೇ ಅವರ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಕನ್ನಡ ಸಿನಿಮಾ ಕೂಡ ಮೂಡಿ ಬರಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಧೋನಿ ಅವರು ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಹೊಸಬರಿಗೆ ಅವಕಾಶ ನೀಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಅವರು ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುವ ಆಲೋಚನೆ ಇಟ್ಟುಕೊಂಡಿದ್ದಾರೆ. ಅವರು ಮೊದಲು ತಮಿಳು ಭಾಷೆಯಲ್ಲಿ ‘ಲೆಟ್ಸ್ ಗೆಟ್ ಮ್ಯಾರೀಡ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಥಿಯೇಟರ್​ನಲ್ಲೇ ರಿಲೀಸ್ ಆಗಿತ್ತು. ಆದರೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಈಗ ಅವರು ಕನ್ನಡ ಚಿತ್ರರಂಗದತ್ತ ಒಲವು ತೋರಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಿದೆ. ‘ಕೆಜಿಎಫ್’, ‘ಕಾಂತಾರ’, ‘777 ಚಾರ್ಲಿ’, ‘ಕಾಟೇರ’ ರೀತಿಯ ಸಿನಿಮಾಗಳಿಂದ ಪರಭಾಷೆಯವರೂ ಕನ್ನಡ ಚಿತ್ರರಂಗದತ್ತ ಮುಖಮಾಡುವಂತೆ ಆಗಿದೆ. ಹೀಗಾಗಿ, ಪರಭಾಷೆಯ ನಿರ್ಮಾಪಕರು ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಈಗ ಧೋನಿ ಅವರು ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಎಂಬ ವಿಚಾರ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ತಂಡದಲ್ಲಿ ಯಾರೆಲ್ಲ ಇರುತ್ತಾರೆ, ಯಾರು ನಿರ್ದೇಶನ ಮಾಡುತ್ತಾರೆ ಎಂಬ ವಿಚಾರ ಇನ್ನಷ್ಟೇ ರಿವೀಲ್ ಆಗಬೇಕಿದೆ.

ಇದನ್ನೂ ಓದಿ: ಒಂದೇ ಕೈಯಿಂದ ಅದ್ಭುತ ಕ್ಯಾಚ್‌ ಹಿಡಿದ ಮಥೀಶ ಪತಿರಾನ: ಎಂಎಸ್​ ಧೋನಿ ಮೆಚ್ಚುಗೆ

ಧೋನಿ ಅವರು ಸದ್ಯ ಐಪಿಎಲ್​ನಲ್ಲಿ ಬ್ಯುಸಿ ಇದ್ದಾರೆ. ಇಷ್ಟು ವರ್ಷ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಕ್ಯಾಪ್ಟನ್ ಆಗಿದ್ದ ಅವರು, ಈಗ ಕ್ಯಾಪ್ಟನ್​ ಸ್ಥಾನದಿಂದ ಇಳಿದಿದ್ದಾರೆ. ಇದು ಅವರ ಕೊನೆಯ ಐಪಿಎಲ್ ಸೀಸನ್ ಆಗಿರಲಿದೆ ಎಂದು ಕೂಡ ಹೇಳಲಾಗುತ್ತಿದೆ. ಒಂದೊಮ್ಮೆ ಅವರು ಐಪಿಎಲ್​ನಿಂದಲೂ ನಿವೃತ್ತಿ ಪಡೆದರೆ ಸಿನಿಮಾ ನಿರ್ಮಾಣದತ್ತ ಹೆಚ್ಚು ಗಮನ ಹರಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ