ನನ್ನ ಹೆಸರಿಗೆ ಧಕ್ಕೆ ಆಗ್ತಿದೆ, ನನ್ನ ಹೆಸರು ದುರುಪಯೋಗವಾಗ್ತಿದೆ -ವಿ ಮನೋಹರ್
ಬೆಂಗಳೂರು: ಶ್-2 ಹೆಸರಿನಲ್ಲಿ ಈಗ ಹೊಸ ಸಿನಿಮಾವೊಂದು ನಿರ್ಮಾಣ ಆಗ್ತಿದೆ ಅಂತಾ ಸುದ್ದಿ ಹರಿದಾಡ್ತಾ ಇದೆ. ಆದ್ರೆ ಈ ಸಿನಿಮಾದ ಕುರಿತು ವಿವಾದವೊಂದು ಕೇಳಿ ಬಂದಿದೆ. ಅದೇನಂದ್ರೆ ಈ ಸಿನಿಮಾಗೆ ವಿ. ಮನೋಹರ್ ನಿರ್ದೇಶನ ಮಾಡ್ತಿದ್ದಾರಂತೆ. ಆದ್ರೆ ನನಗೂ, ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಅಂತಾ ವಿ. ಮನೋಹರ್ ಸ್ಪಷ್ಟಪಡಿಸಿದ್ದಾರೆ. ಶ್-2 ಸಿನಿಮಾ ಹೆಸರಿನಲ್ಲಿ ನನ್ನ ಹೆಸರಿಗೆ ಧಕ್ಕೆ ಆಗ್ತಿದೆ. ನನ್ನ ಹೆಸರು ದುರುಪಯೋಗವಾಗ್ತಿದೆ ಎಂಬುದು ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಅಳಲು.ನಾನು ಆ […]
ಬೆಂಗಳೂರು: ಶ್-2 ಹೆಸರಿನಲ್ಲಿ ಈಗ ಹೊಸ ಸಿನಿಮಾವೊಂದು ನಿರ್ಮಾಣ ಆಗ್ತಿದೆ ಅಂತಾ ಸುದ್ದಿ ಹರಿದಾಡ್ತಾ ಇದೆ. ಆದ್ರೆ ಈ ಸಿನಿಮಾದ ಕುರಿತು ವಿವಾದವೊಂದು ಕೇಳಿ ಬಂದಿದೆ. ಅದೇನಂದ್ರೆ ಈ ಸಿನಿಮಾಗೆ ವಿ. ಮನೋಹರ್ ನಿರ್ದೇಶನ ಮಾಡ್ತಿದ್ದಾರಂತೆ. ಆದ್ರೆ ನನಗೂ, ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಅಂತಾ ವಿ. ಮನೋಹರ್ ಸ್ಪಷ್ಟಪಡಿಸಿದ್ದಾರೆ.
ಶ್-2 ಸಿನಿಮಾ ಹೆಸರಿನಲ್ಲಿ ನನ್ನ ಹೆಸರಿಗೆ ಧಕ್ಕೆ ಆಗ್ತಿದೆ. ನನ್ನ ಹೆಸರು ದುರುಪಯೋಗವಾಗ್ತಿದೆ ಎಂಬುದು ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಅಳಲು.ನಾನು ಆ ಸಿನಿಮಾ ಡೈರೆಕ್ಟ್ ಮಾಡ್ತಿಲ್ಲ. ಶ್-2 ರಿಯಲ್ ಸ್ಟಾರ್ ಉಪ್ಪಿ ನಟನೆಯ ಸೂಪರ್ ಹಿಟ್ ಸಿನಿಮಾ. ಇದು ನನ್ನ ಸಿನಿಮಾ ಅಲ್ಲ. ಇದುವರೆಗೂ ಶ್-2 ಟೀಂ ನನ್ನನ್ನು ಭೇಟಿ ಆಗಿಲ್ಲ, ಆದ್ರೆ ನನ್ನ ಹೆಸರಿನಲ್ಲಿ ಪೋಸ್ಟರ್ ಹರಿಯಬಿಟ್ಟಿದೆ.
ಡಿ ಕಂಬೈನ್ಸ್ ಅನ್ನೋ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡ್ತಿದೆ. ಈ ಸಿನಿಮಾಗೂ ನನಗೂ ಯಾವುದೇ ಸಂಬಂಧವಿಲ್ಲ. ಶ್- 2 ಸಿನಿಮಾ ಮಾಡೋ ಯೋಚನೆಯೂ ನನಗಿಲ್ಲ. ನಾನು ಅದರ ಸೀಕ್ವೆಲ್ ಮಾಡಲ್ಲ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಗೀತ ಹಾಗೂ ನಿರ್ದೇಶನದ ವಿಭಾಗದಲ್ಲಿ ನನ್ನ ಹೆಸರು ಬಳಸಿಕೊಳ್ಳಲಾಗಿದೆ. ಈ ರೀತಿ ನನ್ನ ಅನುಮತಿ ಇಲ್ಲದೆ ನನ್ನ ಹೆಸರು ಬಳಸಿಕೊಂಡು ಈಗೆ ಮಾಡ್ತಿರೋದು ತಪ್ಪು ಎಂದು ವಿ.ಮನೋಹರ್ ಬೇಸರ ವ್ಯಕ್ತಪಡಿಸಿದ್ದಾರೆ.
Published On - 7:26 pm, Tue, 29 October 19