ಜಾಮೀನು ತೀರ್ಪು ಬಾಕಿ: ಸಂಜನಾ ಮತ್ತು ರಾಗಿಣಿಗೆ ಇನ್ನೂ 3 ದಿನ ಜೈಲೇ ಗಟ್ಟಿ

| Updated By: KUSHAL V

Updated on: Sep 21, 2020 | 4:42 PM

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಬಳಕೆ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೀಡಾಗಿರುವ ನಟಿ ಸಂಜನಾ ಮತ್ತು ರಾಗಿಣಿ  ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು NDPS  ಕೋರ್ಟ್ ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ. ‘ಪೊಲೀಸರೇ ಒಳಸಂಚು ಮಾಡಿದ್ದಾರೆ’ ಈ ಮುಂಚೆ NDPS ಕೋರ್ಟ್​ನಲ್ಲಿ ರಾಗಿಣಿ ದ್ವಿವೇದಿ ಪರ ವಕೀಲರಾದ ಕಲ್ಯಾಣ ಕೃಷ್ಣ ಬಂಡೂರಿ ತಮ್ಮ ವಾದ ಮಂಡಿಸಿದರು. FIRಗೂ ಮೊದಲೇ ತನಿಖೆ ನಡೆಸಿದ್ದಾರೆ. ರಾಗಿಣಿ ಬಂಧನಕ್ಕೆ ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಕೋರ್ಟ್‌ನಿಂದ ವಾರಂಟ್ ಪಡೆದು ಶೋಧಕಾರ್ಯ ಮಾಡಿದ್ದಾರೆ. ಆ ವೇಳೆ ರಾಗಿಣಿ […]

ಜಾಮೀನು ತೀರ್ಪು ಬಾಕಿ: ಸಂಜನಾ ಮತ್ತು ರಾಗಿಣಿಗೆ ಇನ್ನೂ 3 ದಿನ ಜೈಲೇ ಗಟ್ಟಿ
Follow us on

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಬಳಕೆ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೀಡಾಗಿರುವ ನಟಿ ಸಂಜನಾ ಮತ್ತು ರಾಗಿಣಿ  ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು NDPS  ಕೋರ್ಟ್ ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ.

‘ಪೊಲೀಸರೇ ಒಳಸಂಚು ಮಾಡಿದ್ದಾರೆ’
ಈ ಮುಂಚೆ NDPS ಕೋರ್ಟ್​ನಲ್ಲಿ ರಾಗಿಣಿ ದ್ವಿವೇದಿ ಪರ ವಕೀಲರಾದ ಕಲ್ಯಾಣ ಕೃಷ್ಣ ಬಂಡೂರಿ ತಮ್ಮ ವಾದ ಮಂಡಿಸಿದರು. FIRಗೂ ಮೊದಲೇ ತನಿಖೆ ನಡೆಸಿದ್ದಾರೆ. ರಾಗಿಣಿ ಬಂಧನಕ್ಕೆ ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಕೋರ್ಟ್‌ನಿಂದ ವಾರಂಟ್ ಪಡೆದು ಶೋಧಕಾರ್ಯ ಮಾಡಿದ್ದಾರೆ. ಆ ವೇಳೆ ರಾಗಿಣಿ ಮನೆಯಲ್ಲಿ ಸಿಗರೇಟ್ ಸ್ಟ್ರಿಪ್ ಮಾತ್ರ ಸಿಕ್ಕಿದೆ. ಪೊಲೀಸರು ಕಾನೂನನ್ನು ದುರುಪಯೋಗ ಮಾಡಿದ್ದಾರೆ. ಜೊತೆಗೆ, ಪೊಲೀಸರೇ ಒಳಸಂಚು ಮಾಡಿದ್ದಾರೆ ಎಂದು ನಟಿ ಪರ ವಕೀಲರು ತಮ್ಮ ವಾದ ಮಂಡಿಸಿದರು. ಜೊತೆಗೆ, ರಾಗಿಣಿ ಎಕ್ಸ್​ಟಸಿ ಮಾತ್ರೆ ತೆಗೆದುಕೊಂಡಿದ್ದಾರೆಂದು ಮತ್ತೊಬ್ಬ ಆರೋಪಿಯ ಹೇಳಿಕೆ ಆಧರಿಸಿ ಕೇಸ್ ದಾಖಲಿಸಿದ್ದಾರೆ ಎಂದು ನ್ಯಾಯಾಧೀಶರಿಗೆ ಹೇಳಿದರು.

ರಾಗಿಣಿ ತನಿಖೆಗೆ ಸಹಕರಿಸಿಲ್ಲವೆಂದು ಆರೋಪಿಸಿದ್ದಾರೆ. ಯಾರನ್ನೋ ಹಿಡಿಯಲು ಯಾರನ್ನೋ ಬಲಿಪಶು ಮಾಡಿದ್ದಾರೆ ಎಂದು CCB ಅಧಿಕಾರಿಗಳ ವಿರುದ್ಧ ರಾಗಿಣಿ ಪರ ವಕೀಲರು ಆರೋಪಿಸಿದರು. ರಾಗಿಣಿ ದ್ವಿವೇದಿ ಆರ್ಮಿ ಅಧಿಕಾರಿ ಕುಟುಂಬದವರು. ಜೊತೆಗೆ, ನಟಿ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ. ಸಿಸಿಬಿಯ ಕೆಲ ಸಮಾಜಮುಖಿ ಕಾರ್ಯಗಳಿಗೂ ಸ್ಪಂದಿಸಿದ್ದಾರೆ. ಅವರು 4 ಆರೋಪಿಗಳ ಜೊತೆ ಎಕ್ಸ್​ಟಸಿ ಸೇವಿಸಿದ್ದಾಗಿ ಆರೋಪಿಸಲಾಗಿದೆ. ಆದರೆ ಮಾತ್ರೆ ಸೇವಿಸಿದ್ದನ್ನು ನಾವು ನಿರಾಕರಿಸಿದ್ದೇವೆ. ಸಿಸಿಬಿ ಪ್ರಕಾರ ಇದು ಸಣ್ಣ ಪ್ರಮಾಣದ ಡ್ರಗ್ಸ್ ಸೇವನೆ ಕೇಸ್. ಹೀಗಾಗಿ ಇದು ಜಾಮೀನು ಕೊಡಲು ಅರ್ಹವಾದ ಕೇಸ್. ಆದರೆ, ರಾಗಿಣಿಗೆ ಜಾಮೀನು ಕೊಡಬಾರದೆಂದು ಹೇಳ್ತಿದ್ದಾರೆ ಎಂದು ರಾಗಿಣಿ ಪರ ವಕೀಲರು ಕಲ್ಯಾಣ ಕೃಷ್ಣ ಬಂಡೂರಿ ತಮ್ಮ ವಾದ ಮಂಡಿಸಿದರು.

‘ನಟಿ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಸಂಪರ್ಕ ಹೊಂದಿದ್ದಾರೆ’
ಬಳಿಕ, ತಮ್ಮ ವಾದ ಮಂಡಿಸಿದ SPP ರವೀಂದ್ರ ರಾಗಿಣಿ ಜಾಮೀನು ಅರ್ಜಿಗೆ ಆಕ್ಷೇಪಣೆ ಎತ್ತಿದರು. ವಿಚಾರಣೆ ಸಂದರ್ಭದಲ್ಲಿ ರಾಗಿಣಿ ಬೇರೆಯವರ ಹೆಸರು ಹೇಳಿದ್ದಾರೆ. ರಾಗಿಣಿ ದ್ವಿವೇದಿ ಹೇಳಿದ ವ್ಯಕ್ತಿಗಳ ತನಿಖೆ ನಡೆಸಬೇಕಿದೆ. ನಟಿ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಸಂಪರ್ಕ ಹೊಂದಿದ್ದಾರೆ. ಜಾಮೀನು ಕೊಟ್ಟರೆ ಅವರನ್ನು ರಾಗಿಣಿ ಎಚ್ಚರಿಸಬಹುದು ಎಂದು ರವೀಂದ್ರ ತಮ್ಮ ವಾದ ಮಂಡಿಸಿದರು.

ರಾಗಿಣಿ ಕಳೆದ 5 ವರ್ಷಗಳಿಂದ ಪಾರ್ಟಿಗಳಲ್ಲಿ ಭಾಗವಹಿಸಿದ್ದಾರೆ. ಇತರೆ ಮೆಂಬರ್ಸ್ ಜೊತೆ ಸೇರಿ ಪಾರ್ಟಿ ಆಯೋಜಿಸಿದ್ದಾರೆ. ಪಾರ್ಟಿಗೆ ಬಂದವರಿಗೆ ಡ್ರಗ್ ಸಪ್ಲೈ ಮಾಡಿದ್ದಾರೆ. ಆಂಧ್ರ, ಗೋವಾ, ಪಂಜಾಬ್‌, ಮುಂಬೈನಿಂದ ಜೊತೆಗೆ ಕೆಲ ವಿದೇಶಿಗರಿಂದಲೂ ಡ್ರಗ್ಸ್ ತರಿಸಿಕೊಂಡಿದ್ದಾರೆ. ಇದಲ್ಲದೆ, ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ರಾಗಿಣಿ ಸಹಕರಿಸಿಲ್ಲ. ರಾಗಿಣಿ ಮೊಬೈಲ್‌ನ ಪಾಸ್‌ವರ್ಡ್ ಸಹ ನೀಡಲಿಲ್ಲ. ಟೆಕ್ನಿಕಲ್ ಸಹಾಯದಿಂದ ಮೊಬೈಲ್ ಓಪನ್ ಮಾಡಲಾಗಿದೆ.

ಜೊತೆಗೆ, ರಾಗಿಣಿ ದ್ವಿವೇದಿ ವೈದ್ಯಕೀಯ ಪರೀಕ್ಷೆಗೂ ಸಹಕರಿಸಿಲ್ಲ. ಅವರು ಮೂತ್ರವನ್ನೂ ಡೈಲ್ಯೂಟ್ ಮಾಡಿ ನೀಡಿದ್ದರು. ನೀರನ್ನು ಮಿಶ್ರಣ ಮಾಡಿ ಮೂತ್ರದ ಸ್ಯಾಂಪಲ್ ನೀಡಿದ್ದಾರೆ. ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಯ ನೇರ ಪಾತ್ರವಿದೆ. ಹಲವು ಡ್ರಗ್ಸ್ ಪೆಡ್ಲರ್ಸ್ ಈಗಲೂ ನಾಪತ್ತೆಯಾಗಿದ್ದಾರೆ. ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆಯಾಗಲಿದೆ. ರಾಗಿಣಿ ಡ್ರಗ್ಸ್ ಮಾರಾಟದಿಂದ ಆಸ್ತಿ ಗಳಿಸಿದ ಮಾಹಿತಿಯಿದೆ. ಬ್ಯಾಂಕ್, ಹಣಕಾಸು ಮಾಹಿತಿ ಪತ್ತೆ ಹಚ್ಚಬೇಕಿದೆ ಎಂದು SPP ರವೀಂದ್ರ ಹೇಳಿದ್ದಾರೆ.

ರಾಗಿಣಿ ದ್ವಿವೇದಿ ಸಿನಿಮಾ ಹೀರೋಯಿನ್. ಆದರೆ, ಇವರಿಗೆ ಸಮಾಜಘಾತುಕ ವ್ಯಕ್ತಿಗಳ ಜೊತೆ ಸಂಬಂಧ ಇದೆ
ನಟಿ ರಾಗಿಣಿ ದ್ವಿವೇದಿ ತನ್ನ ಕರಾಳಮುಖ ಮುಚ್ಚಿಡಲು ರಾಜಕೀಯ ಪಕ್ಷಗಳೊಂದಿಗೆ ಪ್ರಚಾರ ನಡೆಸಿದ್ದರು. ಆಕೆಗೆ ಈಗ ಜಾಮೀನು ನೀಡಿದರೆ ಐಡೆಂಟಿಫಿಕೇಷನ್ ಪರೇಡ್ ನಡೆಸಲು ತೊಂದರೆಯಾಗಲಿದೆ. ಜಾಮೀನು ನೀಡಿದರೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ. ರಾಗಿಣಿ 20 ವರ್ಷಗಳವರೆಗೆ ಶಿಕ್ಷೆ ನೀಡುವ ಅಪರಾಧ ಮಾಡಿದ್ದಾರೆ. A7 ಆರೋಪಿಯೊಂದಿಗೆ ನಟಿ ರಾಗಿಣಿಗೆ ನೇರ ಸಂಬಂಧವಿದೆ. ಆರೋಪಿ ಜೊತೆ ಸೇರಿ ಡ್ರಗ್ಸ್ ಸರಬರಾಜು ಮಾಡಿದ್ದಾರೆ ಎಂದು ತಮ್ಮ ವಾದ ಮಂಡಿಸಿದರು.

ಇದನ್ನೂ ಓದಿ: ನಶೆ ರಾಣಿಯರಿಗೆ ಬೇಲ್ ಬೇಡ: CCB ಬಳಿಯಿದೆ ನವ ಅಸ್ತ್ರಗಳು!

Published On - 4:26 pm, Mon, 21 September 20