ತಾಯಿಯನ್ನ ಕೊರೊನಾದಿಂದ ರಕ್ಷಿಸಿದ ವೈದ್ಯರಿಗೆ ನೆನಪಿರಲಿ ಪ್ರೇಮ್ ಧನ್ಯವಾದ
ಕೊರೊನಾ ವೈರಸ್ ಯಾರನ್ನೂ ಬಿಟ್ಟಿಲ್ಲ. ಬಡವರು, ಶ್ರೀಮಂತರು, ಸೆಲೆಬ್ರಿಟಿಗಳು ಅನ್ನದೆ ಎಲ್ಲರನ್ನೂ ಕಾಡುತ್ತಿದೆ. ಒಂದ್ಕಡೆ ಜೀವ ಭಯ. ಮತ್ತೊಂದ್ಕಡೆ ಕೊರೊನಾದಿಂದ ರಕ್ಷಣೆ ಪಡೆಯಲು ಹರಸಾಹಸ. ಆದ್ರೂ ಈ ಮಹಾಮಾರಿ ಜನರ ದೇಹವನ್ನ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ನೆನೆಪಿರಲಿ ಪ್ರೇಮ್ ಜನರಲ್ಲಿ ಹುರುಪು ತುಂಬಲು ಮುಂದಾಗಿದ್ದಾರೆ. ನೆನಪಿರಲಿ ಪ್ರೇಮ್ ತಾಯಿಗೆ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ […]
ಕೊರೊನಾ ವೈರಸ್ ಯಾರನ್ನೂ ಬಿಟ್ಟಿಲ್ಲ. ಬಡವರು, ಶ್ರೀಮಂತರು, ಸೆಲೆಬ್ರಿಟಿಗಳು ಅನ್ನದೆ ಎಲ್ಲರನ್ನೂ ಕಾಡುತ್ತಿದೆ. ಒಂದ್ಕಡೆ ಜೀವ ಭಯ. ಮತ್ತೊಂದ್ಕಡೆ ಕೊರೊನಾದಿಂದ ರಕ್ಷಣೆ ಪಡೆಯಲು ಹರಸಾಹಸ. ಆದ್ರೂ ಈ ಮಹಾಮಾರಿ ಜನರ ದೇಹವನ್ನ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ನೆನೆಪಿರಲಿ ಪ್ರೇಮ್ ಜನರಲ್ಲಿ ಹುರುಪು ತುಂಬಲು ಮುಂದಾಗಿದ್ದಾರೆ.
ನೆನಪಿರಲಿ ಪ್ರೇಮ್ ತಾಯಿಗೆ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ತಾಯಿಗೆ ಚಿಕಿತ್ಸೆ ನೀಡಿದ ಮತ್ತು ಚಿಕಿತ್ಸೆ ನೀಡಲು ನೆರವಾದ ವೈದ್ಯರಿಗೆ ಹಾಗೂ ಆರೋಗ್ಯಾಧಿಕಾರಿಗಳಿಗೆ ಪ್ರೇಮ್ ಧನ್ಯವಾದ ಹೇಳಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ನೆನಪಿರಲಿ ಪ್ರೇಮ್ ತಾಯಿ ಚಿಕಿತ್ಸೆ ನೀಡಿದ ವೈದ್ಯೆ ಡಾ.ವೇದಾವತಿ, ಸಹಾಯ ಮಾಡಿದ ವೈದ್ಯರಾದ ವಿಕ್ಟೋರಿಯಾ ಆಸ್ಪತ್ರೆಯ ಡಾ. ಶಂಕ್ರಪ್ಪ, ಡಾ.ಬಾಲಾಜಿ ಪೈ, ಡಾ.ಸ್ಮಿತಾ, ಡಾ. ಅಸಿಮಾ ಬಾನು ಅವರಿಗೆ ಧನ್ಯವಾದಗಳನ್ನ ಹೇಳಿದ್ದಾರೆ.
ಇಷ್ಟೇ ಅಲ್ಲ.. ಕಿರಿಯರಿಗೆ ಕೊರೊನಾ ಸೋಂಕು ತಗುಲಿದ್ರೆ, ಅವರು ಬದುಕೋದು ಕಷ್ಟ ಅನ್ನೋ ಆತಂಕ ಜನರಲ್ಲಿದೆ. ಇಂತಹವ್ರಿಗೆ ಪ್ರೇಮ್ ಧೈರ್ಯ ತುಂಬುವ ಕೆಲಸ ಕೂಡ ಮಾಡಿದ್ದಾರೆ. ತನ್ನ ತಾಯಿಗೆ ಬಿಪಿ, ಶುಗರ್ ಇದೆ. ಆದ್ರೂ, ತಮ್ಮ ಆತ್ಮಸ್ಥೈರ್ಯದಿಂದ ಕೊರೊನಾ ಗೆದ್ದು ಬಂದಿದ್ದಾರೆ. ಹೀಗಾಗಿ ಆತ್ಮಸ್ಥೆರ್ಯ ಹೆಚ್ಚಿಸಿಕೊಳ್ಳಲು ಹಿರಿಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Published On - 4:12 pm, Sat, 25 July 20