‘ಲಿಯೋ’ ನಿರ್ಮಾಪಕರ ಹೊಸ ಘೋಷಣೆಯಿಂದ ದಳಪತಿ ವಿಜಯ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರಾಸೆ

ರಾಜಕೀಯ ಕಾರಣದಿಂದ ‘ಲಿಯೋ’ ಚಿತ್ರದ ಆಡಿಯೋ ಲಾಂಚ್​ಗೆ ಬ್ರೇಕ್ ಹಾಕಲಾಗಿದೆ ಎಂದು ಕೆಲವರು ಮಾತನಾಡಿಕೊಂಡಿದ್ದರು. ಆದರೆ, ಇದನ್ನು ಸಂಸ್ಥೆ ಅಲ್ಲಗಳೆದಿದೆ. ‘ರಾಜಕೀಯ ಒತ್ತಡದ ಅಥವಾ ಇನ್ನಾವುದೇ ಕಾರಣಕ್ಕೆ ಆಡಿಯೋ ಲಾಂಚ್ ಕ್ಯಾನ್ಸಲ್ ಆಗಿಲ್ಲ’ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ.

‘ಲಿಯೋ’ ನಿರ್ಮಾಪಕರ ಹೊಸ ಘೋಷಣೆಯಿಂದ ದಳಪತಿ ವಿಜಯ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರಾಸೆ
ವಿಜಯ್-ತ್ರಿಶಾ

Updated on: Sep 27, 2023 | 7:10 AM

ದಳಪತಿ ವಿಜಯ್ (Thalapathy Vijay) ನಟನೆಯ ‘ಲಿಯೋ’ ಸಿನಿಮಾ ರಿಲೀಸ್​ಗೆ ಕ್ಷಣಗಣನೆ ಆರಂಭ ಆಗಿದೆ. ಅಕ್ಟೋಬರ್ 19ರಂದು ಚಿತ್ರ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ದಳಪತಿ ವಿಜಯ್ ಮಾಡಿರೋ ಪಾತ್ರ ಯಾವ ರೀತಿಯಲ್ಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಮಧ್ಯೆ ವಿಜಯ್ ಅಭಿಮಾನಿಗಳಿಗೆ ಬೇಸರ ಆಗುವಂಥ ಅಪ್​ಡೇಟ್​ ಒಂದು ಸಿಕ್ಕಿದೆ. ಇದನ್ನು ಸಹಿಸಿಕೊಳ್ಳೋಕೆ ಫ್ಯಾನ್ಸ್ ಬಳಿಯಿಂದ ಸಾಧ್ಯವಾಗೋದು ಅನುಮಾನ. ಸೆವೆನ್ ಸ್ಕ್ರೀನ್ ಸ್ಟುಡಿಯೋ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.

ದಳಪತಿ ವಿಜಯ್ ಸಿನಿಮಾಗಳಲ್ಲಿ ಸಾಂಗ್​ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಸಿನಿಮಾದಲ್ಲಿ ಹಾಡುಗಳು ಗಮನ ಸೆಳೆಯುತ್ತವೆ. ಈ ಕಾರಣದಿಂದಲೇ ದೊಡ್ಡ ಮಟ್ಟದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಸಲಾಗುತ್ತದೆ. ಆದರೆ, ‘ಲಿಯೋ’ ಸಿನಿಮಾಗೆ ಆಡಿಯೋ ಲಾಂಚ್ ಕಾರ್ಯಕ್ರಮ ಮಾಡದೇ ಇರಲು ತಂಡದವರು ನಿರ್ಧರಿಸಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

‘ಹೆಚ್ಚಿನ ಪಾಸ್​ಗೆ ಬೇಡಿಕೆ ಬಂದಿದ್ದು ಹಾಗೂ ಸುರಕ್ಷತೆಯ ನಿರ್ಬಂಧಗಳಿಂದ ಲಿಯೋ ಚಿತ್ರದ ಆಡಿಯೋ ಲಾಂಚ್ ಮಾಡದೆ ಇರಲು ನಿರ್ಧರಿಸಿದ್ದೇವೆ. ನಿರಂತರವಾಗಿ ಸಿನಿಮಾ ಬಗ್ಗೆ ಅಪ್​ಡೇಟ್ ನೀಡುವ ಮೂಲಕ ನಿಮ್ಮ ಜೊತೆ ಸಂಪರ್ಕದಲ್ಲಿ ಇರುತ್ತೇವೆ’ ಎಂದು ಸೆವೆನ್ ಸ್ಕ್ರೀನ್ ಸ್ಟುಡಿಯೋ ಟ್ವಿಟರ್​ನಲ್ಲಿ ಬರೆದುಕೊಂಡಿದೆ.

ರಾಜಕೀಯ ಕಾರಣದಿಂದ ‘ಲಿಯೋ’ ಚಿತ್ರದ ಆಡಿಯೋ ಲಾಂಚ್​ಗೆ ಬ್ರೇಕ್ ಹಾಕಲಾಗಿದೆ ಎಂದು ಕೆಲವರು ಮಾತನಾಡಿಕೊಂಡಿದ್ದರು. ಆದರೆ, ಇದನ್ನು ಸಂಸ್ಥೆ ಅಲ್ಲಗಳೆದಿದೆ. ‘ರಾಜಕೀಯ ಒತ್ತಡದ ಅಥವಾ ಇನ್ನಾವುದೇ ಕಾರಣಕ್ಕೆ ಆಡಿಯೋ ಲಾಂಚ್ ಕ್ಯಾನ್ಸಲ್ ಆಗಿಲ್ಲ’ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್ 30ರಂದು ಚೆನ್ನೈನಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಬೇಕಿತ್ತು. ಇದಕ್ಕಾಗಿ ಫ್ಯಾನ್ಸ್ ಕಾದು ಕೂತಿದ್ದರು. ನಿರ್ಮಾಣ ಸಂಸ್ಥೆಯ ನಿರ್ಧಾರದಿಂದ ಅಭಿಮಾನಿಗಳಿಗೆ ಬೇಸರ ಆಗಿದೆ.

ಇದನ್ನೂ ಓದಿ: ಲಿಯೋ ಬಿಡುಗಡೆ ಆಗುವ ಮುನ್ನವೇ ಹೊಸ ಸಿನಿಮಾ ಪ್ರಾರಂಭಿಸುತ್ತಿರುವ ವಿಜಯ್

‘ಲಿಯೋ’ ಚಿತ್ರವನ್ನು ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಲೋಕೇಶ್ ನಿರ್ದೇಶನ ಮಾಡಿದ ‘ಕೈದಿ’ ಹಾಗೂ ‘ವಿಕ್ರಮ್’ ಚಿತ್ರಕ್ಕೂ ಈ ಸಿನಿಮಾಗೂ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ