AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲೆ ಆರೋಪಿ ಪವಿತ್ರಾ ಗೌಡ ಬಗ್ಗೆ ಮಾಜಿ ಪತಿ ಸಂಜಯ್ ಮಾತು

ರೇಣುಕಾ ಸ್ವಾಮಿ ಕೊಲೆ ಪ್ರಕರಣ ಪ್ರಮುಖ ಆರೋಪಿ ಪವಿತ್ರಾ ಗೌಡ. ಅವರ ಕಾರಣದಿಂದಲೇ ರೇಣುಕಾ ಸ್ವಾಮಿ ಕೊಲೆ ಆಗಿದೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್, ಪವಿತ್ರಾ ಗೌಡ ಬಗ್ಗೆ ಮಾತನಾಡಿದ್ದಾರೆ.

ಕೊಲೆ ಆರೋಪಿ ಪವಿತ್ರಾ ಗೌಡ ಬಗ್ಗೆ ಮಾಜಿ ಪತಿ ಸಂಜಯ್ ಮಾತು
ಮಂಜುನಾಥ ಸಿ.
|

Updated on: Jun 13, 2024 | 12:40 PM

Share

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ (Pavithra Gowda) ಆರೋಪಿ ನಂಬರ್ 1 ಆಗಿದ್ದಾರೆ. ರೇಣುಕಾ ಸ್ವಾಮಿಯ ಕೊಲೆಗೆ ಮೂಲ ಕಾರಣವೇ ಪವಿತ್ರಾ ಗೌಡ ಎನ್ನಲಾಗಿದೆ. ದರ್ಶನ್ ಆರೋಪಿ ನಂಬರ್ 2. ಅಭಿಮಾನಿಗಳು ಕೆಲ ದರ್ಶನ್ ಆಪ್ತರು ಈಗ ಆಗಿರುವದಕ್ಕೆಲ್ಲ ಪವಿತ್ರಾ ಗೌಡ ಕಾರಣ ಎಂದು ದೂಷಣೆಗೆ ತೊಡಗಿದ್ದಾರೆ. ಅತಿ ಮಹಾತ್ವಾಕಾಂಕ್ಷೆ ಹೊಂದಿರುವ ಮಹಿಳೆ ಪವಿತ್ರಾ ಗೌಡ ಜೈಲಿನಲ್ಲಿರುವ ಈ ಸಂದರ್ಭದಲ್ಲಿ ಅವರ ಮಾಜಿ ಪತಿ ಸಂಜೀವ್ ಸಿಂಗ್, ಪವಿತ್ರಾ ಗೌಡ ಹಾಗೂ ತಮ್ಮ ಸಂಬಂಧದ ಬಗ್ಗೆ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ.

ತುಸು ಹಿಂಜರಿಕೆಯಿಂದಲೇ ಮಾತನಾಡಿರುವ ಸಂಜೀವ್ ಸಿಂಗ್​, ‘ನಾನು ಹಾಗೂ ಪವಿತ್ರಾ ಗೌಡ ದೂರಾದಿ 12 ವರ್ಷಗಳಾಗಿವೆ. ನನಗೂ ಅವರಿಗೂ ಯಾವುದೇ ರೀತಿಯ ಸಂಪರ್ಕವಾಗಲಿ, ಸಂಬಂಧವಾಗಲಿ ಇಲ್ಲ’ ಎಂದಿದ್ದಾರೆ. ‘ನಾವಿಬ್ಬರೂ ಬೆಂಗಳೂರಿನಲ್ಲಿಯೇ ಮೊದಲು ಪರಿಚಯವಾಗಿದ್ದವು. ಮದುವೆಯಾದವು, ಆದರೆ ನಮ್ಮಿಬ್ಬರ ವೃತ್ತಿಗಳು ಬೇರೆ ಬೇರೆ ಆಗಿದ್ದವು. ನಾನು ಐಟಿ ಉದ್ಯಮದವನು, ಅವರ ಸಿನಿಮಾ ಕ್ಷೇತ್ರದವರು. ನಮ್ಮಿಬ್ಬರ ನಡುವೆ ಇದೇ ಕಾರಣಕ್ಕೆ ಹೊಂದಾಣಿಕೆ ಕೊರತೆ ಇತ್ತು. ಪರಸ್ಪರರಿಗೆ ಸಮಯ ಕೊಟ್ಟುಕೊಳ್ಳಲು ಸಾಧ್ಯವಾಗಿರಲಿಲ್ಲ ಹಾಗಾಗಿ ವಿಚ್ಛೇದನ ಪಡೆದುಕೊಂಡೆವು’ ಎಂದಿದ್ದಾರೆ ಸಂಜಯ್ ಸಿಂಗ್.

ಇದನ್ನೂ ಓದಿ:Pavithra Gowda: ‘ಇದಕ್ಕೆಲ್ಲ ನೀನೇ ಕಾರಣ’; ಪವಿತ್ರಾ ಗೌಡ ಮೇಲೆ ಹಲ್ಲೆ ಮಾಡಿದ ದರ್ಶನ್?

ಮಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಂಜಯ್ ಸಿಂಗ್, ‘ಮಗಳೊಂದಿಗೆ ಬಹಳ ಕಡಿಮೆ ಮಾತನಾಡಿದ್ದೇನೆ. ಈ 12 ವರ್ಷಗಳಲ್ಲಿ ನಾನು ಒಂದೆರಡು ಬಾರಿಯಷ್ಟೆ ನನ್ನ ಮಗಳ ಬಳಿ ಮಾತನಾಡಿದ್ದೇನೆ. ನನ್ನ ಹಾಗೂ ಪವಿತ್ರಾರ ವಿಚ್ಛೇದನಕ್ಕೆ ವೃತ್ತಿ ಬೇರೆಯಾಗಿರುವುದೇ ಮೂಲ ಕಾರಣ ಆಗಿತ್ತು. ಬೇರೆಯೇನಲ್ಲ’ ಎಂದಿದ್ದಾರೆ ಸಂಜಯ್ ಸಿಂಗ್. ಈಗ ನಡೆಯುತ್ತಿರುವ ಪ್ರಕರಣವಾಗಲಿ, ದರ್ಶನ್ ಜೊತೆಗಿನ ಪವಿತ್ರಾರ ಸಂಬಂಧದ ಬಗೆಗಾಗಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಲು ಸಂಜಯ್ ಸಿಂಗ್ ನಿರಾಕರಿಸಿದ್ದಾರೆ.

ಒಲ್ಲದ ಮನಸ್ಸಿನಿಂದಲೇ ಮಾತನಾಡಿರುವ ಸಂಜಯ್ ಸಿಂಗ್ ಅವರ ಮಾತುಗಳಲ್ಲಿ ಪವಿತ್ರಾ ಗೌಡರ ಸಹವಾಸವೇ ತಮಗೆ ಬೇಡ ಎಂಬ ಧೋರಣೆ ಇದ್ದಂತೆ ಕಂಡು ಬರುತ್ತಿತ್ತು. ಸಂಜಯ್ ಸಿಂಗ್ ಹಾಗೂ ಪವಿತ್ರಾ ಗೌಡ ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಒಂದು ಹೆಣ್ಣು ಮಗು ಸಹ ಜನಿಸಿತ್ತು. ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂಬ ಮಹಾತ್ವಾಕಾಂಕ್ಷೆ ಹೊಂದಿದ್ದ ಪವಿತ್ರಾ ಗೌಡ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗುವ ಪ್ರಯತ್ನದಲ್ಲಿ ನಿರತರಾದರು. ಅದು ಸಾಧ್ಯವಾಗಲಿಲ್ಲ. ಕೆಲವು ಸಿನಿಮಾಗಳಲ್ಲಿ ನಟಿಸಿದರೂ ಸಹ ದೊಡ್ಡ ಯಶಸ್ಸು ಸಿಗಲಿಲ್ಲ. ಬಳಿಕ ಪರಿಚಯವಾಗಿದ್ದೇ ದರ್ಶನ್. ಆ ಬಳಿಕ ಪವಿತ್ರಾ ತಮ್ಮ ಬದುಕನ್ನು ಬೇರೆ ರೀತಿಯಾಗಿಯೇ ತಿರುಗಿಸಿಕೊಂಡರು. ಈಗ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಜೈಲು ಸೇರಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ವಿಷ್ಣು ಸ್ಮಾರಕ: ಸಿಎಂ ಭೇಟಿ ಬಳಿಕ ಹಿರಿಯ ನಟಿ ಭಾರತಿ ಹೇಳಿದ್ದು ಹೀಗೆ
ವಿಷ್ಣು ಸ್ಮಾರಕ: ಸಿಎಂ ಭೇಟಿ ಬಳಿಕ ಹಿರಿಯ ನಟಿ ಭಾರತಿ ಹೇಳಿದ್ದು ಹೀಗೆ
ಧರ್ಮಸ್ಥಳ ಪ್ರಕರಣ: ಎನ್​ಐಎಗೆ ವಹಿಸುವ ಬಗ್ಗೆ ಶಾ ಭೇಟಿ ಮಾಡಲಿರುವ ಹೆಚ್​ಡಿಕೆ
ಧರ್ಮಸ್ಥಳ ಪ್ರಕರಣ: ಎನ್​ಐಎಗೆ ವಹಿಸುವ ಬಗ್ಗೆ ಶಾ ಭೇಟಿ ಮಾಡಲಿರುವ ಹೆಚ್​ಡಿಕೆ