ಜನಪ್ರಿಯ ನಟ ಕಝಾನ್ ಖಾನ್ (Kazan Khan) ಅವರು ಸೋಮವಾರ (ಜೂನ್ 12) ನಿಧನರಾಗಿದ್ದಾರೆ. ತೀವ್ರ ಹೃದಯಾಘಾತ (Heart Attack) ಆದ ಬಳಿಕ ಅವರು ಇಹಲೋಕ ತ್ಯಜಿಸಿದ್ದಾರೆ ಎಂಬುದು ತಿಳಿದುಬಂದಿದೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ಕಝಾನ್ ಖಾನ್ ಅವರು ಫೇಮಸ್ ಆಗಿದ್ದರು. ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಅವರು ಹೆಚ್ಚಾಗಿ ನಟಿಸಿದ್ದರು. ಕನ್ನಡದ ‘ಹಬ್ಬ’, ‘ನಾಗದೇವತೆ’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು. ಕಝಾನ್ ಖಾನ್ ನಿಧನಕ್ಕೆ (Kazan Khan Death) ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಖ್ಯಾತ ನಟನ ಸಾವಿನಿಂದ ಚಿತ್ರರಂಗಕ್ಕೆ ಆಘಾತ ಆಗಿದೆ.
ಕಝಾನ್ ಖಾನ್ ಅವರ ನಿಧನದ ಸುದ್ದಿಯನ್ನು ನಿರ್ಮಾಪಕ ಎನ್ಬಿ ಬದುಶ ಅವರು ಖಚಿತಪಡಿಸಿದ್ದಾರೆ. ಈ ಮೂಲಕ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ‘ಗಂಧರ್ವಂ’, ‘ಸಿಐಡಿ ಮೂಸಾ’, ‘ದಿ ಕಿಂಗ್’, ‘ಡ್ರೀಮ್ಸ್’, ‘ಸೇತುಪತಿ ಐಪಿಎಸ್’, ‘ವಾನತೈಪೋಲ’, ‘ಮೇಟ್ಟುಕುಡಿ’, ‘ವಲ್ಲರಸು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಝಾನ್ ಖಾನ್ ನಟಿಸಿದ್ದರು. ಅವರು ಮಾಡಿದ ಗಮನಾರ್ಹ ಪ್ರಾತ್ರಗಳನ್ನು ಅಭಿಮಾನಿಗಳು ಈಗ ನೆನಪು ಮಾಡಿಕೊಳ್ಳುತ್ತಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಕಝಾನ್ ಖಾನ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1992ರಲ್ಲಿ. ತಮಿಳು ಸಿನಿಮಾಗಳಿಂದ ಅವರ ಬಣ್ಣದ ಬದುಕು ಆರಂಭ ಆಯಿತು. ನಂತರ 1995ರಲ್ಲಿ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಅಲ್ಲಿಯೂ ಅವರಿಗೆ ಯಶಸ್ಸು ಸಿಕ್ಕಿತು.
ಇದನ್ನೂ ಓದಿ: ಸೋಮವಾರದಂದು ಅತಿ ಹೆಚ್ಚು ಹೃದಯಾಘಾತ ಸಂಭವಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಕಾರಣ ಹೀಗಿದೆ
ವಿಲನ್ ಪಾತ್ರಗಳಲ್ಲಿ ಅವರನ್ನು ನೋಡಲು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. 50ಕ್ಕೂ ಅಧಿಕ ಸಿನಿಮಾಗಳಲ್ಲಿ ಕಝಾನ್ ಖಾನ್ ನಟಿಸಿದ್ದರು. ಅನೇಕ ಸ್ಟಾರ್ ನಟರ ಜೊತೆ ಅವರು ತೆರೆ ಹಂಚಿಕೊಂಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:07 am, Tue, 13 June 23