ಮರೆ ಮಾಚಲು ಏನೂ ಇಲ್ದಿರುವಾಗ ಮರೆಮಾಡುವ ಭಯವೇಕೆ? ಸಂಜನಾಗೆ ಪ್ರಶಾಂತ್ ಸಂಬರಗಿ ಪ್ರಶ್ನೆ

|

Updated on: Sep 07, 2020 | 11:26 AM

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಶೆಯ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾ ಗಲ್ರಾನಿ ವಿರುದ್ಧ ಪ್ರಶಾಂತ್ ಸಂಬರಗಿ ಟೀಕಿಸಿದ್ದರು. ಇದಕ್ಕೆ ಪ್ರತಿ ಉತ್ತರವಾಗಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಸಂಜನಾ ಗಲ್ರಾನಿ ಕಿಡಿಕಾರಿದ್ದರು. ಪ್ರಶಾಂತ್ ಸಂಬರಗಿ.. ಅವನೊಬ್ಬ ಹಂದಿ, ಬೀದಿ ನಾಯಿಗೆ ಕೊಡೋ ಮರ್ಯಾದೆಯನ್ನೂ ನಾನು ಅವನಿಗೆ ಕೊಡಲ್ಲ’ ಎಂದು ವಾಗ್ದಾಳಿ ನಡೆಸಿದ್ದರು. ಈ ರೀತಿ ಇವರಿಬ್ಬರ ಮಧ್ಯೆ ವಾಗ್ದಾಳಿ ನಡೆಯುತ್ತಲೇ ಇದೆ. ಇಂದು ಪ್ರಶಾಂತ್ ಸಂಬರಗಿ ತಮ್ಮ ಟ್ವಿಟರ್ ಖಾತೆಯಲ್ಲಿ […]

ಮರೆ ಮಾಚಲು ಏನೂ ಇಲ್ದಿರುವಾಗ ಮರೆಮಾಡುವ ಭಯವೇಕೆ? ಸಂಜನಾಗೆ ಪ್ರಶಾಂತ್ ಸಂಬರಗಿ ಪ್ರಶ್ನೆ
Follow us on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಶೆಯ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾ ಗಲ್ರಾನಿ ವಿರುದ್ಧ ಪ್ರಶಾಂತ್ ಸಂಬರಗಿ ಟೀಕಿಸಿದ್ದರು. ಇದಕ್ಕೆ ಪ್ರತಿ ಉತ್ತರವಾಗಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಸಂಜನಾ ಗಲ್ರಾನಿ ಕಿಡಿಕಾರಿದ್ದರು.

ಪ್ರಶಾಂತ್ ಸಂಬರಗಿ.. ಅವನೊಬ್ಬ ಹಂದಿ, ಬೀದಿ ನಾಯಿಗೆ ಕೊಡೋ ಮರ್ಯಾದೆಯನ್ನೂ ನಾನು ಅವನಿಗೆ ಕೊಡಲ್ಲ’ ಎಂದು ವಾಗ್ದಾಳಿ ನಡೆಸಿದ್ದರು. ಈ ರೀತಿ ಇವರಿಬ್ಬರ ಮಧ್ಯೆ ವಾಗ್ದಾಳಿ ನಡೆಯುತ್ತಲೇ ಇದೆ. ಇಂದು ಪ್ರಶಾಂತ್ ಸಂಬರಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಕೆಲ ವಿಷಯವನ್ನು ಟ್ವೀಟ್ ಮಾಡಿದ್ದಾರೆ.

ನನ್ನನ್ನು ನನ್ನ ಹೆಸರಿನಿಂದ ಕರೆಯುವ ನಿನ್ನ ಕೆಟ್ಟ ಪ್ರತಿಕ್ರಿಯೆ ನನ್ನ ಸರಳ ಪ್ರಶ್ನೆಗೆ ಉತ್ತರ ನೀಡಿಲ್ಲ. ಮರೆ ಮಾಚಲು ಏನೂ ಇಲ್ಲದಿರುವಾಗ ಮರೆ ಮಾಡುವ ಭಯವೇಕೆ? ಈ ವೀಡಿಯೋದಲ್ಲಿ ಮುಖಾಮುಚ್ಚಲು ಏನಾದ್ರು ಇದೆಯಾ ಎಂದು 08.07.2019 ರಂದು ಕೊಲೊಂಬೊದಲ್ಲಿ ನಡೆದ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ನೀನು ಜೂಜಾಟ ಮತ್ತು ಡ್ರಗ್​ ಪೆಡ್ಲಿಂಗ್ ಮಾಡದಿದ್ದರೆ ಚಿಂತೆ ಏಕೆ? ಎಂದೂ ಪ್ರಶ್ನಿಸಿದ್ದಾರೆ.

ಶಾಸಕ ಜಮೀರ್ ಅಹ್ಮದ್​ಗೂ ಸುತ್ತಿಕೊಳ್ಳುತ್ತಾ ಮಾದಕ ನಂಟು?
ಇನ್ನು ಪ್ರಶಾಂತ್ ಸಂಬರಗಿ ಹಂಚಿಕೊಂಡಿರುವ ವಿಡಿಯೋದಿಂದ ಸಂಜನಾ ಜೊತೆಗೆ ಖೆಡ್ಡಾಗೆ ಬೀಳ್ತಾರಾ ಜಮೀರ್ ಅಹ್ಮದ್ ಎಂಬಂತಾಗಿದೆ. ಯಾಕೆಂದರೆ ಇದೇ ಪಾರ್ಟಿಗೆ ಜಮೀರ್ ಅಹ್ಮದ್ ಮತ್ತು ಸಂಜನಾ ಒಟ್ಟಿಗೆ ಹೋಗಿ ಬಂದಿದ್ದರಂತೆ.

ಓದಿ: ಇಮ್ತಿಯಾಜ್ ಖಾತ್ರಿ ಯಾರೆಂಬುದು ಗೊತ್ತಾ? ಬಾಲಿವುಡ್​ ನಂಟು ಜಾಲಾಡಿದ ಸಂಬರಗಿ

Published On - 10:56 am, Mon, 7 September 20