‘ಶುಗರ್ ಡ್ಯಾಡಿ, ಡ್ರಗ್ ಇನ್ ಸ್ಯಾಂಡಲ್​ವುಡ್’; ಬಿಗ್​ ಬಾಸ್​ನಿಂದ ಬಂದ ಬೆನ್ನಲ್ಲೇ ಪುಸ್ತಕ ಬರೆಯಲು ಮುಂದಾದ ಪ್ರಶಾಂತ್​ ಸಂಬರಗಿ

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಹಾಗೂ ಬಿಗ್​ ಬಾಸ್​ ಸ್ಪರ್ಧಿ ಪ್ರಶಾಂತ್​ ಸಂಬರಗಿ ಮಾತನಾಡಿದ್ದು, ‘2020ರ ಸೆಪ್ಟೆಂಬರ್‌ನಲ್ಲೇ ನಾನು ಈ ಮಾತನ್ನು ಹೇಳಿದ್ದೆ. ಅಂದು ನಾನು ಹೇಳಿದ ಮಾತುಗಳು ಈಗ ಸತ್ಯವಾಗಿದೆ’ ಎಂದಿದ್ದಾರೆ.

‘ಶುಗರ್ ಡ್ಯಾಡಿ, ಡ್ರಗ್ ಇನ್ ಸ್ಯಾಂಡಲ್​ವುಡ್’; ಬಿಗ್​ ಬಾಸ್​ನಿಂದ ಬಂದ ಬೆನ್ನಲ್ಲೇ ಪುಸ್ತಕ ಬರೆಯಲು ಮುಂದಾದ ಪ್ರಶಾಂತ್​ ಸಂಬರಗಿ
ಪ್ರಶಾಂತ್ ಸಂಬರಗಿ
Edited By:

Updated on: Aug 24, 2021 | 6:25 PM

ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಡ್ರಗ್ಸ್​ ಸೇವನೆ ಮಾಡಿರುವುದು ಖಚಿತವಾಗಿದೆ. ಇದರಿಂದ ಇವರಿಗೆ ಮತ್ತೆ ಸಂಕಷ್ಟ ಎದುರಾಗುವ ಭೀತಿ ಕಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಹಾಗೂ ಬಿಗ್​ ಬಾಸ್​ ಸ್ಪರ್ಧಿ ಪ್ರಶಾಂತ್​ ಸಂಬರಗಿ ಮಾತನಾಡಿದ್ದು, ‘2020ರ ಸೆಪ್ಟೆಂಬರ್‌ನಲ್ಲೇ ನಾನು ಈ ಮಾತನ್ನು ಹೇಳಿದ್ದೆ. ಅಂದು ನಾನು ಹೇಳಿದ ಮಾತುಗಳು ಈಗ ಸತ್ಯವಾಗಿದೆ’ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಪ್ರಶಾಂತ್ ಸಂಬರಗಿ, ‘ಡ್ರಗ್ಸ್ ಪ್ರಕರಣ ಬಯಲಿಗೆ ಬಂದಾಗ ನಟಿ ಸಂಜನಾ ಗಲ್ರಾನಿ ಹಲವು ನಾಟಕ ಮಾಡಿದ್ದರು. ನನಗೆ ಅವರು ಸ್ತ್ರೀವಿರೋಧಿ ಪಟ್ಟವನ್ನೂ ಕಟ್ಟಿದ್ದರು. ಈಗ ಅವರು ಡ್ರಗ್ಸ್ ಸೇವಿಸಿರುವುದು ವರದಿಯಿಂದ ಅಧಿಕೃತವಾಗಿದೆ. ಸಂಜನಾ, ರಾಗಿಣಿ ಜೈಲಿನಿಂದ ಬಿಡುಗಡೆ ಬಳಿಕ ಸಮಾಜಸೇವೆ ಮಾಡಿದ್ದಾರೆ. ಜನರಲ್ಲಿ ಒಳ್ಳೆಯ ಅಭಿಪ್ರಾಯ ಬರಬೇಕೆಂದು ಈ ನಾಟಕವಾಡಿದ್ದಾರೆ. ಇದೇ ಅಭಿನಯವನ್ನು ಸಿನಿಮಾದಲ್ಲೇ ಮಾಡಿದ್ದರೆ ಒಳ್ಳೇ ನಟಿಯರಾಗುತ್ತಿದ್ದರು. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ. ನಟಿಯರನ್ನು ಡ್ರಗ್ಸ್ ದಂಧೆಗೆ ಕರೆತಂದವರು ಯಾರು? ಈ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿಯನ್ನು ನೀಡುತ್ತೇನೆ’ ಎಂದಿದ್ದಾರೆ.

‘ಸ್ಯಾಂಡಲ್‌ವುಡ್ ನಟರು ವೀಕೆಂಡ್ ಮೋಜು ಮಸ್ತಿಗೆ ಮಾತ್ರ ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ಆದರೆ ಅವರು ಡ್ರಗ್ಸ್ ಮಾರಾಟ ಮಾಡಲು ಹೋಗಲ್ಲ. ಪೊಲೀಸರ ತನಿಖೆ ಚುರುಕಾದ ಬಳಿಕ ಇದೆಲ್ಲ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಪಾರ್ಟಿಗಳು ಕಡಿಮೆ ಆಗಿವೆ. ಆದರೆ ಇನ್ನೂ ಕೆಲವರು ಅದನ್ನೇ ಮುಂದುವರಿಸಿದ್ದಾರೆ. ತಮ್ಮ ನಡವಳಿಕೆ ಬದಲಿಸಿಕೊಳ್ಳದಿದ್ದರೆ ಹೆಸರು ಬಹಿರಂಗ ಮಾಡುತ್ತೇನೆ’ ಎಂದು ಅವರು ಎಚ್ಚರಿಸಿದ್ದಾರೆ.

‘ಡ್ರಗ್ಸ್ ವಿಚಾರವಾಗಿ ಅನಾಮಿಕರು ಮಾಹಿತಿ ನೀಡುತ್ತಿದ್ದಾರೆ. ಪರಿಶೀಲಿಸಿದಾಗ ಡ್ರಗ್ಸ್ ಬಳಸುತ್ತಿರುವುದು ಬಯಲಾಗಿದೆ. ಪ್ರಭಾವಿ ರಾಜಕಾರಣಿಗಳ ಬಗ್ಗೆಯೂ ಸ್ವಲ್ಪ ದಾಖಲೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪೊಲೀಸರಿಗೆ ದಾಖಲೆ ನೀಡುತ್ತೇನೆ. ಸ್ಯಾಂಡಲ್‌ವುಡ್ ನಟಿಯೊಬ್ಬರು ಡ್ರಗ್ಸ್‌ಗೆ ಅಡಿಕ್ಟ್ ಆಗಿದ್ದಾರೆ. ನಟಿಯ ಮಾವ, ತಾಯಿಯ ಜೊತೆ ನಾನು ಮಾತಾಡಿದ್ದೇನೆ. ಸ್ಯಾಂಡಲ್‌ವುಡ್‌ನಲ್ಲಿ ಇಂತಹ ಹಲವು ಡ್ರಗ್ಸ್ ಕೇಸ್‌ಗಳಿವೆ.  ಈ ಬಗ್ಗೆ ಪುಸ್ತಕ ಬರೆಯುತ್ತಿದ್ದೇನೆ. ‘ಶುಗರ್ ಡ್ಯಾಡಿ, ಡ್ರಗ್ ಇನ್ ಸ್ಯಾಂಡಲ್ ವುಡ್’ ಎಂದು ಪುಸ್ತಕಕ್ಕೆ ಹೆಸರಿಟ್ಟಿದ್ದೇನೆ’ ಎಂದಿದ್ದಾರೆ ಸಂಬರಗಿ.

ಇದನ್ನೂ ಓದಿ: ‘ಸುದೀಪ್​ ಅನುಮತಿ ಕೊಟ್ಟರೆ ಪ್ರಶಾಂತ್​ ಸಂಬರಗಿ ವಿರುದ್ಧ ನಾನು ನ್ಯಾಯಾಲಯಕ್ಕೆ ಹೋಗ್ತೀನಿ’: ಚಕ್ರವರ್ತಿ ಚಂದ್ರಚೂಡ್​

TV9 Web

TV9 Kannada

Read More
Loading...
Unable to load recommendations.
Follow Us