AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಶ್ ಸಿನಿಮಾ ಎಂದರೆ ಏನೋ ಒಂದು ಅದ್ಭುತ ವಿಷಯ ಇರುತ್ತೆ’; ‘ಟಾಕ್ಸಿಕ್’ ಬಗ್ಗೆ ಪ್ರಿಯಾ ಆನಂದ್ ಮಾತು

ನಟಿ ಪ್ರಿಯಾ ಆನಂದ್ ಕನ್ನಡ ಚಿತ್ರರಂಗದ ಜಾಗತಿಕ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ. 'ಕೆಜಿಎಫ್', 'ಕಾಂತಾರ'ದಂತಹ ಸಿನಿಮಾಗಳ ನಂತರ ಚಂದನವನದ ಮಾರುಕಟ್ಟೆ ವಿಸ್ತಾರವಾಗಿದ್ದು, ಯಶ್ ಒಬ್ಬ ನಾಯಕನಾಗಿ ಇಡೀ ಉದ್ಯಮಕ್ಕೆ ಸ್ಫೂರ್ತಿದಾಯಕ ಎಂದಿದ್ದಾರೆ. ಯಶ್ ಅವರ ಮುಂಬರುವ 'ಟಾಕ್ಸಿಕ್' ಚಿತ್ರದ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದು, ಅದ್ಭುತ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಯಶ್ ಸಿನಿಮಾ ಎಂದರೆ ಏನೋ ಒಂದು ಅದ್ಭುತ ವಿಷಯ ಇರುತ್ತೆ’; ‘ಟಾಕ್ಸಿಕ್’ ಬಗ್ಗೆ ಪ್ರಿಯಾ ಆನಂದ್ ಮಾತು
ಪ್ರಿಯಾ-ಯಶ್
ರಾಜೇಶ್ ದುಗ್ಗುಮನೆ
|

Updated on:Jun 25, 2026 | 7:45 AM

Share

ಮುಖ್ಯಾಂಶಗಳು

  • ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಯಶ್
  • ಒಬ್ಬ ನಟನಾಗಿ ಯಶ್ ಎಲ್ಲರಿಗೂ ಪ್ರೇರಣೆ ನೀಡುತ್ತಾರೆ ಎಂದ ಪ್ರಿಯಾ ಆನಂದ್
  • ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ನೋಡಲು ಉತ್ಸುಕರಾದ ಪ್ರಿಯಾ

ಕನ್ನಡ ಚಿತ್ರರಂಗ ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ‘ಕೆಜಿಎಫ್’, ‘ಕಾಂತಾರ’ದಂತಹ ಸಿನಿಮಾಗಳ ನಂತರ ಚಂದನವನದ ಮಾರುಕಟ್ಟೆ ಮತ್ತು ಸಿನಿಮಾಗಳ ವ್ಯಾಪ್ತಿ ದೊಡ್ಡದಾಗಿದೆ. ಇದೀಗ ಇದೇ ವಿಷಯವಾಗಿ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಪ್ರಿಯಾ ಆನಂದ್ (Priya Anand), ರಾಕಿಂಗ್ ಸ್ಟಾರ್ ಯಶ್ ಅವರ ಶ್ರಮ ಹಾಗೂ ಮುಂಬರುವ ‘ಟಾಕ್ಸಿಕ್’ ಸಿನಿಮಾ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಯಶ್ ಅವರ ಬಗ್ಗೆ ಮಾತನಾಡಿದ ಪ್ರಿಯಾ ಆನಂದ್, ‘ಕನ್ನಡ ಚಿತ್ರರಂಗಕ್ಕೆ ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಇಂತಹದೊಂದು ಮನ್ನಣೆ ಸಿಗಲು ಇದು ಸೂಕ್ತ ಸಮಯ. ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಯಶ್ ಅವರಿಗಿಂತ ಅತ್ಯುತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ. ಒಬ್ಬ ನಟನಾಗಿ ಅವರು ಎಲ್ಲರಿಗೂ ತುಂಬಾನೇ ಸ್ಫೂರ್ತಿ ನೀಡುತ್ತಾರೆ’ ಎಂದು ಹೊಗಳಿದ್ದಾರೆ.

ಇದೇ ವೇಳೆ ತಮ್ಮ ಹಳೆಯ ನೆನಪನ್ನು ಹಂಚಿಕೊಂಡ ಪ್ರಿಯಾ, ‘ನಾನು ರಾಜಕುಮಾರ ಸಿನಿಮಾ ಸೈನ್ ಮಾಡುವುದಕ್ಕೂ ವರ್ಷಗಳ ಮೊದಲು ಬೆಂಗಳೂರಿನ ಮಾಲ್ ಒಂದರಲ್ಲಿ ಯಶ್ ನಟನೆಯ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಸಿನಿಮಾ ನೋಡಿದ್ದೆ. ಯಶ್ ಅವರ ಅಭಿನಯವನ್ನು ನಾನು ಮೊದಲ ಬಾರಿಗೆ ಪರದೆ ಮೇಲೆ ನೋಡಿದ್ದು ಅದೇ ಚಿತ್ರದಲ್ಲಿ. ಅದಾದ ನಂತರ ಅವರ ‘ಗೂಗ್ಲಿ’ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೋಡಿದೆ’ ಎಂದಿದ್ದಾರೆ.

ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಪ್ರಿಯಾ ಆನಂದ್, ‘ಯಶ್ ಅವರು ಒಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರೆ ಅಲ್ಲಿ ಖಂಡಿತಾ ಏನೋ ಒಂದು ಅದ್ಭುತವಾದ ಹಾಗೂ ಎಕ್ಸೈಟಿಂಗ್ ಆದ ವಿಷಯ ಇದ್ದೇ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಯಶ್ ಅವರ ಮುಂದಿನ ಸಿನಿಮಾದಲ್ಲಿ ಏನಿರಬಹುದು ಎಂದು ನೋಡಲು ನಾನು ತುಂಬಾ ಕುತೂಹಲದಿಂದ ಕಾಯುತ್ತಿದ್ದೇನೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ನನಗೆ ತುಂಬಾನೇ ಎಕ್ಸೈಟ್‌ಮೆಂಟ್ ಇದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ನಾನು ನಿಮ್ಮ ಭಾಷೆ ಕಲಿತಿದ್ದು ಪುನೀತ್​​ಗಾಗಿ’; ಕನ್ನಡದ ಬಗ್ಗೆ ಪ್ರೀತಿ ಹೊರ ಹಾಕಿದ ಪ್ರಿಯಾ ಆನಂದ್

ಪ್ರಿಯಾ ಆನಂದ್ ಅವರು ಪುನೀತ್ ರಾಜ್​​ಕುಮಾರ್ ನಟನೆಯ ‘ರಾಜಕುಮಾರ’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಆ ಬಳಿಕ ಕೆಲವೇ ಕೆಲವು ಕನ್ನಡ ಚಿತ್ರಗಳನ್ನು ಅವರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Thu, 25 June 26

Follow Us