‘ನಾನು ನಿಮ್ಮ ಭಾಷೆ ಕಲಿತಿದ್ದು ಪುನೀತ್ಗಾಗಿ’; ಕನ್ನಡದ ಬಗ್ಗೆ ಪ್ರೀತಿ ಹೊರ ಹಾಕಿದ ಪ್ರಿಯಾ ಆನಂದ್
ನಟಿ ಪ್ರಿಯಾ ಆನಂದ್ ಅವರು ಪುನೀತ್ ರಾಜ್‌ಕುಮಾರ್ ಅವರಿಗಾಗಿ ಕನ್ನಡ ಕಲಿತೆ ಎಂದಿದ್ದಾರೆ. ‘ರಾಜಕುಮಾರ’ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ, ಪುನೀತ್ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು. ಇತ್ತೀಚೆಗೆ ‘ಬಲರಾಮನ ದಿನಗಳು’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ಕನ್ನಡ ಕಲಿಯಲು ಪ್ರೇರಣೆ ನೀಡಿದರು ಎಂದರು.

ನಟಿ ಪ್ರಿಯಾ ಆನಂದ್ (Priya Anand) ಅವರು ಕನ್ನಡದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಅವರು ಮೊದಲು ಕನ್ನಡದಲ್ಲಿ ನಟಿಸಿದ್ದು ಪುನೀತ್ ರಾಜ್‌ಕುಮಾರ್ ನಟನೆಯ ‘ರಾಜಕುಮಾರ’ ಸಿನಿಮಾದಲ್ಲಿ. ಪುನೀತ್ ವ್ಯಕ್ತಿತ್ವ ಅವರ ಮೇಲೆ ಬಹುವಾಗಿ ಪ್ರಭಾವ ಬೀರಿದೆ. ಈಗ ಪ್ರಿಯಾ ಆನಂದ್ ಅವರು ಕನ್ನಡದಲ್ಲಿ ನಟಿಸಿದ ‘ಬಲರಾಮನ ದಿನಗಳು’ ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾ ಆನಂದ್, ನಾನು ಕನ್ನಡ ಕಲಿತಿದ್ದು ಪುನೀತ್ಗಾಗಿ ಎಂದು ಹೇಳಿದ್ದಾರೆ.
ಪ್ರಿಯಾ ಆನಂದ್ ಹುಟ್ಟಿದ್ದು ತಮಿಳುನಾಡಿನಲ್ಲಿ. ಅವರು 2009ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಮೊದಲು ನಟಿಸಿದ್ದು ತಮಿಳಿನಲ್ಲಿ. 2017ರ ‘ರಾಜಕುಮಾರ’ ಚಿತ್ರದಲ್ಲಿ ನಟಿಸಿದರು. ಆ ಬಳಿಕ ಗಣೇಶ್ ನಟನೆಯ ‘ಆರೇಂಜ್’ ಚಿತ್ರದಲ್ಲಿ ನಟಿಸಿದರು. 2022ರ ‘ಜೇಮ್ಸ್’ ಚಿತ್ರದಲ್ಲೂ ನಟಿಸಿದ್ದರು ಅವರು. ಕಳೆದ ವರ್ಷ ರಿಲೀಸ್ ಆದ ‘ಕರಟಕ ಧಮನಕ’ ಚಿತ್ರದಲ್ಲೂ ಪ್ರಿಯಾ ನಟಿಸಿದ್ದಾರೆ. ಈಗ ಅವರು ವಿನೋಧ್ ಪ್ರಭಾಕರ್ ಅವರ ‘ಬಲರಾಮನ ದಿನಗಳು’ ಸಿನಿಮಾ ಮಾಡುತ್ತಿದ್ದಾರೆ.
ಈ ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಪ್ಪುಗೋಸ್ಕರ ನಾನು ಕನ್ನಡ ಕಲಿಯುತ್ತಿದ್ದೇನೆ. ನಾನು ರಾಜಕುಮಾರ ಶೂಟಿಂಗ್ಗಾಗಿ ಆಸ್ಟ್ರೇಲಿಯಾದಲ್ಲಿ ಅವನ್ನು ಭೇಟಿ ಮಾಡಿದೆ. ನೀವು ಜಾಸ್ತಿ ಕನ್ನಡ ಸಿನಿಮಾ ಮಾಡಬೇಕು, ಜಾಸ್ತಿ ಕನ್ನಡ ಮಾತನಾಡಬೇಕು ಎಂದು ನನಗೆ ಹೇಳಿದ್ದರು’ ಎಂದು ಕನ್ನಡದಲ್ಲೇ ಮಾತನಾಡಿದರು ಪ್ರಿಯಾ ಆನಂದ್.
View this post on Instagram
‘ಕರ್ನಾಟಕದ ಜನರು, ಆಹಾರ ಎಲ್ಲವನ್ನೂ ಅವರೇ ಪರಿಚಯಿಸಿದ್ದರು. ನನಗೆ ಮನೆಯಲ್ಲಿ ಮಾತನಾಡಲು ಯಾರೂ ಇಲ್ಲ. ಸೆಟ್ನಲ್ಲಿ ವಿನೋದ್ ಮೊದಲಾದವರು ಇದ್ದರು. ನಾನು ಅವರ ಬಳಿ ಮಾತನಾಡಲು ಪ್ರಯತ್ನಿಸಿದೆ’ ಎಂದು ಪ್ರಿಯಾ ಹೇಳಿದ್ದಾರೆ. ಅವರ ಕನ್ನಡ ನೋಡಿ ಖುಷಿ ಆಗಿದೆ.
ಇದನ್ನೂ ಓದಿ: ‘ಬಲರಾಮನ ದಿನಗಳು’ ಚಿತ್ರದಲ್ಲಿ ವಿನೋದ್ ಪ್ರಭಾಕರ್ಗೆ ಜೋಡಿಯಾದ ಪ್ರಿಯಾ ಆನಂದ್
ವಿನೋದ್ ಪ್ರಭಾಕರ್, ಪ್ರಿಯಾ ಆನಂದ್ ನಟಿಸಿದ್ದಾರೆ. ಕೆ. ಎಂ. ಚೈತನ್ಯ ‘ಬಲರಾಮನ ದಿನಗಳು’ ನಿರ್ದೇಶನ ಮಾಡಿದ್ದಾರೆ. ಅವರು ಈ ಮೊದಲು ‘ಆ ದಿನಗಳು’ ಚಿತ್ರ ನಿರ್ದೇಶನ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:49 pm, Thu, 18 December 25




