ಬೆಂಗಳೂರು: ನಟ ದರ್ಶನ್ ಹೆಸರಲ್ಲಿ ವಂಚನೆ ಆರೋಪಕ್ಕೆ ಸಂಬಂಧಿಸಿ ಇಂದು (ಜುಲೈ 13) ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ನಿರ್ಮಾಪಕ, ಅರುಣಾ ಕುಮಾರಿ ನನಗೆ ಏಪ್ರಿಲ್ನಿಂದ ಸಂಪರ್ಕದಲ್ಲಿದ್ದರು. ಸೀಸ್ ಆಗಿರುವ ಪ್ರಾಪರ್ಟಿ ಖರೀದಿ ಬಗ್ಗೆ ಸಂಪರ್ಕದಲ್ಲಿದ್ದರು. ಬಳಿಕ ದರ್ಶನ್ ವಿಚಾರ ಪ್ರಸ್ತಾಪ ಮಾಡಿದರು. ಲೋನ್ಗೆ ಏನಾದರೂ ಶ್ಯೂರಿಟಿ ಹಾಕ್ತಿದ್ದೀರಾ ಎಂದಿದ್ದರು. ಬಳಿಕ ದರ್ಶನ್ ಏನಾದರೂ ಶ್ಯೂರಿಟಿ ಹಾಕ್ತಿದ್ದೀರಾ ಎಂದು ಕೇಳಿದ್ದರು. ಅದಕ್ಕೆ ನಾನು ಇಬ್ಬರು ಶ್ಯೂರಿಟಿ ಹಾಕಿಲ್ಲವೆಂದು ಹೇಳಿದ್ದೆ ಎಂದು ನಿರ್ಮಾಪಕ ತಿಳಿಸಿದರು.
ನಾನು ಆಡಿಯೋದಲ್ಲಿ ಯಾವುದೇ ಅಶ್ಲೀಲ ಪದ ಬಳಸಿಲ್ಲ. ದರ್ಶನ್ ಸರ್ ಕೇಳಿ ನಾನು ಆಧಾರ್ ಕಾರ್ಡ್ ಕಳಿಸಿದ್ದೆ. ನಾನಾಗಲಿ, ಆಕೆಯಾಗಲಿ ಅಶ್ಲೀಲವಾಗಿ ಮಾತನಾಡಿಲ್ಲ. ನನ್ನ ಬಗ್ಗೆ ಈವರೆಗೂ ದರ್ಶನ್ ಆರೋಪ ಮಾಡಿಲ್ಲ. ಹರ್ಷಾ ವಿರುದ್ಧ ನಾನೂ ಆರೋಪ ಮಾಡಬಹುದು. ಹರ್ಷಾ ಮೈಸೂರಿನಲ್ಲಿ ದೂರು ದಾಖಲಿಸಿದ್ದರು. ನನ್ನ ನಂಬರ್ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. ಹರ್ಷಾ ಕೊಟ್ಟಿರುವ ದೂರಿನಲ್ಲಿರುವ ನಂಬರ್ ಪರಿಶೀಲಿಸಿದ್ದಾರಾ? ಎಂದು ನಿರ್ಮಾಪಕ ಉಮಾಪತಿ ಪ್ರಶ್ನಿಸಿದ್ದಾರೆ.
ಆರೋಪದ ಬಗ್ಗೆ ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಇಲ್ಲದಿರೋದನ್ನು ಇದೆ ಎಂದು ಸೃಷ್ಟಿಸಲು ನನಗೆ ಟೈಮ್ ಇಲ್ಲ. ಯಾರೇ ತಪ್ಪು ಮಾಡಿದ್ದರೂ ಇದು ಸಾಬೀತಾಗಲಿ ಎಂದು ಮಾತನಾಡಿದ ನಿರ್ಮಾಪಕ, ಬೆಂಗಳೂರು ಪೊಲೀಸರ ಮೇಲೆ ರಾಕೇಶ್ ಪಾಪಣ್ಣಗೆ ನಂಬಿಕೆ ಇಲ್ಲವಂತೆ. ಹಾಗಾಗಿ ಮೈಸೂರಿನಲ್ಲಿ ದೂರು ಕೊಟ್ಟಿದ್ದೇವೆ ಅಂತಾರೆ ಎಂದು ಅಭಿಪ್ರಾಯಪಟ್ಟರು.
ದರ್ಶನ್ ಸರ್ ಕಳೆದುಕೊಳ್ಳಲು ನನಗೂ ಇಷ್ಟ ಇಲ್ಲ. ಹಾಗೆ ದರ್ಶನ್ ಸರ್ಗೆ ನನ್ನನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ದರ್ಶನ್ ಸರ್ ಪಾರ್ಟಿ ಮಾಡಿಸಿದಾಗ ಸೋಷಿಯಲ್ಸ್ ಒಳಗೆ ನನ್ನ ಕಾರು ಬಿಟ್ಟಿಲ್ಲ. ದರ್ಶನ್ ಸರ್ ಹೇಳಿದರೂ ಕೂಡ ಒಳಗೆ ಬಿಟ್ಟಿರಲಿಲ್ಲ. ನಾನು ವಾಪಸ್ ಹೋಗುತ್ತಿರುವಾಗ ಮತ್ತೆ ಬಂದು ಕರೆದರು. ಪಾರ್ಟಿ ನಡೆದಿದ್ದು ಮದಗಜ ಚಿತ್ರೀಕರಣ ವೇಳೆ. ಆದರೆ ಲಾಕ್ಡೌನ್ ವೇಳೆ ಅರುಣಾ ಕುಮಾರಿ ಬಂದಿದ್ದು ಹೇಗೆ? ಎಂದು ಉಮಾಪತಿ ಪ್ರಶ್ನಿಸಿದ್ದಾರೆ.
ಮಲ್ಲೇಶ್ ಎನ್ನುವನನ್ನು ಏಕೆ ಟ್ರೇಸ್ ಮಾಡಿಲ್ಲ. 25 ಕೋಟಿ ರೂ. ಸಣ್ಣ ಮೊತ್ತವಲ್ಲ. ಸಿಕ್ಕಿದ್ದ ಆರೋಪಿ ಅರುಣಾ ಕುಮಾರಿಯನ್ನು ಬಿಟ್ಟಿದ್ದೇಕೆ. ವಿಚಾರಣೆ ಮುಗಿಯದೆ ಆಕೆಯನ್ನು ಬಿಟ್ಟಿದ್ದೇಕೆ. ನಾನು ಈ ಘಟನೆಯಿಂದ ಒಂದು ಬುದ್ಧಿ ಕಲಿತಿದ್ದೇನೆ. ಕೆಲಸ ಮುಗಿದ ಮೇಲೆ ಮನೆಗೆ ಬರಬೇಕೆಂದು ಬುದ್ಧಿ ಕಲಿತೆ ಎಂದು ನಿರ್ಮಾಪಕ ಹೇಳಿದರು.
ನನ್ನನ್ನು ಬಿಟ್ಟು ಸಿಸಿಬಿ ಕಚೇರಿಯಲ್ಲಿ ಏಕೆ ವಿಚಾರಣೆ ಮಾಡಿದರು. ಆಕೆಯನ್ನು ದರ್ಶನ್ ಮನೆಗೆ ಕರೆದುಕೊಂಡು ಹೋಗುತ್ತಾರೆ. ಆಗ ನನ್ನನ್ನು ಯಾಕೆ ಕರೆಯಲಿಲ್ಲ. ಯಾರೂ ಸಹ ಯಾರ ತಲೆ ತೆಗೆಯುವುದಕ್ಕೆ ಆಗುವುದಿಲ್ಲ. ನಾನು ಏನೆಂದು ಸಾಬೀತುಪಡಿಸಲು ಮಾತ್ರ ಹೋಗುತ್ತಿದ್ದೇನೆ. ನನಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ. ತನಿಖೆ ಮಾಡಿ ನನ್ನ ಮೇಲೆ ಆರೋಪ ಸಾಬೀತಾದರೆ ಶಿಕ್ಷೆ ಕೊಡಿ. ಮಂಡ್ಯ ರಾಜಕೀಯ ನಮಗೆ ಅರ್ಥ ಆಗುತ್ತೆ. ಆದರೆ, ನಮಗೆ ಸಿನಿಮಾ ರಾಜಕೀಯ ಅರ್ಥ ಆಗುವುದಿಲ್ಲ. ಈ ವಿಚಾರದಲ್ಲಿ ನನಗೂ, ದರ್ಶನ್ಗೆ ತಂದಿಡಲು ಯತ್ನಿಸಿದ್ದಾರೆ. ಅರುಣಾ ಕುಮಾರಿ ಏಕೆ ಹರ್ಷಾ ಜೊತೆ ಮಾತಾಡುತ್ತಾಳೆ. ನನ್ನ, ದರ್ಶನ್ ಜತೆ ಏಕೆ ಮಾತಾಡಲ್ಲ. ಆಕೆ ದೊಡ್ಡ ಕೇಡಿ ಇದ್ದಾಳೆ. ಆಕೆಗೆ ಬುದ್ಧಿ ಕಲಿಸಬೇಕು ನಿರ್ಮಾಪಕರೆ ಅಂತ ದರ್ಶನ್ ನನಗೆ ಫೋನ್ನಲ್ಲೇ ಹೇಳಿದ್ದರು ಎಂದು ಉಮಾಪತಿ ಸ್ಪಷ್ಟಪಡಿಸಿದರು.
ನನ್ನನ್ನ ದರ್ಶನ್ ಮೈಸೂರಿಗೆ ಬರಲು ಹೇಳಿದ್ದರು. ಬೆಳಗ್ಗೆ 10.30ರ ಬದಲು 11.30ಕ್ಕೆ ಹೋಗಿದ್ದೆ. ಫೋನ್ ಮಾಡಿದರೆ ಎರಡೂವರೆ ಗಂಟೆ ದರ್ಶನ್ ಸಿಗಲಿಲ್ಲ. ಈ ಮಧ್ಯೆ ಹೆಬ್ಬಾಳ ಠಾಣೆ ಪೊಲೀಸರಿಂದ ಕರೆ ಬಂತು. ಹರ್ಷಾ ದೂರು ಕೊಟ್ಟಿದ್ದಾರೆ ವಿಚಾರಣೆಗೆ ಬನ್ನಿ ಎಂದರು. ಆಮೇಲೆ ಎಸಿಪಿ ಒಬ್ಬರು ಮಾತಾಡಿ ಬರುವಂತೆ ಹೇಳಿದರು ಎಂದು ರಾಬರ್ಟ್ ನಿರ್ಮಾಪಕ ತಿಳಿಸಿದರು.
ಮಂಡ್ಯ ಬಳಿ ಅರೆಸ್ಟ್ ಮಾಡಿಸೋಣ ಅಂತ ಹರ್ಷಾ ಅಂತಾನೆ. ಇವನ್ಯಾರು ನನ್ನನ್ನು ಅರೆಸ್ಟ್ ಮಾಡಿಸೋಕೆ. ಇವನು ಮೈಸೂರು ಪೊಲೀಸರನ್ನು ಹ್ಯಾಂಡಲ್ ಮಾಡುತ್ತಾನೆ ಅಂದರೆ ಏನು ಅರ್ಥ. ನಮ್ಮ ಪಬ್ಗಳಿಗೆ ಪೊಲೀಸರು ಬರುತ್ತಾರೆ. ನಾನು ಹೇಳಿದಂತೆ ಆ ಪೊಲೀಸರು ಕೇಳುತ್ತಾರೆ ಅಂತ ಹರ್ಷ ಹೇಳುತ್ತಾನೆ. ಸುಮ್ಮನೆ ದರ್ಶನ್ ಇಮೇಜ್ಗೆ ಡ್ಯಾಮೇಜ್ ಮಾಡುತ್ತಿದ್ದಾರೆ. ನಾನು ದರ್ಶನ್ ಅವರಿಗೆ ಏನಾದರೂ ಇತ್ಯರ್ಥವಾಗಲಿ ಮಾತಾಡಬೇಡಿ ಎಂದು ಮನವಿ ಮಾಡಿದ್ದೆ. ಆಗ ಅವರು ಸರಿ ಅಂತ ಹೇಳಿದ್ದರು ಎಂದು ಉಮಾಪತಿ ಮಾಹಿತಿ ನೀಡಿದರು.
ಇದನ್ನೂ ಓದಿ
Darshan ಸ್ನೇಹಿತ ನಿರ್ಮಾಪಕ ಉಮಾಪತಿ, ಸಹೋದರನ ಹತ್ಯೆಗೂ ಆಗಿತ್ತು ಸ್ಕೆಚ್!| Challenging Star Case | Tv9Kannada
(producer Umapati says that I dont want to lose Darshan sir in press meet)
Published On - 9:55 am, Tue, 13 July 21