AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ಗೆ ವಂಚನೆ ಕೇಸ್​ಗೆ ಸ್ಫೋಟಕ ಟ್ವಿಸ್ಟ್; ಆಡಿಯೋ, ಚಾಟಿಂಗ್, ವಿಡಿಯೋ, ಸಿಸಿಟಿವಿ ಸಾಕ್ಷ್ಯ

ಬೆಂಗಳೂರು: ಒಂದಲ್ಲ.. ಎರಡಲ್ಲ.. ಬರೋಬ್ಬರಿ 25 ಕೋಟಿ ರೂಪಾಯಿ. ಸ್ಯಾಂಡಲ್ವುಡ್ ಸಾರಥಿ ದರ್ಶನ್ ಹೆಸರಲ್ಲಿ 25 ಕೋಟಿ ಲೋನ್ ಪಡೆಯೋಕೆ ದೊಡ್ಡ ಸಂಚೇ ನಡೆದಿತ್ತು. ಆದ್ರೀಗ ಆ ಸಂಚಿನ ಸೀಕ್ರೆಟ್ ಒಂದೊಂದಾಗೇ ಬಯಲಾಗುತ್ತಿದೆ. ವಂಚನೆಗೆ ಇಳಿದವರ ಅಸಲಿ ಮುಖವಾಡ ಸಾಕ್ಷ್ಯ ಸಮೇತ ಕಳಚುತ್ತಿದೆ.

ದರ್ಶನ್​ಗೆ ವಂಚನೆ ಕೇಸ್​ಗೆ ಸ್ಫೋಟಕ ಟ್ವಿಸ್ಟ್; ಆಡಿಯೋ, ಚಾಟಿಂಗ್, ವಿಡಿಯೋ, ಸಿಸಿಟಿವಿ ಸಾಕ್ಷ್ಯ
ನಟ ದರ್ಶನ್
Follow us
TV9 Web
| Updated By: ಆಯೇಷಾ ಬಾನು

Updated on: Jul 13, 2021 | 8:07 AM

25 ಕೋಟಿ ವಂಚನೆಗೆ ಹಾಕಿದ್ದ ಸ್ಕೆಚ್ ಈಗ ಎಳೆಎಳೆಯಾಗಿ ಜಗಜ್ಜಾಹೀರಾಗಿದೆ. ಸಾರಥಿ ಹೆಸರಲ್ಲಿ 25 ಕೋಟಿ ಲೋನ್ಗಾಗಿ ಮಹಿಳೆ ಏನೆಲ್ಲಾ ಮಾಡಿದ್ದ್ದಾಳೆ? ಯಾಱರನ್ನು ಭೇಟಿಯಾಗಿದ್ರು? ಯಾರ ಜತೆಗೆಲ್ಲಾ ಚಾಟ್ ಮಾಡಿದ್ದಾಳೆ? ಏನೆಲ್ಲಾ ತಂತ್ರ ಹೆಣೆದಿದ್ದಳು ಅನ್ನೋದನ್ನ ಶಾಕಿಂಗ್ ಸಾಕ್ಷಿಗಳು ಇಲ್ಲಿವೆ.

ಸ್ಫೋಟಕ ಟ್ವಿಸ್ಟ್ ನಂಬರ್ -1 : ಆಡಿಯೋ ಉಮಾಪತಿ ಜತೆ ಅರುಣಾಕುಮಾರಿ ಸಲುಗೆಯ ಮಾತು ಈ ಕೇಸ್ಗೆ ಮೊದಲ ಟ್ವಿಸ್ಟ್ ಅಂದ್ರೆ ಅದು ಆಡಿಯೋ.. ರಾಬರ್ಟ್ ನಿರ್ಮಾಪಕ ಉಮಾಪತಿ ಜತೆ ವಂಚಕಿ ಅರುಣಾಕುಮಾರಿ ಸಲುಗೆಯಿಂದ ಮಾತಾಡಿರುವ ವಾಟ್ಸಾಪ್ ಆಡಿಯೋ ಬಯಲಾಗಿದೆ. ಏ.8ರಿಂದ ನಿರಂತರವಾಗಿ ಉಮಾಪತಿ, ಅರುಣಾ ವಾಯ್ಸ್ ಮೆಸೇಜ್ ಮಾಡಿದ್ದಾರೆ.

ಸ್ಫೋಟಕ ಟ್ವಿಸ್ಟ್ ನಂಬರ್ -2 : ಚಾಟಿಂಗ್ ಉಮಾಪತಿಗೆ ಹಾರ್ಟ್ ಸಿಂಬಲ್ ಕಳಿಸಿದ ಲೇಡಿ ಇನ್ನು, ಎರಡನೇ ಸಾಕ್ಷ್ಯ ಅಂದ್ರೆ ಅದು ವಾಟ್ಸಾಪ್ ಚಾಟಿಂಗ್.. ಇಬ್ಬರೂ ತೀರಾ ಪರಿಚಿತರಂತೆ ಚಾಟ್ ಮಾಡಿದ್ದಾರೆ. ಅಲ್ದೆ, ಊಟ, ತಿಂಡಿ, ಗುಡ್ ಮಾರ್ನಿಂಗ್, ಗುಡ್ನೈಟ್ ಮತ್ತು ಲವ್ ಸಿಂಬಲ್ ಬಳಕೆ ಆಗಿದ್ದು, ಅನುಮಾನ ಹುಟ್ಟುಹಾಕಿದೆ.

ಸ್ಫೋಟಕ ಟ್ವಿಸ್ಟ್ ನಂಬರ್ -3 : ವಿಡಿಯೋ ರಾಬರ್ಟ್ ಫಾರ್ಮ್ ಹೌಸ್ಗೆ ‘ಬುಲ್ಬುಲ್’ ಭೇಟಿ ಮೂರನೇ ಸಾಕ್ಷ್ಯ ಅಂದ್ರೆ ಅದು ವಿಡಿಯೋ.. ವಂಚನೆ ಕೇಸ್ನಲ್ಲಿರುವ ಮಹಿಳೆ, ದಾಸನ ಫಾರ್ಮ್ ಹೌಸ್ಗೆ ಭೇಟಿ ನೀಡಿದ್ದಾಳೆ. ಮೈಸೂರಿನಲ್ಲಿರುವ ದಾಸನ ಫಾರ್ಮ್ ಹೌಸ್ಗೆ ಭೇಟಿ ನೀಡಿದ್ದು, ಕೇಸ್ಗೆ ಮತ್ತೊಂದು ಆಯಾಮ ನೀಡಿದೆ.

ಸ್ಫೋಟಕ ಟ್ವಿಸ್ಟ್ ನಂಬರ್ -4 : ಸಿಸಿಕ್ಯಾಮರಾ ದೃಶ್ಯ ದರ್ಶನ್ ಸ್ನೇಹಿತ ಹರ್ಷ ರೆಸ್ಟೋರೆಂಟ್ನಲ್ಲಿ ಅರುಣಾ ನಾಲ್ಕನೇ ಸಾಕ್ಷ್ಯವೇ ಸಿಸಿಟಿವಿ ದೃಶ್ಯ.. ದರ್ಶನ್ ಸ್ನೇಹಿತ ಹರ್ಷ ರೆಸ್ಟೋರೆಂಟ್ನಲ್ಲಿ ಆರೋಪಿ ಅರುಣಾಕುಮಾರಿ, ನಂದೀಶ್ ಹಾಗೂ ಮಧುಕೇಶವ್ ಮೂವರು ಸುತ್ತಾಡಿದ್ದಾರೆ. ಹರ್ಷ ಮಾಲೀಕತ್ವದ ಮೈಸೂರು ಯೂನಿಯನ್‌ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದು, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಆದ್ರೆ, ಯಾವ ಕೆಲಸಕ್ಕೆ ಬಂದಿದ್ರು? ಯಾಕೆ ಬಂದಿದ್ರು ಅನ್ನೋದು ನಿಗೂಢವಾಗಿದೆ.

ಅಸಲಿಗೆ ಉಮಾಪತಿ ಜೊತೆಗೆ ಈ ಅರುಣಾಕುಮಾರಿ ನಿಕಟ ಸಂಪರ್ಕ ಹೊಂದಿದ್ದಾಳೆ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತೆ. ಅಷ್ಟೇ ಅಲ್ಲ ಪ್ರಕರಣದಲ್ಲಿ ಅರುಣಾ ಕುಮಾರಿ ಹಲವು ಸುಳ್ಳುಗಳನ್ನು ಹೇಳಿರೋದು ಬಯಲಾಗಿದೆ. ಇನ್ನು ಕೇಸ್ ಬಗ್ಗೆ ನೋಡೋದಾರೆ, ದರ್ಶನ್‌ ಅವರಿಂದ ಶ್ಯೂರಿಟಿಗೆ ಸಹಿ ಹಾಕಿಸಿಕೊಂಡು 25 ಕೋಟಿ ರುಪಾಯಿ ಸಾಲ ಪಡೆದುಕೊಳ್ಳುವ ಪ್ರಯತ್ನ ನಡೆದಿದೆ ಅನ್ನೋದು ಆರೋಪ. ಆದ್ರೆ ಈ 25 ಕೋಟಿ ಯಾರ ಜೇಬಿಗೆ ಸೇರುವುದಿತ್ತು. ಇಷ್ಟೊಂದು ಹಣಕ್ಕೆ ದರ್ಶನ್‌ ಶ್ಯೂರಿಟಿ ಹಾಕ್ತಾರೆ ಎಂದು ಹೇಳಿ ವಂಚನೆಗೆ ಮುಂದಾಗಿರುವ ವ್ಯಕ್ತಿ ಅಸಲಿಗೆ ಯಾರು ಎಂಬುದು ಇದುವರೆಗೂ ಬಯಲಾಗಿಲ್ಲ. ಹೀಗಾಗೇ, ಇಲ್ಲಿ ಮಸಲತ್ತು ಮಾಡಿದ್ಯಾರು ಅನ್ನೋದು ತನಿಖೆಯಿಂದ ಬಯಲಾಗ್ಬೇಕಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆಗಳ್ಳತನ, ಮೆಟ್ರೋ ನಿಲ್ದಾಣಗಳ ಬಳಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್