AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮನೆಗಳ್ಳತನ, ಮೆಟ್ರೋ ನಿಲ್ದಾಣಗಳ ಬಳಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್

ಆರೋಪಿ ಇಮ್ರಾನ್ ಮೊದಲಿಗೆ ಮೆಟ್ರೋ ಬಳಿ ನಿಲ್ಲಿಸಿರುವ ಬೈಕ್ಗಳನ್ನು ಕದಿಯಲು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದ ಬಳಿಕ ಬೈಕ್ ವರ್ಕೌಟ್ ಆಗದೇ ಇದ್ದಾಗ ಮನೆಗಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ. ಸದ್ಯ ಈ ಕಳ್ಳನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮನೆಗಳ್ಳತನ, ಮೆಟ್ರೋ ನಿಲ್ದಾಣಗಳ ಬಳಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್
ಆರೋಪಿ ಇಮ್ರಾನ್ ಖಾನ್‌
TV9 Web
| Edited By: |

Updated on: Jul 13, 2021 | 7:34 AM

Share

ಬೆಂಗಳೂರು: ಮನೆಗಳ್ಳತನ, ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಇಮ್ರಾನ್ ಖಾನ್‌ನನ್ನು ಬ್ಯಾಟರಾಯನಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಟೋರಿಯಸ್ ಕಳ್ಳ ಇಮ್ರಾನ್ ಮೆಟ್ರೋ ನಿಲ್ದಾಣಗಳ ಬಳಿ ನಿಲ್ಲಿಸುತ್ತಿದ್ದ ಬೈಕ್ಗಳನ್ನು ಕದಿಯುತ್ತಿದ್ದ.

ಆರೋಪಿ ಇಮ್ರಾನ್ ಮೊದಲಿಗೆ ಮೆಟ್ರೋ ಬಳಿ ನಿಲ್ಲಿಸಿರುವ ಬೈಕ್ಗಳನ್ನು ಕದಿಯಲು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದ ಬಳಿಕ ಬೈಕ್ ವರ್ಕೌಟ್ ಆಗದೇ ಇದ್ದಾಗ ಮನೆಗಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ. ಸದ್ಯ ಈ ಕಳ್ಳನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಾಗೂ ಬಂಧಿತನಿಂದ ₹6 ಲಕ್ಷ ಮೌಲ್ಯದ 85 ಗ್ರಾಂ ಚಿನ್ನಾಭರಣ, 6 ಬೈಕ್ ಜಪ್ತಿ ಮಾಡಲಾಗಿದೆ.

ಈತ ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಬ್ಯಾಟರಾಯನಪುರ, ನಂದಿನಿ ಲೇಔಟ್, ಅಮೃತಹಳ್ಳಿ ಮೆಟ್ರೋ ನಿಲ್ದಾಣಗಳ ಬಳಿ ಬೈಕ್ ಕಳ್ಳತನ ಮಾಡಿದ್ದಾನೆ. ಹಾಗೂ ಕೆಂಗೇರಿ, ಕಾಮಾಕ್ಷಿಪಾಳ್ಯದಲ್ಲಿ ಮನೆಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ ಹಾಡಹಗಲೇ ಮನೆಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ ಮಾಡಿದ ಘಟನೆಯೊಂದು ಬೆಂಗಳೂರಿನ ವೀರನಪಾಳ್ಯದ ಸೋನಾ ಟವರ್ ಅಪಾರ್ಟ್‌ಮೆಂಟ್‌ನ ಮೊದಲನೇ ಮಹಡಿಯಲ್ಲಿ ನಡೆದಿದೆ. ಸ್ನೇಹಾ ಎಂಬುವವರಿಗೆ ಸೇರಿದ ಲ್ಯಾಪ್‌ಟಾಪ್ ಕಳ್ಳತನವಾಗಿದ್ದು, ಸೂಟು ಬೂಟು ಹಾಕಿಕೊಂಡು ಬಂದ ಕಳ್ಳ ಬಾಗಿಲು‌ ಓಪನ್ ಇರುವುದನ್ನು ನೋಡಿ ಮನೆ ಒಳಗೆ ನುಗ್ಗಿ ಲ್ಯಾಪ್​ಟಾಪ್​ ಹೊತ್ತೋಯ್ದಿದ್ದಾನೆ. ಸದ್ಯ ಕಳ್ಳತನದ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವೀರನಪಾಳ್ಯದಲ್ಲಿರುವ ಸೋನಾ ಟವರ್ ಅಪಾರ್ಟ್​ಮೆಂಟ್​ನ 4 ಮಹಡಿ ಇಡೀ ಓಡಾಡಿದ್ದ ವ್ಯಕ್ತಿ, ಓಪನ್​ ಇದ್ದ ಮನೆಗಳನ್ನೇ ಟಾರ್ಗೆಟ್​ ಮಾಡಿದ್ದಾನೆ. ಬಾಗಿಲು ಓಪನ್ ಇಟ್ಟು ಬಾಲ್ಕನಿಯಲ್ಲಿ ಸ್ನೇಹ ನಿಂತಿದ್ದರು, ಇನ್ನು ಸ್ನೇಹ ತಾಯಿ ಬೆಡ್ ರೂಂನಲ್ಲಿ ಮಲಗಿದ್ದರು. ಆದರೆ ಈ ವೇಳೆ ಹಾಲ್​ನಲ್ಲಿ ಯಾರು ಇರಲಿಲ್ಲ. ಇದನ್ನು ಕಿಟಕಿ ಮೂಲಕ ನೋಡಿ ಖಾತರಿ ಪಡಿಸಿಕೊಂಡ ಕಳ್ಳ, ನಂತರ ಒಳಗೆ ನುಗ್ಗಿ ಡೈನಿಂಗ್ ಟೇಬಲ್​ನಲ್ಲಿ ಇದ್ದ ಲ್ಯಾಪ್​ಟಾಪ್​ ಕದ್ದು ಪರಾರಿಯಾಗಿದ್ದಾನೆ.

ಜುಲೈ 7 ರಂದು ಮಧ್ಯಾಹ್ನ 3 ಗಂಟೆ 50 ನಿಮಿಷ ಸುಮಾರಿಗೆ ಈ ಘಟನೆ ನಡೆದಿದ್ದು, ಘಟ‌ನೆ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ನಿನ್ನೆ ( ಜುಲೈ 10) ಕೂಡ ಸೋನ ಟವರ್ ಅಪಾರ್ಟ್​ಮೆಂಟ್​ನಲ್ಲಿ ಕಳ್ಳತನವಾಗಿದ್ದು, ಬೆಳಗಿನ ಜಾವ 5.30 ರ ಸುಮಾರಿಗೆ ಬಂದ ಕಳ್ಳರು, ಮೊಬೈಲ್ ಅನ್ನು ಕಳ್ಳತನ ಮಾಡಿದ್ದಾರೆ.

ಇದನ್ನೂ ಓದಿ:ಪೊಲೀಸ್ ಮನೆಯಲ್ಲೇ ಕಳ್ಳತನ ಮಾಡಿ ಕ್ಷಮೆ ಪತ್ರ ಬರೆದಿಟ್ಟ ಖದೀಮ; ಮತ್ತೊಂದೆಡೆ ಕಳ್ಳನಿಗೆ ಮನೆ ಮಾಲೀಕನ ಜಾಣ ಪತ್ರ!