‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರಕ್ಕಾಗಿ ಕೈ ಜೋಡಿಸಿದ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಸತ್ಯ ಪ್ರಕಾಶ್​

Man Of The Match: ಕೊರೊನಾ ಎರಡನೇ ಅಲೆ ಹಾವಳಿ ನಂತರ, ಲಾಕ್​ಡೌನ್​ ಸಡಿಲಿಕೆ ಆಗಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಶೂಟಿಂಗ್​ ಆರಂಭಿಸಲಾಯಿತು. ಏಪ್ರಿಲ್​ನಲ್ಲಿ ಸೆಟ್ಟೇರಿದ ಈ ಚಿತ್ರಕ್ಕೆ ಈಗಾಗಲೇ ಬಹುತೇಕ ಶೂಟಿಂಗ್​ ಮುಗಿದಿದೆ.

‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರಕ್ಕಾಗಿ ಕೈ ಜೋಡಿಸಿದ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಸತ್ಯ ಪ್ರಕಾಶ್​
ಪುನೀತ್​ ರಾಜ್​ಕುಮಾರ್​, ಸತ್ಯ ಪ್ರಕಾಶ್​
Edited By:

Updated on: Jun 28, 2021 | 9:49 AM

‘ರಾಮಾ ರಾಮಾ ರೇ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ನಿರ್ದೇಶಕ ಸತ್ಯ ಪ್ರಕಾಶ್​. ಆ ಸಿನಿಮಾದಿಂದ ಅವರಿಗೆ ದೊಡ್ಡ ಖ್ಯಾತಿ ಸಿಕ್ಕಿತ್ತು. ಬಳಿಕ ‘ಒಂದಲ್ಲ ಎರಡಲ್ಲ’ ಚಿತ್ರಕ್ಕೆ ನಿರ್ದೇಶನ ಮಾಡಿ ಅವರು ಗಮನ ಸೆಳೆದರು. ನಂತರ ಅವರು ಪುನೀತ್​ ರಾಜ್​ಕುಮಾರ್​ ನಟನೆಯ ಚಿತ್ರಕ್ಕೆ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿತ್ತು. ಆದರೆ ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲೇ ಇಲ್ಲ. ಸದ್ಯಕ್ಕೆ ಆ ಪ್ರಾಜೆಕ್ಟ್​ ಮುಂದಕ್ಕೆ ಹೋಗಿದೆ. ಅದರ ನಡುವೆ ಮತ್ತೊಂದು ಸಿನಿಮಾಗಾಗಿ ಪುನೀತ್​ ಮತ್ತು ಸತ್ಯ ಪ್ರಕಾಶ್​ ಕೈ ಜೋಡಿಸಿದ್ದಾರೆ.

ಸತ್ಯ ಪ್ರಕಾಶ್​ ಅವರು ಈಗ ‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದ ಕಥೆ ಕೇಳಿ ಇಷ್ಟಪಟ್ಟಿರುವ ಪುನೀತ್​ ಅವರು ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಪಿಆರ್​ಕೆ ಪ್ರೊಡಕ್ಷನ್ಸ್​, ಸತ್ಯ ಮತ್ತು ಮಯೂರ ಪಿಕ್ಚರ್ಸ್​ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ‘ರಾಮಾ ರಾಮಾ ರೇ’ ಸಿನಿಮಾದಲ್ಲಿ ನಟಿಸಿದ್ದ ನಟರಾಜ್​ ಮತ್ತು ಧರ್ಮಣ್ಣ ಅವರು ‘ಮ್ಯಾನ್​ ಆಫ್​ ದಿ ಮ್ಯಾಚ್​’ನಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನುಳಿದವರೆಲ್ಲ ಹೊಸ ಕಲಾವಿದರು.

ಕೊರೊನಾ ಎರಡನೇ ಅಲೆ ಹಾವಳಿ ನಂತರ, ಲಾಕ್​ಡೌನ್​ ಸಡಿಲಿಕೆ ಆಗಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಶೂಟಿಂಗ್​ ಆರಂಭಿಸಲಾಯಿತು. ಏಪ್ರಿಲ್​ನಲ್ಲಿ ಸೆಟ್ಟೇರಿದ ಈ ಚಿತ್ರಕ್ಕೆ ಈಗಾಗಲೇ ಬಹುತೇಕ ಶೂಟಿಂಗ್​ ಮುಗಿದಿದೆ. ಉಳಿದ ಕೆಲವು ದೃಶ್ಯಗಳನ್ನು ಶೀಘ್ರದಲ್ಲೇ ಚಿತ್ರೀಕರಿಸಲಾಗುವುದು. ಜೊತೆಗೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಇಂಥ ಹೊಸಬರ ತಂಡದ ಜೊತೆ ಕೈ ಜೋಡಿಸಿರುವುದಕ್ಕೆ ಪುನೀತ್​ ಅವರಿಗೆ ಖುಷಿ ಇದೆ. ಇತ್ತೀಚೆಗೆ ಅವರು ಶೂಟಿಂಗ್​ ಸೆಟ್​ಗೆ ಭೇಟಿ ನೀಡಿದ್ದರು. ಇಡೀ ತಂಡಕ್ಕೆ ಶುಭ ಹಾರೈಸಿದರು.

ಇನ್ನು, ಪುನೀತ್​ಗೆ ಸತ್ಯಪ್ರಕಾಶ್​ ನಿರ್ದೇಶನ ಮಾಡಬೇಕಿರುವ ಸಿನಿಮಾ ಸದ್ಯಕ್ಕೆ ಕಾರಣಾಂತರಗಳಿಂದ ಮುಂದಕ್ಕೆ ಹೇಗಿದೆ. ಇನ್ನೇನು ಆ ಸಿನಿಮಾದ ಸ್ಕ್ರಿಪ್ಟ್​ ಅಂತಿಮವಾಗಬೇಕು ಎನ್ನುವಷ್ಟರಲ್ಲಿ ಕಳೆದ ವರ್ಷ ಲಾಕ್​ಡೌನ್​ ಆಗಿತ್ತು. ಪರಿಣಾಮ, ಪುನೀತ್​ ಅವರ ಹಲವು ಚಿತ್ರಗಳ ಕೆಲಸಗಳು ಮುಂದಕ್ಕೆ ಹೋದವು. ಹಾಗಾಗಿ ಸತ್ಯಪ್ರಕಾಶ್​ ನಿರ್ದೇಶನದಲ್ಲಿ ಪುನೀತ್​ ನಟಿಸಬೇಕಿರುವ ಚಿತ್ರ ಸೆಟ್ಟೇರುವುದು ಇನ್ನಷ್ಟು ತಡವಾಗಲಿದೆ. ಈಗ ಇಬ್ಬರೂ ‘ಮ್ಯಾನ್​ ಆಫ್​ ದಿ ಮ್ಯಾಚ್​’ ಚಿತ್ರಕ್ಕಾಗಿ ಜೊತೆಯಾಗಿದ್ದಾರೆ.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್​ ಸಿನಿಮಾ ಹಾಡನ್ನು ಮಧುರವಾಗಿ ಹಾಡಿದ ಕೊರಿಯಾ ಯುವತಿ

ವಿಶೇಷ ಹಾಡಿನ ಮೂಲಕ ಅಪ್ಪಾಜಿಯನ್ನು ನೆನಪಿಸಿಕೊಂಡ ‘ಭಾಗ್ಯವಂತ’ ಪುನೀತ್​ ರಾಜ್​ಕುಮಾರ್

Published On - 9:31 am, Mon, 28 June 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us