ರಾಜ್ಕುಮಾರ್ ಅವರಿಗೆ ಹಾಗೂ ಪುನೀತ್ ರಾಜ್ಕುಮಾರ್ಗೆ ಊಟದ ಬಗ್ಗೆ ವಿಶೇಷ ಪ್ರೀತಿ ಇತ್ತು. ರಾಜ್ಕುಮಾರ್ ಊಟ ಮಾಡೋಕೆ ಕುಳಿತರೆ ಒಂದೇ ಒಂದು ಅಗಳು ಕೂಡ ಅವರು ಬಟ್ಟಲಮೇಲೆ ಇರೋಕೆ ಬಿಡುತ್ತಿರಲಿಲ್ಲ. ಈಗ ರಾಜ್ಕುಮಾರ್ ಹಾಗೂ ಪುನೀತ್ ಒಟ್ಟಾಗಿ ಕುಳಿತು ಊಟ ಮಾಡುತ್ತಿರುವ ಅಪರೂಪದ ಫೋಟೋ ವೈರಲ್ ಆಗಿದೆ. ಅವರಿಗೆ ಊಟ ಬಡಿಸುತ್ತಿರೋದು ಖ್ಯಾತ ರಾಜಕಾರಣಿ.
ಈ ಫೋಟೋದಲ್ಲಿ ಇರೋದು ಬೇರೆ ಯಾರೂ ಅಲ್ಲ ಶಾಸಕ ಹಾಗೂ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರೋ ಜಮೀರ್ ಅಹ್ಮದ್. ಸ್ವತಃ ಜಮೀರ್ ಅಹ್ಮದ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಾಜ್ಕುಮಾರ್ ಕುಟುಂಬವನ್ನು ಆಮಂತ್ರಿಸಿ ಅವರು ಊಟ ಬಡಿಸಿದ್ದಾರೆ.
2 ಫೋಟೋಗಳನ್ನು ಜಮೀರ್ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ರಾಜ್ಕುಮಾರ್ ಹಾಗೂ ಪುನೀತ್ ಇದ್ದಾರೆ. ಪುನೀತ್ ಎದುರಲ್ಲಿ ಮುದ್ದೆ ಇದೆ. ನಾನ್ ವೆಜ್ ಊಟವನ್ನು ಜಮೀರ್ ಉಣ ಬಡಿಸುತ್ತಿದ್ದಾರೆ. ಇನ್ನು, ರಾಜ್ಕುಮಾರ್ ಪ್ಲೇಟ್ನಲ್ಲೂ ಮುದ್ದೆ ಹಾಗೂ ನಾನ್ವೆಜ್ ಇದೆ. ಅವರು ಆನಂದಿಸಿ ಊಟ ಮಾಡುತ್ತಿದ್ದಾರೆ.
ಮತ್ತೊಂದು ಫೋಟೋದಲ್ಲಿ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಜಮೀರ್ ಅಹ್ಮದ್ ಇದ್ದಾರೆ. ಜಮೀರ್ ನಗುನಗುತ್ತಾ ನಿಂತಿದ್ದಾರೆ. ‘ಕನ್ನಡ ಚಿತ್ರರಂಗದ ಲೆಜೆಂಡ್ಸ್ ದಿವಂಗತ ಡಾ.ರಾಜಕುಮಾರ್ ಮತ್ತು ದಿವಂಗತ ಪುನೀತ್ ಕುಮಾರ್ ಅವರೊಂದಿಗೆ ಮರೆಯಲಾಗದ ಕೆಲವು ಸುವರ್ಣ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
Sharing some of the unforgettable golden memories with the Legends of the Kannada film industry Late Dr.Rajkumar Ji and Late Shri.Puneet Kumar pic.twitter.com/Frb4z5699n
— B Z Zameer Ahmed Khan (@BZZameerAhmedK) September 28, 2024
ಇದನ್ನೂ ಓದಿ: ‘ಮುಂಗಾರು ಮಳೆ’ ಚಿತ್ರದ ಆಫರ್ ಗಣೇಶ್ ಕೈ ಸೇರಲು ಕಾರಣ ಆಗಿದ್ದೇ ಪುನೀತ್ ರಾಜ್ಕುಮಾರ್
ರಾಜ್ಕುಮಾರ್ ಹಾಗೂ ಪುನೀತ್ ಇಂದು ನಮ್ಮ ಜೊತೆ ಇಲ್ಲ. ಅವರು ಇಲ್ಲ ಎನ್ನುವ ನೋವು ಅಭಿಮಾನಿಗಳಿಗೆ ಎಂದಿಗೂ ಮಾಯ ಆಗುವಂಥದ್ದಲ್ಲ. ಪುನೀತ್ ಅವರು ನಿಧನ ಹೊಂದಿ ಮೂರು ವರ್ಷ ಕಳೆಯುತ್ತಾ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.