ಸಿನಿಮಾದಲ್ಲಿ ಮಾಡಿದ ಕೆಲಸವನ್ನು ನಿಜ ಜೀವನದಲ್ಲಿಯೂ ಮಾಡಿ ತೋರಿಸಿದ ಪುನೀತ್ ರಾಜ್​ಕುಮಾರ್

|

Updated on: Jun 26, 2021 | 7:33 PM

ಇತ್ತೀಚೆಗೆ ಸ್ಯಾಂಡಲ್​ವುಡ್​​ನಲ್ಲಿ ಡ್ರಗ್ಸ್ ಜಾಲ ಪತ್ತೆ ಆಗಿತ್ತು. ಸಾಕಷ್ಟು ಸೆಲೆಬ್ರಿಟಿಗಳ ಹೆಸರು ಇದರಲ್ಲಿ ಕೇಳಿ ಬಂದಿತ್ತು. ಈ ಬೆಳವಣಿಗೆ ನಂತರದಲ್ಲಿ ಬೆಂಗಳೂರು ಪೊಲೀಸರು ಮಾದಕ ದ್ರವ್ಯ ವಸ್ತುಗಳನ್ನು ಮಟ್ಟಹಾಕಬೇಕು ಎಂದು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಈಗ ಇದಕ್ಕೆ ಪುನೀತ್ ಕೂಡ ಧ್ವನಿಗೂಡಿಸಿದ್ದಾರೆ.

ಸಿನಿಮಾದಲ್ಲಿ ಮಾಡಿದ ಕೆಲಸವನ್ನು ನಿಜ ಜೀವನದಲ್ಲಿಯೂ ಮಾಡಿ ತೋರಿಸಿದ ಪುನೀತ್ ರಾಜ್​ಕುಮಾರ್
ಪುನೀತ್​ ರಾಜ್​ಕುಮಾರ್​
Follow us on

ಪುನೀತ್ ರಾಜ್​ಕುಮಾರ್ ನಟನೆಯ ‘ಯವರತ್ನ’ ಸಿನಿಮಾದಲ್ಲಿ ಡ್ರಗ್ ಮಟ್ಟ ಹಾಕಬೇಕು ಎನ್ನುವ ಸಂದೇಶವಿದೆ. ಶಿಕ್ಷಕ ವೃತ್ತಿ ಮಾಡುತ್ತಲೇ ಪುನೀತ್ ಡ್ರಗ್ಸ್ ಜಾಲವನ್ನು ನಾಶ ಮಾಡುವ ಕೆಲಸ ಮಾಡುತ್ತಾರೆ. ಈಗ ಅವರು ನಿಜ ಜೀವನದಲ್ಲೂ ಈ ಕಾರ್ಯ ಮಾಡುತ್ತಿದ್ದಾರೆ. ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಪುನೀತ್ ರಾಜ್​ಕುಮಾರ್ ಬೆಂಗಳೂರು ನಗರ ಪೊಲೀಸರ ಜತೆ ಕೈ ಜೋಡಿಸಿದ್ದಾರೆ.

ಇತ್ತೀಚೆಗೆ ಸ್ಯಾಂಡಲ್​ವುಡ್​​ನಲ್ಲಿ ಡ್ರಗ್ಸ್ ಜಾಲ ಪತ್ತೆ ಆಗಿತ್ತು. ಸಾಕಷ್ಟು ಸೆಲೆಬ್ರಿಟಿಗಳ ಹೆಸರು ಇದರಲ್ಲಿ ಕೇಳಿ ಬಂದಿತ್ತು. ಈ ಬೆಳವಣಿಗೆ ನಂತರದಲ್ಲಿ ಬೆಂಗಳೂರು ಪೊಲೀಸರು ಮಾದಕ ದ್ರವ್ಯ ವಸ್ತುಗಳನ್ನು ಮಟ್ಟಹಾಕಬೇಕು ಎಂದು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಈಗ ಇದಕ್ಕೆ ಪುನೀತ್ ಕೂಡ ಧ್ವನಿಗೂಡಿಸಿದ್ದಾರೆ.

ಬೆಂಗಳೂರು ಸಿಟಿ ಪೊಲೀಸ್ ಈ ಬಗ್ಗೆ ವಿಡಿಯೋ ಹಂಚಿಕೊಂಡಿದೆ. ಡ್ರಗ್ಸ್ ಇದು ನಮ್ಮ ಸಮಾಜಕ್ಕೆ ದೊಡ್ಡ ಕಂಟಕ. ಇದಕ್ಕೆ ಯಾರೂ ಬೇಕಿದ್ದರೂ ಬಲಿ ಆಗಬಹುದು. ಇದಕ್ಕೆ ಯಾರೂ ಬಲಿ ಆಗದಂತೆ ನೋಡಿಕೊಳ್ಳಲು ಪೊಲೀಸರ ಜತೆ ಕೈ ಜೋಡಿಸಿ ಇದರ ವಿರುದ್ಧ ನಾವೆಲ್ಲರೂ ಹೋರಾಡಬೇಕು. ಡ್ರಗ್ಸ್ ತೆಗೆದುಕೊಳ್ಳಬೇಡಿ. ಜೀವ ಬಹುಮುಖ್ಯ ಎಂದಿದ್ದಾರೆ ಪುನೀತ್​.

ಶಿಕ್ಷಣ ಹಾಗೂ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ‘ಯುವರತ್ನ’ ಸಿನಿಮಾ ಏಪ್ರಿಲ್ 1ರಂದು ತೆರೆಗೆ ಬಂದಿತ್ತು. ಆಗ ಕೊವಿಡ್ ಪ್ರಕರಣ ಹೆಚ್ಚಿತ್ತು. ಚಿತ್ರಮಂದಿರಗಳಲ್ಲಿ ಶೇ.50 ಭರ್ತಿಗೆ ಮಾತ್ರ ಸರ್ಕಾರ ಅವಕಾಶ ನೀಡಿತ್ತು. ಹೀಗಾಗಿ, ಸಿನಿಮಾ ಒಂದೇ ವಾರಕ್ಕೆ ಒಟಿಟಿಯಲ್ಲಿ ರಿಲೀಸ್ ಆಯಿತು. ಈ ಮೂಲಕ ಚಿತ್ರ ಹೆಚ್ಚು ಜನರನ್ನು ತಲುಪಿತು. ಸದ್ಯ, ಪುನೀತ್ ರಾಜ್​ಕುಮಾರ್ ‘ಜೇಮ್ಸ್’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೊವಿಡ್ ಲಾಕ್ಡೌನ್ ಇರುವ ಕಾರಣಕ್ಕೆ ಚಿತ್ರದ ಕೆಲಸಗಳು ನಿಂತಿವೆ.

ಇದನ್ನೂ ಓದಿ: ಕೊವಿಡ್​ ಬಗ್ಗೆ ಪುನೀತ್​ ರಾಜ್​ಕುಮಾರ್​ ಜಾಗೃತಿ; ಅಭಿಮಾನಿಗಳಿಗೆ ಕೊಟ್ರು ಒಂದಷ್ಟು ಟಿಪ್ಸ್​

 ವಿಶೇಷ ಹಾಡಿನ ಮೂಲಕ ಅಪ್ಪಾಜಿಯನ್ನು ನೆನಪಿಸಿಕೊಂಡ ‘ಭಾಗ್ಯವಂತ’ ಪುನೀತ್​ ರಾಜ್​ಕುಮಾರ್