Yuvarathnaa: ಮೃತ ಮಗನ ಫೋಟೋ ಜೊತೆ ಯುವರತ್ನ ನೋಡಿದ ಪಾಲಕರು; ಪುನೀತ್​ ಭಾವುಕ!

Puneeth Rajkumar: ಜನರು ಹಲವು ಬಗೆಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ ಮೈಸೂರಿನಲ್ಲಿ ನಡೆದ ಈ ಘಟನೆಯಿಂದ ಪುನೀತ್​ ರಾಜ್​ಕುಮಾರ್​ ಹೆಚ್ಚು ಎಮೋಷನಲ್​ ಆಗಿದ್ದಾರೆ.

Yuvarathnaa: ಮೃತ ಮಗನ ಫೋಟೋ ಜೊತೆ ಯುವರತ್ನ ನೋಡಿದ ಪಾಲಕರು; ಪುನೀತ್​ ಭಾವುಕ!
ಮಗನ ಫೋಟೋ ಜೊತೆ ಯುವರತ್ನ ಸಿನಿಮಾ ನೋಡಿದ ಹರಿಕೃಷ್ಣನ್​ ಪೋಷಕರು

Updated on: Apr 05, 2021 | 3:59 PM

ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಫ್ಯಾಮಿಲಿ ಪ್ರೇಕ್ಷಕರು ಹೆಚ್ಚು. ಅವರ ಪ್ರತಿ ಸಿನಿಮಾಗಳನ್ನೂ ಕೌಟುಂಬಿಕ ಪ್ರೇಕ್ಷಕರು ಇಷ್ಟಪಡುತ್ತಾರೆ. ಅಂಥ ಆಡಿಯನ್ಸ್​ಗೆ ಇಷ್ಟ ಆಗುವಂತಹ ಕಥೆಗಳನ್ನೇ ಪುನೀತ್​ ಆಯ್ಕೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ರಿಲೀಸ್​ ಆಗಿರುವ ಯುವರತ್ನ ಸಿನಿಮಾದಲ್ಲೂ ಆ ಟ್ರೆಂಡ್​ ಮುಂದುವರಿದಿದೆ. ಆದರೆ ಈ ಚಿತ್ರವನ್ನು ನೋಡುವ ಆಸೆ ಇಟ್ಟುಕೊಂಡಿದ್ದ ಅಭಿಮಾನಿಯೊಬ್ಬ ಕೆಲವೇ ದಿನಗಳ ಹಿಂದೆ ಮೃತಪಟ್ಟಿದ್ದ. ಆತನ ಪೋಷಕರು ಮಗನ ಫೋಟೋ ಇಟ್ಟುಕೊಂಡು ಚಿತ್ರಮಂದಿರದಲ್ಲಿ ಯುವರತ್ನ ಸಿನಿಮಾ ವೀಕ್ಷಿಸಿದ್ದಾರೆ. ಈ ಘಟನೆಗೆ ಪುನೀತ್​ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.

ಜನರು ಹಲವು ಬಗೆಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ ಮೈಸೂರಿನಲ್ಲಿ ನಡೆದ ಈ ಘಟನೆಯಿಂದ ಪುನೀತ್​ ಹೆಚ್ಚು ಎಮೋಷನಲ್​ ಆಗಿದ್ದಾರೆ. ಮೂರು ತಿಂಗಳ ಹಿಂದೆ ಹರಿಕೃಷ್ಣನ್ ಎಂಬ ಬಾಲಕ ಮೃತಪಟ್ಟಿದ್ದ. ಆತನಿಗೆ ಪುನೀತ್​ ರಾಜ್​ಕುಮಾರ್ ಬಗ್ಗೆ ಅಪಾರ ಅಭಿಮಾನವಿತ್ತು. ಯುವರತ್ನ ಸಿನಿಮಾ ನೋಡಬೇಕೆಂದು ಆಸೆ ಪಟ್ಟಿದ್ದ. ಈ ಕಾರಣದಿಂದ, ಮಗನ ಆಸೆಯಂತೆ ಪೋಷಕರು ಆತನ ಫೊಟೋ ಇಟ್ಟುಕೊಂಡು ಮೈಸೂರಿನ ಡಿಆರ್​​ಸಿ‌ ಮಲ್ಟಿಪ್ಲೆಕ್ಸ್​ನಲ್ಲಿ ‘ಯುವರತ್ನ’ ಸಿನಿಮಾ ನೋಡಿದ್ದಾರೆ.

ಈ ಬಗ್ಗೆ ಪುನೀತ್​ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ಮೈಸೂರಿನ ಮುರಳಿಧರ್ ಹಾಗು ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪವರ್​ ಸ್ಟಾರ್​ ಟ್ವೀಟ್​ ಮಾಡಿದ್ದಾರೆ. ಪುನೀತ್​ಗೆ ಮಾತ್ರವಲ್ಲದೇ ಅನೇಕ ಅಭಿಮಾನಿಗಳು ಈ ಘಟನೆಗೆ ಪ್ರತಿಕ್ರಿಯಿಸಿದ್ದಾರೆ.

ಸಂತೋಷ್​ ಆನಂದ್​ರಾಮ್​ ನಿರ್ದೇಶನದ ಈ ಸಿನಿಮಾದಲ್ಲಿ ಶಿಕ್ಷಣದ ಖಾಸಗೀಕರಣ, ಡ್ರಗ್ಸ್​ ಮಾಫಿಯಾ ಮತ್ತು ರ‍್ಯಾಗಿಂಗ್​ ಪಿಡುಗಿನ ಬಗ್ಗೆ ಸಂದೇಶ ನೀಡಲಾಗಿದೆ. ಹಾಗಾಗಿ ಯುವಜನತೆ ಮತ್ತು ಪೋಷಕರಿಗೆ ‘ಯುವರತ್ನ’ ಇಷ್ಟ ಆಗುತ್ತಿದೆ.

‘ಯುವರತ್ನ’ ಸಿನಿಮಾ ಏ.1ರಂದು ರಿಲೀಸ್​ ಆಗಿತ್ತು. ಆದರೆ ಬಿಡುಗಡೆಯಾದ ಎರಡೇ ದಿನಕ್ಕೆ ಶೇ.50 ಆಸನ ಮಿತಿ ಆದೇಶವನ್ನು ಸರ್ಕಾರ ಹೊರಡಿಸಿದ್ದರಿಂದ ಕೆಲವು ಸಮಯ ಗೊಂದಲ ಆಯಿತು. ನಂತರ ಆದೇಶ ಹಿಂಪಡೆದ ಸರ್ಕಾರ ಏ.7ರವರೆಗೂ ಹೌಸ್​ಫುಲ್​ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಹಾಗಾಗಿ ಚಿತ್ರತಂಡ ನಿರಾಳ ಆಗಿದೆ. ಹೌಸ್​ ಫುಲ್​ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಮಹಿಳೆಯರು ಮತ್ತು ಮಕ್ಕಳು ಕೂಡ ಮುಖ್ಯಮಂತ್ರಿಗಳಿಗೆ ಸೋಷಿಯಲ್​ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ: ಯುವರತ್ನನಿಗೆ ರಿಲೀಫ್: ಏಪ್ರಿಲ್ 7ರವರೆಗೂ ಥಿಯೇಟರ್​ ಹೌಸ್ ಫುಲ್​ಗೆ ಅವಕಾಶ

ಯುವರತ್ನ ಚಿತ್ರಕ್ಕೆ ತೊಂದರೆ: ಮೌನ ಮುರಿದ ಯಶ್​, ಶಿವರಾಜ್​ಕುಮಾರ್​!

Published On - 1:41 pm, Mon, 5 April 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us