
ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ ‘ಜೇಮ್ಸ್’ (James) ಚಿತ್ರವನ್ನು ವೀಕ್ಷಿಸಲು ಸಿನಿ ಪ್ರೇಮಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ಗಳು ಸಖತ್ ನಿರೀಕ್ಷೆ ಹುಟ್ಟಿಸಿವೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಪುನೀತ್ ಸೈನಿಕನ ಗೆಟಪ್ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದೀಗ ಚಿತ್ರತಂಡ ಮೊದಲೇ ತಿಳಿಸಿದಂತೆ ಟೀಸರ್ ರಿಲೀಸ್ ಮಾಡಿದೆ. ಟೀಸರ್ (James Teaser) ಅಭಿಮಾನಿಗಳ ಮನಗೆಲ್ಲುತ್ತಿದ್ದು, ಮೋಡಿ ಮಾಡುತ್ತಿದೆ. 1 ನಿಮಿಷ 27 ಸೆಕೆಂಡ್ಗಳ ಟೀಸರ್ನಲ್ಲಿ ‘ಜೇಮ್ಸ್’ನ ಒಂದು ಸಣ್ಣ ಪರಿಚಯವಿದೆ. ಪಕ್ಕಾ ಆಕ್ಷನ್ ಪ್ಯಾಕ್ ಸಿನಿಮಾ ಇದಾಗಿರಲಿದೆ ಎನ್ನುವದಕ್ಕೆ ಟೀಸರ್ ಸಾಕ್ಷಿ ಒದಗಿಸಿದೆ. ಅಪ್ಪುಗೆ ಶಿವಣ್ಣ ಕಂಠದಾನ ಮಾಡಿದ್ದು, ಒಂದು ಪವರ್ಫುಲ್ ಡೈಲಾಗ್ ಕೂಡ ಟೀಸರ್ನಲ್ಲಿದೆ. ‘ಭಾವನೆಗಳು ಬ್ಯುಸಿನೆಸ್ಗಿಂತ ದೊಡ್ಡದು- ಜೇಮ್ಸ್’ ಎಂಬ ಬರಹವನ್ನು ಟೀಸರ್ನಲ್ಲಿ ತೋರಿಸಲಾಗಿದೆ. ಈ ಮೂಲಕ ಜೇಮ್ಸ್ ಪಾತ್ರವೂ ಹೀಗೆಯೇ ಇರಲಿದೆ ಎಂಬುದನ್ನು ಚಿತ್ರತಂಡ ಪರೋಕ್ಷವಾಗಿ ತಿಳಿಸಿದೆ. ಡಾರ್ಕ್ ಮಾರ್ಕೆಟ್ ಕುರಿತ ಕತೆಯನ್ನು ಚಿತ್ರ ಒಳಗೊಂಡಿರಲಿದೆ ಎಂಬ ಸುಳಿವೂ ಇದೆ.
ಜೇಮ್ಸ್ ಟೀಸರ್ ಇಲ್ಲಿದೆ:
ಜೇಮ್ಸ್ ಟೀಸರ್ ಕುರಿತು ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್:
ಡಾ.ರಾಜ್ಕುಮಾರ್ ಪುತ್ರರಾದ ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಮೂವರನ್ನೂ ಒಟ್ಟಿಗೆ ತೆರೆಯ ಮೇಲೆ ಕಣ್ತುಂಬಿಕೊಳ್ಳಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಆದರೆ ಆ ಆಸೆ ಈಡೇರುವುದಕ್ಕೂ ಮುನ್ನವೇ ಪುನೀತ್ ರಾಜ್ಕುಮಾರ್ ಅವರು ಹೃದಯಾಘಾತದಿಂದ ಕಳೆದ ವರ್ಷ ಅ.29ರಂದು ನಿಧನರಾಗಿದ್ದು ಎಲ್ಲರಿಗೂ ತೀವ್ರ ನೋವುಂಟುಮಾಡಿತ್ತು. ಅಣ್ಣಾವ್ರ ಕುಟುಂಬದ ಕುಡಿಗಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವ ಅಭಿಮಾನಿಗಳ ಕನಸನ್ನು ‘ಜೇಮ್ಸ್’ ಚಿತ್ರತಂಡ ನನಸು ಮಾಡುತ್ತಿದೆ. ಕೆಲವೇ ದಿನಗಳ ಹಿಂದೆ ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರು ಈ ಚಿತ್ರದಲ್ಲಿ ನಟಿಸಿದ್ದು, ತಮ್ಮ ಪಾಲಿನ ಡಬ್ಬಿಂಗ್ ಕೂಡ ಮುಗಿಸಿದ್ದಾರೆ.
ಮಾರ್ಚ್ 17ರಂದು 5 ಭಾಷೆಯಲ್ಲಿ ತೆರೆಗೆ ಬರಲಿದೆ ಜೇಮ್ಸ್:
ಇದನ್ನೂ ಓದಿ:
ಪುನೀತ್ ರಾಜ್ಕುಮಾರ್ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್’ ಟ್ರೇಲರ್ನಲ್ಲಿ ನಗುವಿನ ಪ್ಯಾಕ್
‘ಲವ್ ಮಾಕ್ಟೇಲ್ 2’, ‘ಫೋರ್ವಾಲ್ಸ್’ ಸೇರಿ ಆರು ಚಿತ್ರಗಳು ರಿಲೀಸ್; ಇಲ್ಲಿದೆ ವಿವರ
Published On - 11:19 am, Fri, 11 February 22