ಪುನೀತ್ ನಟನೆಯ ‘ಜೇಮ್ಸ್’ (James) ಚಿತ್ರಕ್ಕೆ ಅಭಿಮಾನಿಗಳು ಬಹಳ ದಿನಗಳಿಂದ ಕಾದಿದ್ದಾರೆ. ಅಪ್ಪು ಹೀರೋ ಆಗಿ ನಟಿಸಿರುವ ಕೊನೆಯ ಚಿತ್ರ ‘ಜೇಮ್ಸ್’ ಮೇಲೆ ಕನ್ನಡಿಗರಿಗೆ ಭಾವನಾತ್ಮಕ ನಂಟಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ‘ಜೇಮ್ಸ್’ ಟೀಸರ್ ಹಾಗೂ ಪೋಸ್ಟರ್ಗಳು ಅಪಾರ ನಿರೀಕ್ಷೆ ಮೂಡಿಸಿದ್ದವು. ಇದೀಗ ಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ (ಮಾ.01) ‘ಜೇಮ್ಸ್’ ಚಿತ್ರದ ಹಾಡೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ. ಬಹಳ ಭಿನ್ನವಾದ ಅಪ್ಪುವಿನ ‘ಟ್ರೇಡ್ಮಾರ್ಕ್’ (Trademark Song) ಇರುವ ಹಾಡಿದು. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿಯೇ ಹಾಡು ಅಪಾರ ವೀಕ್ಷಣೆ ಗಳಿಸುತ್ತಿದ್ದು, ಅಭಿಮಾನಿಗಳ ಮನಸೂರೆಗೊಂಡಿದೆ. ಎಂಸಿ ವಿಕ್ಕಿ, ಅದಿತಿ ಸಾಗರ್, ಚಂದನ್ ಶೆಟ್ಟಿ, ಶರ್ಮಿಳಾ, ಯುವರಾಜ್ಕುಮಾರ್ ಹಾಗೂ ಚರಣ್ರಾಜ್ ಈ ಗೀತೆಯನ್ನು ಹಾಡಿದ್ದಾರೆ. ಚೇತನ್ ಕುಮಾರ್ ಬರೆದಿರುವ ಸಾಹಿತ್ಯಕ್ಕೆ ಚರಣ್ರಾಜ್ ಸಂಗೀತ ಸಂಯೋಜಿಸಿದ್ದಾರೆ. ‘ಇದು ಕೇವಲ ಹಾಡಲ್ಲ, ಎಲ್ಲಾ ಅಭಿಮಾನಿಗಳ ದನಿಯಿದು’ ಎಂದು ಹಾಡಿನ ಪ್ರಾರಂಭದಲ್ಲೇ ಸಾಲುಗಳು ಬರುತ್ತವೆ. ಅದಕ್ಕೆ ತಕ್ಕಂತೆ ಹಾಡು ಕೂಡ ಮೂಡಿಬಂದಿದೆ.
ಸಾಮಾನ್ಯವಾಗಿ ಲಿರಿಕಲ್ ಸಾಂಗ್ಗಳಿಗೆ ಒಂದು ಸಿದ್ಧಸೂತ್ರವನ್ನು ಫಾಲೋ ಮಾಡಲಾಗುತ್ತದೆ. ಸಿನಿಮಾದ ಸ್ಟಿಲ್ಗಳನ್ನು ಹಾಕಿ, ಹಿನ್ನೆಲೆಯಲ್ಲಿ ಹಾಡನ್ನು ಹಾಕಲಾಗುತ್ತದೆ. ಆದರೆ, ಜೇಮ್ಸ್ನ ‘ಟ್ರೇಡ್ಮಾರ್ಕ್’ ಇದಕ್ಕಿಂತ ಭಿನ್ನವಾಗಿದೆ. ‘ಟ್ರೇಡ್ಮಾರ್ಕ್ ಸಾಂಗ್ಅನ್ನು 5 ಗಾಯಕರು ಹಾಡಿದ್ದಾರೆ. ಫೋಟೋ ಮೇಲೆ ಲಿರಿಕ್ಸ್ ಹಾಕಿ ರಿಲೀಸ್ ಮಾಡುವ ಹಾಗೆ ಮಾಮೂಲಿಯಾಗಿ ಚಿತ್ರತಂಡ ಈ ಹಾಡನ್ನು ತಯಾರಿಸಿಲ್ಲ. ಇದು ಎಲ್ಲರ ಗಮನಸೆಳೆದಿದೆ. ಹಾಡಿನಲ್ಲಿ ಹಲವು ಸರ್ಪ್ರೈಸ್ಗಳಿವೆ. ಏನೇನು? ಇಲ್ಲಿದೆ ನೋಡಿ.
‘ಟ್ರೇಡ್ಮಾರ್ಕ್’ ಲಿರಿಕಲ್ ಸಾಂಗ್ ಇಲ್ಲಿದೆ:
ಪಿಆರ್ಕೆ ಯುಟ್ಯೂಬ್ನಲ್ಲಿ ‘ಜೇಮ್ಸ್’ನ ‘ಟ್ರೇಡ್ಮಾರ್ಕ್’ ಹಾಡಿನ ಕನ್ನಡ ಅವತರಣಿಕೆ ರಿಲೀಸ್ ಆಗಿದೆ. ಒಟ್ಟು 5 ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹಾಡಿಗೆ ಯುವರಾಜ್ಕುಮಾರ್ ಧ್ವನಿ ನೀಡಿರೋದು ವಿಶೇಷ. ಅಷ್ಟೇ ಅಲ್ಲ ಸ್ಯಾಂಡಲ್ವುಡ್ನ ಮುಂಚೂಣಿಯ ನಾಯಕಿಯರಾದ ರಚಿತಾ ರಾಮ್, ಆಶಿಕಾ ರಂಗನಾಥ್ ಹಾಗೂ ಶ್ರೀಲೀಲಾ ಈ ಹಾಡಿನಲ್ಲಿ ಹೆಜ್ಜೆಹಾಕಿದ್ದಾರೆ.
ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ‘ಜೇಮ್ಸ್’ಗೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶರತ್ ಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಮೊದಲಾದವರು ಬಣ್ಣಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಜೇಮ್ಸ್ ರಿಲೀಸ್ ಆಗಲಿದೆ. ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಜೇಮ್ಸ್ ತೆರೆಗೆ ಬರಲಿದೆ.
ಇದನ್ನೂ ಓದಿ:
James Teaser: ಪವರ್ಫುಲ್ ‘ಜೇಮ್ಸ್‘ ನೋಡಿ ಫ್ಯಾನ್ಸ್ ಫಿದಾ; ಇಲ್ಲಿದೆ ಮೈನವಿರೇಳಿಸುವ ಪುನೀತ್ ಆಕ್ಷನ್ ಫೋಟೋಗಳು
Published On - 11:14 am, Tue, 1 March 22