
ಇಂದು ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಜನ್ಮದಿನ. ಕಿರುತೆರೆಯಲ್ಲಿ ಮಿಂಚಿ ನಂತರ ಬೆಳ್ಳಿತೆರೆ ಪ್ರವೇಶಿಸಿದ ಅವರು ಪ್ರಸ್ತುತ ಕನ್ನಡದ ಮುಂಚೂಣಿಯ ನಾಯಕಿಯರಲ್ಲಿ ಒಬ್ಬರು. ಕನ್ನಡದ ಖ್ಯಾತ ನಾಯಕರೊಂದಿಗೆ ಈಗಾಗಲೇ ತೆರೆ ಹಂಚಿಕೊಂಡಿರುವ ಅವರು, ಪ್ರಸ್ತುತ ಹೊಸ ಮಾದರಿಯ ಚಿತ್ರಗಳನ್ನೂ ಒಪ್ಪಿಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಅನೌನ್ಸ್ ಆಗಿದ್ದ ‘ಶಬರಿ ಸರ್ಚಿಂಗ್ ಫಾರ್ ರಾವಣ’ ಚಿತ್ರವು ತನ್ನ ಹೆಸರಿನಿಂದಲೇ ಸಖತ್ ಸದ್ದು ಮಾಡಿತ್ತು. ಇದೀಗ ರಚಿತಾ ಅವರ ಜನ್ಮದಿನದ ಪ್ರಯುಕ್ತ ಚಿತ್ರದ ನೂತನ ಪೋಸ್ಟರ್ ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ.
‘ತಾನು ಬಹಳ ದಿನಗಳಿಂದ ಇದಕ್ಕಾಗಿ ಕಾಯುತ್ತಿದ್ದೆ. ಇದೀಗ ಅದು ನಿಮ್ಮ ಮುಂದಿದೆ’ ಎಂದು ಬರೆದುಕೊಂಡು ರಚಿತಾ ಟ್ವಿಟರ್ನಲ್ಲಿ ನೂತನ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್ನಲ್ಲಿ ಅಭಿಮಾನಿಗಳಿಗೆ ಬಹುದೊಡ್ಡ ಅಚ್ಚರಿ ಎದುರಾಗಿದೆ. ಕಾರಣ, ರಚಿತಾ ಇದುವರೆಗೂ ಕಾಣಿಸಿಕೊಳ್ಳದ ಗೆಟಪ್ನಲ್ಲಿ ಮಿಂಚುತ್ತಿದ್ದಾರೆ. ಸಣ್ಣ ಕೂದಲಿನ ಮಾಸ್ ಲುಕ್ನಲ್ಲಿ ಅವರು ಮಿಂಚುತ್ತಿದ್ದು, ಅವರ ಟೇಬಲ್ನಲ್ಲಿ ಒಂದು ಮುದ್ದಾದ ಬೆಕ್ಕೂ ಇದೆ. ಆಫೀಸರ್ ಲುಕ್ನಲ್ಲಿ ರಚಿತಾ ಕುಳಿತಿರುವುದು ಅವರ ಇದುವರೆಗಿನ ಚಿತ್ರಗಳಿಂದ ಇದು ಕಂಪ್ಲೀಟ್ ಡಿಫರೆಂಟ್ ಎನ್ನುವುದನ್ನು ಒತ್ತಿ ಹೇಳುತ್ತಿದೆ.
ರಚಿತಾ ಹಂಚಿಕೊಂಡ ಪೋಸ್ಟ್ ಇಲ್ಲಿದೆ:
ಈ ಚಿತ್ರದ ಮೂಲಕ ರಚಿತಾ ಹೊಸ ಮಾದರಿಯ ಚಿತ್ರಗಳಿಗೆ ತೆರೆದುಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಎದುರಾಗಿದೆ. ‘ಶಬರಿ ಸರ್ಚಿಂಗ್ ಫಾರ್ ರಾವಣ’ ಚಿತ್ರವನ್ನು ನವೀನ್ ಶೆಟ್ಟಿ ನಿರ್ದೇಶಿಸುತ್ತಿದ್ದು, ರಿವೆಂಜ್ ಥ್ರಿಲ್ಲರ್ ಮಾದರಿಯ ಕಥಾನಕ ಹೊಂದಿರಲಿದೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದು, ವಿಶಾಲ್ ಕುಮಾರ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಚಿತಾ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಘು ಮುಖರ್ಜಿ, ಅರ್ಚನಾ ಕೊಟ್ಟಿಗೆ ಮೊದಲಾದವರು ಬಣ್ಣ ಹಚ್ಚುತ್ತಿದ್ದಾರೆ.
‘ಲವ್ ಯೂ ರಚ್ಚು’ ಚಿತ್ರದ ನೂತನ ಹಾಡು ಬಿಡುಗಡೆ:
ರಚಿತಾ ಅಭಿನಯದ ಹಲವು ಚಿತ್ರಗಳು ತಮ್ಮ ಪೋಸ್ಟರ್ ಹಾಡುಗಳ ಮುಖಾಂತರ ಶುಭ ಕೋರುತ್ತಿದ್ದಾರೆ. ಗುರು ದೇಶಪಾಂಡೆ ನಿರ್ಮಾಣದ ಅಜಯ್ ರಾವ್ ನಟನೆಯ ‘ಲವ್ ಯೂ ರಚ್ಚು’ ಚಿತ್ರದ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಸಂಜಿತ್ ಹೆಗಡೆ ಧ್ವನಿಯಲ್ಲಿರುವ ಈ ಮೆಲೋಡಿ ಹಾಡನ್ನು ಸಿನಿ ಪ್ರೇಮಿಗಳು ಇಷ್ಟಪಟ್ಟಿದ್ದಾರೆ.
‘ನೋಡುತಾ ನನ್ನನೇ’ ಹಾಡು ಇಲ್ಲಿದೆ:
ಶಂಕರ್ ರಾಜ್ ನಿರ್ದೇಶನದ ‘ಲವ್ ಯೂ ರಚ್ಚು’ ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ ಸಂಯೋಜಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಎಲ್ಲರ ಮನಗೆದ್ದಿದೆ.
ಇದನ್ನೂ ಓದಿ:
ಅಭಿಷೇಕ್ ಅಂಬರೀಷ್ ಮತ್ತು ರಚಿತಾ ರಾಮ್ ಜನ್ಮದಿನ; ಕಾಮನ್ ಡಿಪಿ ರಿಲೀಸ್ ಮಾಡಿದ ಸುಮಲತಾ
ಡ್ರಗ್ಸ್ ಕೇಸ್: ಎನ್ಸಿಬಿ ಕಚೇರಿಯಲ್ಲಿ ಗಪ್ಚುಪ್ ಆಗಿ ಕುಳಿತ ಶಾರುಖ್ ಪುತ್ರ ಆರ್ಯನ್ ಖಾನ್; ಇಲ್ಲಿದೆ ವಿಡಿಯೋ
ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದ ಮಗ ಆರ್ಯನ್ಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಶಾರುಖ್ ಖಾನ್
Published On - 4:51 pm, Sun, 3 October 21