2011ರಲ್ಲಿ ರಿಲೀಸ್ ಆದ ‘ಸಂಜು ವೆಡ್ಸ್ ಗೀತಾ’ ಸಿನಿಮಾ (Sanju Weds Geetha) ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ನಾಗಶೇಖರ್ ಅವರು ಈ ಚಿತ್ರಕ್ಕೆ ಡೈರೆಕ್ಟ್ ಮಾಡಿದ್ದರು. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ (Ramya) ಕಾಂಬಿನೇಷನ್ ಜನರಿಗೆ ಇಷ್ಟವಾಗಿತ್ತು. ಈಗ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ. ಈಗ ಚಿತ್ರಕ್ಕೆ ನಾಯಕಿ ಫೈನಲ್ ಆಗಿದ್ದಾರೆ. ರಚಿತಾ ರಾಮ್ ಅವರು ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಈ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಪೋಸ್ಟರ್ ಹಂಚಿಕೊಳ್ಳಲಾಯಿತು. ಶ್ರೀನಗರ ಕಿಟ್ಟಿ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಕುತೂಹಲ ಮೂಡಿತ್ತು. ಈಗ ರಚಿತಾ ರಾಮ್ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ‘ಈ ಚಿತ್ರತಂಡದ ಜೊತೆ ಕೆಲಸ ಮಾಡೋಕೆ ಖುಷಿ ಇದೆ’ ಎಂದು ಅವರು ಬರೆದುಕೊಂಡಿದ್ದಾರೆ.
ರಚಿತಾ ರಾಮ್ಗೆ ಈ ಸಿನಿಮಾದಲ್ಲಿ ನಟಿಸಲು ಆಸಕ್ತಿ ಇದೆ ಎಂದು ಈ ಮೊದಲು ವರದಿ ಆಗಿತ್ತು. ಈ ವರದಿ ನಿಜವಾಗಿದೆ. ‘ಸಂಜು ವೆಡ್ಸ್ ಗೀತಾ 2’ ಸಿನಿಮಾಗೆ ನಾಗಶೇಖರ್ ಅವರೇ ಬಂಡವಾಳ ಹೂಡುತ್ತಿದ್ದಾರೆ. 2024ರ ದಸರಾ ಹಬ್ಬಕ್ಕೆ ಈ ಚಿತ್ರ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
‘ಸಂಜು ವೆಡ್ಸ್ ಗೀತಾ’ ಚಿತ್ರದಲ್ಲಿ ರಮ್ಯಾ ನಟಿಸಿದ್ದರು. ಅವರೇ ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಅವರೇ ಈ ಸಿನಿಮಾದಲ್ಲಿ ನಾಯಕಿ ಆಗಬೇಕು ಎಂದು ರಮ್ಯಾ ಅಭಿಮಾನಿಗಳು ಬಯಸಿದ್ದರು.
ಇದನ್ನೂ ಓದಿ: ‘ಸಂಜು ವೆಡ್ಸ್ ಗೀತಾ 2’ ಸಿನಿಮಾಗೆ ರಚಿತಾ ರಾಮ್ ನಾಯಕಿ? ನಾಗಶೇಖರ್ ಜೊತೆ ನಡೆದಿದೆ ಮಾತುಕತೆ
ರಚಿತಾ ರಾಮ್ ಬೇಡಿಕೆಯ ನಟಿ ಆಗಿದ್ದಾರೆ. ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್ಗಳಿವೆ. ‘ಮ್ಯಾಟ್ನಿ’, ‘ಶಬರಿ’, ‘ಲವ್ ಮಿ ಆರ್ ಹೇಟ್ ಮಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ಮ್ಯಾಟ್ನಿ’ ಸಿನಿಮಾ ಕುತೂಹಲ ಮೂಡಿಸಿದೆ. ‘ಅಯೋಗ್ಯ’ ಚಿತ್ರದ ಬಳಿಕ ಸತೀಶ್ ‘ನೀನಾಸಂ’ ಮತ್ತು ರಚಿತಾ ರಾಮ್ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ರಚಿತಾ ರಾಮ್ಗೆ ಬೇಡಿಕೆ ಇದೆ. ‘ಭರ್ಜರಿ ಬ್ಯಾಚುಲರ್’ ರಿಯಾಲಿಟಿ ಶೋನಲ್ಲಿ ಅವರು ಜಡ್ಜ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:42 pm, Sat, 22 July 23