AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿಚಂದ್ರನ್ ಪ್ರಕಟಿಸುವ ನಿರ್ಧಾರಕ್ಕೆ ಬದ್ಧರಾಗ್ತಾರಾ ಸುದೀಪ್​-ಕುಮಾರ್; ಭಾನುವಾರ ಸಿಗಲಿದೆ ಉತ್ತರ

ಶುಕ್ರವಾರ (ಜುಲೈ 21) ಸಂಧಾನ ಸಭೆ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಸುದೀಪ್, ಎಂಎನ್ ಕುಮಾರ್ ಅವರು ಭಾಗಿ ಆಗಿದ್ದರು. ರವಿಚಂದ್ರನ್ ಅವರು ಇದರ ನೇತೃತ್ವ ವಹಿಸಿಕೊಂಡಿದ್ದರು.

ರವಿಚಂದ್ರನ್ ಪ್ರಕಟಿಸುವ ನಿರ್ಧಾರಕ್ಕೆ ಬದ್ಧರಾಗ್ತಾರಾ ಸುದೀಪ್​-ಕುಮಾರ್; ಭಾನುವಾರ ಸಿಗಲಿದೆ ಉತ್ತರ
ರವಿಚಂದ್ರನ್, ಸುದೀಪ್, ಕುಮಾರ್
ರಾಜೇಶ್ ದುಗ್ಗುಮನೆ
|

Updated on:Jul 22, 2023 | 11:18 AM

Share

ಕಿಚ್ಚ ಸುದೀಪ್ (Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ ಮಧ್ಯೆ ಕಳೆದ ಕೆಲ ದಿನಗಳಿಂದ ಜಟಾಪಟಿ ನಡೆಯುತ್ತಲೇ ಇತ್ತು. ಸುದೀಪ್ ವಿರುದ್ಧ ಕುಮಾರ್ (MN Kumar) ಅವರು ವಂಚನೆ ಆರೋಪ ಮಾಡಿದ್ದರು. ಹಣ ಪಡೆದು ಕಾಲ್​ಶೀಟ್ ನೀಡಿಲ್ಲ ಎಂದು ದೂರಿದ್ದರು. ಇದನ್ನು ಸುದೀಪ್ ಅಲ್ಲಗಳೆದಿದ್ದರು. ಈ ಪ್ರಕರಣದಲ್ಲಿ ಸುದೀಪ್ ಕೋರ್ಟ್​ ಮೆಟ್ಟಿಲೇರಿದರು. ಕುಮಾರ್ ಅವರು ಇದನ್ನು ವಿರೋಧಿಸಿ ಫಿಲ್ಮ್​ ಚೇಂಬರ್ ಎದುರು ಪ್ರತಿಭಟನೆಗೆ ಕುಳಿತರು. ಈಗ ಈ ಪ್ರಕರಣ ಕೊನೆಗೊಳ್ಳುವ ಸಾಧ್ಯತೆ ಗೋಚರವಾಗಿದೆ.

ಶುಕ್ರವಾರ (ಜುಲೈ 21) ಸಂಧಾನ ಸಭೆ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಸುದೀಪ್, ಎಂಎನ್ ಕುಮಾರ್ ಅವರು ಭಾಗಿ ಆಗಿದ್ದರು. ರವಿಚಂದ್ರನ್ ಅವರು ಇದರ ನೇತೃತ್ವ ವಹಿಸಿಕೊಂಡಿದ್ದರು. ಈ ಸಭೆ ಸತತ ಎಳು ಗಂಟೆಗಳ ಕಾಲ ನಡೆದಿತ್ತು. ಈ ವೇಳೆ ಸುದೀಪ್ ಹಾಗೂ ಎಂಎನ್ ಕುಮಾರ್ ಅವರೂ ಪರಸ್ಪರ ಮಾತುಕತೆ ಮಾಡಿಕೊಂಡಿದ್ದಾರೆ. ಸಂಧಾನ ಸಭೆ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಭಾನುವಾರ (ಜುಲೈ 22) ನಿರ್ಧಾರ ಪ್ರಕಟ ಆಗಲಿದೆ.

ಭಾಮ ಹರೀಶ್ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ‘ಫಿಲ್ಮ್​ ಚೇಂಬರ್ ಹಾಗೂ ಹಿರಿಯ ನಟರ ಸಮ್ಮುಖದಲ್ಲಿ ಸಮಸ್ಯೆ ಬಗೆ ಹರಿಯಬೇಕು ಎಂಬ ಕಾರಣದಿಂದಲೇ ಸಭೆ ಮಾಡಲಾಗಿತ್ತು. ಈಗಾಗಲೇ ಇಬ್ಬರೂ ತಮ್ಮ ತಮ್ಮ ಅಭಿಪ್ರಾಯವನ್ನು ರವಿಚಂದ್ರನ್ ಎದುರು ಹೇಳಿಕೊಂಡಿದ್ದಾರೆ. ಸಂಧಾನ ಸಭೆಯಲ್ಲಿ ಸುದೀಪ್ ಎಂಎನ್ ಕುಮಾರ್, ಭಾಮಾ ಹರೀಶ್, ಉಮೇಶ್ ಬಣಕಾರ್ ಭಾಗಿಯಾಗಿದ್ರು.  ಇಬ್ಬರ ಪರಸ್ಪರ ವಾದಗಳನ್ನ ಆಲಿಸಲಾಗಿದೆ. ನಾಳೆ ಬಹುತೆಕ ನಿರ್ಧಾರ ಪ್ರಕಟ ಆಗುತ್ತದೆ. ಇಬ್ಬರೂ ಒಪ್ಪಬೇಕಾದ ನಿರ್ಧಾರ ರವಿಚಂದ್ರನ್ ಅವರು ಪ್ರಕಟಿಸಲಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ: ರವಿಚಂದ್ರನ್ ಕೊಟ್ಟ;ಭರವಸೆ ಬಗ್ಗೆ ಎಂಎನ್​ ಕುಮಾರ್​ಗೆ ಭರವಸೆ: ಇತ್ಯರ್ಥವಾಗುತ್ತಾ ವಿವಾದ?

ಇತ್ತೀಚೆಗೆ ಮಾತನಾಡಿದ್ದ ರವಿಚಂದ್ರನ್ ಅವರು, ‘ನಾನು ಎಂಟ್ರಿ ಕೊಟ್ಟೆ ಅಂದಮೇಲೆ ಇಬ್ಬರೂ ನನ್ನ ನಿರ್ಧಾರ ಒಪ್ಪಬೇಕು. ಹಾಗಿದ್ದರೆ ಮಾತ್ರ ನಾನು ಎಂಟ್ರಿ ಕೊಡುತ್ತೇನೆ’ ಎಂದಿದ್ದರು. ಈಗ ಅವರು ಸಂಧಾನ ಸಭೆಯ ನೇತೃತ್ವ ವಹಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:57 am, Sat, 22 July 23