Radhika Pandit: ಪುನೀತ್ ನಿಧನದ​ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ರಾಧಿಕಾ ಪಂಡಿತ್​

Radhika Pandit: ಪುನೀತ್​ ರಾಜ್​ಕುಮಾರ್​ ಹಾಗೂ ರಾಧಿಕಾ ಪಂಡಿತ್​ ‘ದೊಡ್ಮನೆ ಹುಡುಗ’, ‘ಹುಡುಗರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಹೀಗಾಗಿ, ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಪುನೀತ್​ ನಿಧನ ಹೊಂದಿರುವ ವಿಚಾರ ರಾಧಿಕಾಗೆ ತೀವ್ರ ನೋವನ್ನು ತಂದಿದೆ.

Radhika Pandit: ಪುನೀತ್ ನಿಧನದ​ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ರಾಧಿಕಾ ಪಂಡಿತ್​
ರಾಧಿಕಾ-ಪುನೀತ್​
Updated By: ರಾಜೇಶ್ ದುಗ್ಗುಮನೆ

Updated on: Nov 10, 2021 | 1:08 PM

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಅಕಾಲಿಕ ಮರಣ ಹೊಂದಿ 13 ದಿನ ಕಳೆದಿದೆ. ಆದಾಗ್ಯೂ ಅಭಿಮಾನಿಗಳ ನೋವು ಕೊಂಚವೂ ಕಡಿಮೆ ಆಗಿಲ್ಲ. 12ನೇ ದಿನ (ನವೆಂಬರ್​ 09) ಪುನೀತ್​ ರಾಜ್​ಕುಮಾರ್​ ಕುಟುಂಬದಿಂದ ಅನ್ನ ಸಂತರ್ಪಣೆ ಏರ್ಪಾಡು ಮಾಡಲಾಗಿತ್ತು. ಈ ವೇಳೆ ಆಗಮಿಸಿ ಊಟ ಸ್ವೀಕರಿಸಿದ ಸಾಕಷ್ಟು ಅಭಿಮಾನಿಗಳು ಅಳುತ್ತಲೇ ಇದ್ದರು. ಇದು ಊಟವಲ್ಲ, ಪ್ರಸಾದ ಎಂದು ಭಾವುಕರಾಗಿದ್ದರು. ಈ ದೃಶ್ಯಗಳು ಮನ ಕಲಕುವಂತಿತ್ತು. ಇನ್ನು, ಸಾಕಷ್ಟು ಸ್ಟಾರ್​ಗಳು ಪುನೀತ್​ ನಿವಾಸಕ್ಕೆ ಆಗಮಿಸಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ (Ashwini Puneeth Rajkumar) ಸಾಂತ್ವನ ಹೇಳಿದ್ದಾರೆ. ಪುನೀತ್​ ಜತೆ ತೆರೆ ಹಂಚಿಕೊಂಡ ಸಾಕಷ್ಟು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡಿದ್ದಾರೆ. ಈಗ ರಾಧಿಕಾ ಪಂಡಿತ್​ (Radhika Pandit) ಕೂಡ ಈ ಬಗ್ಗೆ ಪೋಸ್ಟ್​ ಮಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಹಾಗೂ ರಾಧಿಕಾ ಪಂಡಿತ್​ ‘ದೊಡ್ಮನೆ ಹುಡುಗ’, ‘ಹುಡುಗರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಹೀಗಾಗಿ, ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಪುನೀತ್​ ನಿಧನ ಹೊಂದಿರುವ ವಿಚಾರ ರಾಧಿಕಾಗೆ ತೀವ್ರ ನೋವನ್ನು ತಂದಿದೆ. ಆದರೆ, ಈ ಬಗ್ಗೆ ಅವರು ಯಾವುದೇ ಪೋಸ್ಟ್ ಹಾಕಿರಲಿಲ್ಲ. ಈಗ ರಾಧಿಕಾ ಅವರು ಪುನೀತ್ ಬಗ್ಗೆ​ ಬರೆದುಕೊಂಡಿದ್ದು, ನಮಗೆಲ್ಲ ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ ಎಂದಿದ್ದಾರೆ

ಪುನೀತ್​ ಜತೆ ಇರುವ ಫೋಟೋ ಪೋಸ್ಟ್​ ಮಾಡಿರುವ ರಾಧಿಕಾ ಪಂಡಿತ್​, ‘ನೀವಿಲ್ಲ ಎಂಬುದನ್ನು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ನಿಮ್ಮ ಜಾಗವನ್ನು ಕನ್ನಡ ಚಿತ್ರರಂಗದಲ್ಲಿ ತುಂಬಲು ಬೇರೆ ಯಾರಿಂದಲು ಸಾಧ್ಯವಿಲ್ಲ. ನೀವಿಲ್ಲದೆ ಚಿತ್ರರಂಗ ಎಂದಿನಂತೆ ಇರುವುದಿಲ್ಲ. ನಿಮ್ಮ ಜತೆ ಕೆಲಸ ಮಾಡಲು ಸಿಕ್ಕಿದ್ದು ನಮ್ಮ ಅದೃಷ್ಟ. ನಮಗೆಲ್ಲ ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ’ ಎಂದು ಬರೆದುಕೊಂಡಿದ್ದಾರೆ.

ರಾಧಿಕಾ ಪಂಡಿತ್​, ಪುನೀತ್​ ಒಟ್ಟಾಗಿ ನಟಿಸಿದ್ದ ‘ಹುಡುಗರು’ ಸಿನಿಮಾ ಯಶಸ್ಸು ಕಂಡಿತ್ತು. ‘ದೊಡ್ಮನೆ ಹುಡುಗ’ ಸಿನಿಮಾ ಕೂಡ ಮೆಚ್ಚುಗೆ ಪಡೆದುಕೊಂಡಿತ್ತು. ಸದ್ಯ, ರಾಧಿಕಾ ಪಂಡಿತ್​ ನಟನೆಯಿಂದ ದೂರ ಉಳಿದಿದ್ದಾರೆ. ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಮಕ್ಕಳ ಪಾಲನೆಯಲ್ಲಿ ಅವರು ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ‘ಅವರ ವಯಸ್ಸಿನಲ್ಲಿ ನಾನು ಹೀಗೆ ಇರಲು ಸಾಧ್ಯವೇ?’ ರಾಧಿಕಾ ಪಂಡಿತ್​ಗೆ ಹೀಗೊಂದು ಅನುಮಾನ

Puneeth Rajkumar: ‘ನಾನೂ ಅವರ ಕುಟುಂಬದವಳಾಗಿದ್ದೆ’: ಅಪ್ಪು ಅಂತಿಮ ನಮನದ ಬಳಿಕ ರಾಧಿಕಾ ಕುಮಾರಸ್ವಾಮಿ ಮಾತು