ನಟಿ ರಾಧಿಕಾ ಪಂಡಿತ್ ಅವರು (Radhika Pandit) ಹೆಚ್ಚು ಸಮಯವನ್ನು ಕುಟುಂಬದ ಜತೆಗೆ ಕಳೆಯುತ್ತಿದ್ದಾರೆ. ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಯಶ್ ಅವರು ಇಷ್ಟು ದಿನ ‘ಕೆಜಿಎಫ್: ಚಾಪ್ಟರ್ 2’ (KGF Chapter 2)ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಈಗ ಸಿನಿಮಾ ತೆರೆಕಂಡು ಹಿಟ್ ಆಗಿದೆ. ಚಿತ್ರದ ಗೆಲುವನ್ನು ಯಶ್ ಸಂಭ್ರಮಿಸುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೆಕೇಶನ್ ಮೂಡ್ನಲ್ಲಿರುವ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ (Radhika Pandit) ಕೆನ್ನೆಗೆ ಮುತ್ತಿಟ್ಟಿದ್ದಾರೆ. ಅಭಿಮಾನಿಗಳು ಖುಷಿಯಿಂದ ಈ ಫೋಟೋಗೆ ಕಮೆಂಟ್ ಮಾಡುತ್ತಿದ್ದಾರೆ.
‘ಕೆಜಿಎಫ್ 2’ ಸಿನಿಮಾ ವಿಶ್ವಾದ್ಯಂತ ಕೋಟಿಕೋಟಿ ಬಾಚಿಕೊಳ್ಳುತ್ತಿದೆ. ಸಿನಿಮಾದ ಕಲೆಕ್ಷನ್ 1000 ಕೋಟಿ ಸಮೀಪಿಸುತ್ತಿದೆ. ಬಾಲಿವುಡ್ ಒಂದರಲ್ಲೇ ಈ ಸಿನಿಮಾ 329 ಕೋಟಿ ರೂಪಾಯಿ ಗಳಿಸಿರುವುದು ಸಿನಿಮಾದ ಹೆಚ್ಚುಗಾರಿಕೆ. ಈ ಚಿತ್ರದ ಗೆಲುವನ್ನು ಸಂಭ್ರಮಿಸಲು ಇಡೀ ತಂಡ ಕುಟುಂಬದ ಜತೆ ವೆಕೇಶನ್ಗೆ ತೆರಳಿದೆ. ಇತ್ತೀಚೆಗೆ ಫ್ಯಾಮಿಲಿ ಜತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಪ್ರಶಾಂತ್ ನೀಲ್, ರಾಧಿಕಾ ಪಂಡಿತ್, ಭುವನ್ ಗೌಡ ಹಂಚಿಕೊಂಡಿದ್ದರು. ಈಗ ರಾಧಿಕಾ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಈ ಫೋಟೋದಲ್ಲಿ ರಾಧಿಕಾ ಹಾಗೂ ಯಶ್ ಮ್ಯಾಚಿಂಗ್ ಡ್ರೆಸ್ ಹಾಕಿದ್ದಾರೆ. ಇಬ್ಬರೂ ಗಾಗಲ್ ಹಾಕಿದ್ದಾರೆ. ಮೊದಲ ಫೋಟೋದಲ್ಲಿ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತಿದ್ದಾರೆ. ಎರಡನೇ ಫೋಟೋದಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ಹತ್ತಿರ ಆಗಿದ್ದಾರೆ. ಮೂರನೇ ಫೋಟೋದಲ್ಲಿ ರಾಧಿಕಾಗೆ ಯಶ್ ಕಿಸ್ ಮಾಡಿದ್ದಾರೆ. ಈ ಫೋಟೋಗೆ ‘ಕಲರ್ ಗ್ಲಾಸ್ನಿಂದ ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ತೆಗೆದಿದ್ದು ಭುವನ್ ಎಂದು ಬರೆದುಕೊಂಡಿದ್ದಾರೆ ರಾಧಿಕಾ.
ಯಶಸ್ಸಿನ ಹಾದಿಯಲ್ಲಿ ಯಶ್ ಅವರ ಬೆಂಬಲಕ್ಕೆ ಸದಾ ನಿಂತವರು ರಾಧಿಕಾ. ಶೂಟಿಂಗ್ಗಾಗಿ ಯಶ್ ಬೇರೆಬೇರೆ ಕಡೆ ತೆರಳುವ ಸಂದರ್ಭದಲ್ಲಿ ಮಕ್ಕಳ ಆರೈಕೆಯ ಜವಾಬ್ದಾರಿಯನ್ನು ರಾಧಿಕಾ ಅವರೇ ನೋಡಿಕೊಳ್ಳುತ್ತಿದ್ದರು. ನಟನೆಯಿಂದ ಅಂತರ ಕಾಯ್ದುಕೊಂಡಿರುವ ಅವರು, ಫ್ಯಾಮಿಲಿಗೆ ಹೆಚ್ಚು ಸಮುಯ ಮೀಸಲಿಡುತ್ತಿದ್ದಾರೆ. ರಾಧಿಕಾ ನಟನೆಗೆ ಕಂಬ್ಯಾಕ್ ಮಾಡಲಿ ಎಂಬುದು ಅವರ ಅಭಿಮಾನಿಗಳ ಕೋರಿಕೆ. ಆದರೆ, ಈ ಕೋರಿಕೆ ಇಲ್ಲಿವರೆಗೆ ಈಡೇರಲಿಲ್ಲ. ಸದ್ಯ, ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಶೀಘ್ರದಲ್ಲೇ ಉತ್ತರ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ: Radhika Pandit: ರಜೆಯ ಮೂಡ್ನಲ್ಲಿ ಯಶ್, ರಾಧಿಕಾ ಪಂಡಿತ್; ಮರಳಿನಲ್ಲಿ ಮಕ್ಕಳ ಜತೆ ಆಟ ಆಡಿದ ದಂಪತಿ
ರಜನಿ ನಟನೆಯ ‘2.0’ ಚಿತ್ರವನ್ನು ಹಿಂದಿಕ್ಕಿದ ‘ಕೆಜಿಎಫ್: ಚಾಪ್ಟರ್ 2’; ಹೊಸ ದಾಖಲೆ ಬರೆದ ಯಶ್ ಸಿನಿಮಾ