‘ನನಗೆ ವೈಯಕ್ತಿಕವಾಗಿ ಇರೋದೇ ಓರ್ವ ಫೋಟೋಗ್ರಾಫರ್’; ಹೆಸರು ರಿವೀಲ್ ಮಾಡಿದ ರಾಧಿಕಾ ಪಂಡಿತ್

Radhika Pandit: ರಾಧಿಕಾ ಪಂಡಿತ್ ವಿದೇಶಕ್ಕೆ ತೆರಳಿದ್ದ ಸಂದರ್ಭದ ಫೋಟೋ ಹಂಚಿಕೊಂಡು ಅದಕ್ಕೆ ಅವರು ತಮ್ಮದೇ ಸ್ಟೈಲ್​ನಲ್ಲಿ ಕ್ಯಾಪ್ಶನ್ ನೀಡಿದ್ದಾರೆ.

‘ನನಗೆ ವೈಯಕ್ತಿಕವಾಗಿ ಇರೋದೇ ಓರ್ವ ಫೋಟೋಗ್ರಾಫರ್’; ಹೆಸರು ರಿವೀಲ್ ಮಾಡಿದ ರಾಧಿಕಾ ಪಂಡಿತ್
ರಾಧಿಕಾ ಪಂಡಿತ್

Updated on: Apr 10, 2023 | 12:05 PM

ರಾಧಿಕಾ ಪಂಡಿತ್ (Radhika Pandit) ಅವರ ಸಂಪೂರ್ಣ ಗಮನ ಕುಟುಂಬದ ಮೇಲಿದೆ. ಮದುವೆ ಆದ ಬಳಿಕ ಅವರು ನಟನೆಯಿಂದ ಅಂತರ ಕಾಯ್ದುಕೊಂಡರು. ಅವರು ಚಿತ್ರರಂಗಕ್ಕೆ ಮರಳಬೇಕು ಅನ್ನೋದು ಅನೇಕರ ಕೋರಿಕೆ. ಆದರೆ, ಈ ಕೋರಿಕೆ ಸದ್ಯಕ್ಕಂತೂ ಈಡೇರುವುದು ಅನುಮಾನವೇ. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಬೇಕು ಎನ್ನುವ ಕಾರಣಕ್ಕೆ ರಾಧಿಕಾ ಪಂಡಿತ್ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈಗ ರಾಧಿಕಾ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಅವರು ವಿಶೇಷ ಕ್ಯಾಪ್ಶನ್ ಒಂದನ್ನು ನಿಡಿದ್ದಾರೆ. ಈ ಅಡಿಬರಹದಲ್ಲಿ ತಮ್ಮ ಫೋಟೋಗ್ರಾಫರ್ ಯಾರು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.

2008ರಲ್ಲಿ ತೆರೆಗೆ ಬಂದ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ಅವರಿಗೆ ಯಶಸ್ಸು ಸಿಕ್ಕಿತು. ನಂತರ ಪುನೀತ್ ರಾಜ್​ಕುಮಾರ್, ಧ್ರುವ ಸರ್ಜಾ ಮೊದಲಾದ ಸ್ಟಾರ್ ಹೀರೋ ಜೊತೆ ತೆರೆಹಂಚಿಕೊಂಡರು. ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಹಿಟ್ ಕಾಂಬಿನೇಷನ್ ಎನಿಸಿಕೊಂಡಿದೆ. ಇವರು ಒಟ್ಟಾಗಿ ನಟಿಸಿದ ‘ಮೊಗ್ಗಿನ ಮನಸು’, ‘ಮಿಸ್ಟರ್ ಆ್ಯಂಡ್ ಮಿಸಸ್​ ರಾಮಾಚಾರಿ’, ‘ಸಂತು ಸ್ಟ್ರೇಟ್ ಫಾರ್ವರ್ಡ್​​’ ಚಿತ್ರಗಳು ಯಶಸ್ಸು ಕಂಡವು.

2016ರಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆ ನೆರವೇರಿತು. ಆ ಬಳಿಕ ರಾಧಿಕಾ ನಟನೆಯಿಂದ ಒಂದು ಗ್ಯಾಪ್ ತೆಗೆದುಕೊಂಡರು. ಅವರು ನಟಿಸಿರುವ ‘ಆದಿಲಕ್ಷ್ಮೀ ಪುರಾಣ’ ಸಿನಿಮಾ 2019ರಲ್ಲಿ ರಿಲೀಸ್ ಆಯಿತು. ಆ ಬಳಿಕ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಸದ್ಯ ಕುಟುಂಬದ ಜೊತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಆಗಾಗ ಯಶ್ ಜೊತೆ ಫಾರಿನ್​ ಟ್ರಿಪ್ ತೆರಳುತ್ತಾರೆ. ಈಗ ರಾಧಿಕಾ ಪಂಡಿತ್ ವಿದೇಶಕ್ಕೆ ತೆರಳಿದ್ದ ಸಂದರ್ಭದ ಫೋಟೋ ಹಂಚಿಕೊಂಡು ಅದಕ್ಕೆ ಅವರು ತಮ್ಮದೇ ಸ್ಟೈಲ್​ನಲ್ಲಿ ಕ್ಯಾಪ್ಶನ್ ನೀಡಿದ್ದಾರೆ.


ಇದನ್ನೂ ಓದಿ: ‘ಅತ್ತಿಗೆ.. Yash19 ಅಪ್​ಡೇಟ್ ಕೊಡಿ, ಇಲ್ದಿದ್ರೆ ಧರಣಿ ಕೂರ್ತಿವಿ’; ರಾಧಿಕಾ ಪಂಡಿತ್​ಗೆ ನೇರವಾಗಿ ಹೇಳಿದ ಫ್ಯಾನ್ಸ್​

‘ನಿಮ್ಮ ಇರುವಿಕೆಗೆ ಬೆಲೆ ಕೊಡುವ ಜನರನ್ನು ಬಿಟ್ಟುಕೊಡಬೇಡಿ’ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಇದರ ಜೊತೆಗೆ ‘ಫೋಟೋ ಯಾರು ತೆಗೆದಿದ್ದು ಎಂದು ಕೇಳುವ ಎಲ್ಲರಿಗೂ ಇದು ಉತ್ತರ. ನನಗೆ ವೈಯಕ್ತಿಕವಾಗಿ ಇರೋದು ಒಬ್ಬನೇ ಫೋಟೋಗ್ರಾಫರ್’ ಎಂದಿದ್ದಾರೆ ರಾಧಿಕಾ ಪಂಡಿತ್. ಈ ಮೂಲಕ ತಮ್ಮ ಫೋಟೋಗ್ರಾಫರ್ ಯಶ್ ಎಂಬುದನ್ನು ರಿವೀಲ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:27 am, Mon, 10 April 23