ಸ್ಯಾಂಡಲ್ವುಡ್ನ ತಾರಾ ಜೋಡಿ ರಾಧಿಕಾ ಪಂಡಿತ್ ಹಾಗೂ ಯಶ್ ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅದರಲ್ಲೂ ರಾಧಿಕಾ ಪಂಡಿತ್ ತಮ್ಮ ಪುಟಾಣಿ ಮಕ್ಕಳ ತುಂಟಾಟದ ದೃಶ್ಯಗಳನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇಂದು (ಡಿಸೆಂಬರ್ 14) ಹೊಸ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಐರಾ ಯಶ್ ಹಾಗೂ ಯಥರ್ವ್ ಜೊತೆಯಾಗಿ ಕುಳಿತಿದ್ದಾರೆ. ಐರಾ ಸ್ನ್ಯಾಕ್ಸ್ ತಿನ್ನುತ್ತಿದ್ದು, ಅದನ್ನು ತಮ್ಮ ಯಥರ್ವನಿಗೂ ಕೊಡಲು ಹೋಗಿದ್ದಾಳೆ. ಆಗ ರಾಧಿಕಾ ಪಂಡಿತ್ ಪುತ್ರಿಯನ್ನು ತಡೆದಿದ್ದಾರೆ. ಆಗ ಐರಾ ಪ್ರೀತಿಯಿಂದ ಯಥರ್ವ್ನನ್ನು ಮುದ್ದುಮಾಡಿದ್ದಾಳೆ. ಈ ಸುಂದರ ವಿಡಿಯೋವನ್ನು ರಾಧಿಕಾ ಪಂಡಿತ್ ಸೆರೆಹಿಡಿದು ಶೇರ್ ಮಾಡಿದ್ದಾರೆ. ಪುಟಾಣಿ ಮಕ್ಕಳ ಚಟುವಟಿಕೆ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದ್ದು, ಮೆಚ್ಚುಗೆ ಸೂಚಿಸುತ್ತಿದ್ದಾರೆ.
ರಾಧಿಕಾ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:
ಐರಾ ಯಶ್ ಮತ್ತು ಯಥರ್ವ್ (ಕೃಪೆ: ರಾಧಿಕಾ ಪಂಡಿತ್/ ಇನ್ಸ್ಟಾಗ್ರಾಂ)
ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಐರಾ ಹಾಗೂ ಯಥರ್ವ್ರ ಚಿತ್ರ ಹಾಗೂ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಐರಾ ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ಆಗ ರಾಧಿಕಾ ಪಂಡಿತ್ ‘ನಿನ್ನ ಕೈ ಹಿಡಿದುಕೊಳ್ಳಲು ಯಾವಾಗಲೂ ಇರುತ್ತೇನೆ’ ಎಂದು ಬರೆದು ಹುಟ್ಟುಹಬ್ಬಕ್ಕೆ ಶುಭಕೋರಿದ್ದರು.
ಮಗಳು ಆಯ್ರಾ ಹಾಗೂ ಮಗ ಯಥರ್ವ್ ಯಶ್ ಆರೈಕೆಯಲ್ಲಿ ರಾಧಿಕಾ ಪಂಡಿತ್ ಬ್ಯುಸಿ ಆಗಿದ್ದಾರೆ. ಸದ್ಯ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಂಸಾರದ ಕಡೆಗೆ ರಾಧಿಕಾ ಹೆಚ್ಚು ಗಮನ ನೀಡುತ್ತಿದ್ದಾರೆ. ಆದಷ್ಟು ಬೇಗ ಅವರು ನಟನೆಗೆ ಮರಳಲಿ ಎಂದು ಫ್ಯಾನ್ಸ್ ಅಪೇಕ್ಷಿಸುತ್ತಿದ್ದಾರೆ.
ಇದನ್ನೂ ಓದಿ:
ಸ್ವಿಮ್ಮಿಂಗ್ಪೂಲ್ನಲ್ಲಿ ಆಯ್ರಾ, ಯಥರ್ವ್; ಕ್ಯೂಟ್ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
Published On - 11:54 am, Tue, 14 December 21