ಬೆಂಗಳೂರು: ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ರಾಜಕಾರಣಕ್ಕೆ ಬರಲು ಒಲವು ಹೊಂದಿದ್ದರು ಎಂಬ ಮಾಹಿತಿ ದೊರೆತಿದೆ.
ಸಿನಿಮಾ ನಟನೆಯ ಮೂಲಕ ಜನರ ಮನಗೆದ್ದಿದ್ದ ರಾಗಿಣಿಗೆ ಇತ್ತೀಚೆಗೆ ಸಿನಿಮಾಗಳಲ್ಲಿ ಆಫರ್ಗಳು ಸಿಗೋದು ಕಡಿಮೆಯಾಗಿತ್ತು. ಹೀಗಾಗಿ, ನಟಿ ರಾಜಕೀಯಕ್ಕೆ ಬರಲು ಸಾಕಷ್ಟು ಪ್ರಯತ್ನ ನಡೆಸಿದ್ದರು ಎಂದು ಹೇಳಲಾಗಿದೆ. ಇದಕ್ಕಾಗಿ NGO ಒಂದರ ಮೂಲಕ ರಾಗಿಣಿ ಸಮಾಜಸೇವೆಗೆ ಸಹ ಇಳಿದಿದ್ದರು.
ತೆಲುಗಿನ ನಟಿ ವಿಜಯಶಾಂತಿ ಮಾದರಿಯಲ್ಲಿ ತನ್ನ ಹೀರೋಯಿನ್ ಓರಿಯೆಂಟೆಡ್ ಚಿತ್ರಗಳ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ರಾಗಿಣಿ ಇದನ್ನೆ ಬಂಡವಾಳವಾಗಿ ಇಟ್ಟುಕೊಂಡು ರಾಜಕೀಯವಾಗಿ ಬೆಳೆಯಲು ಚಿಂತಿಸಿದ್ದರಂತೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕಿ ಆಗಿ ಹಾಗೂ ಯೋಗಾ ದಿನಾಚರಣೆ, ವಾಕಥಾನ್‌ನಂಥ ಕಾರ್ಯಕ್ರಮದಲ್ಲಿ ಭಾಗಿಯುವ ಮೂಲಕ ತನ್ನ ರಾಜಕೀಯ ವೃತ್ತಿಗೆ ನಾಂದಿ ಹಾಡಲು ಪ್ರಯತ್ನಿಸಿದ್ದರು. ಆದ್ದರಿಂದ ರಾಗಿಣಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.
ಇದಲ್ಲದೆ, ಈ ಹಿಂದೆ ಪ್ರಕರಣದ A1 ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಪ್ಪಿ ಜೊತೆ ನಟಿ ಸಿನಿಮಾ ಮತ್ತು ರಿಯಲ್ ಎಸ್ಟೇಟ್ನಲ್ಲಿ ಸಹ ತೊಡಗಿದ್ದರು. ಆದರೆ, ಶಿವಪ್ರಕಾಶ್ ಅಲಿಯಾಸ್ ಚಪ್ಪಿ ಸಿನಿಮಾ ಮತ್ತು ರಿಯಲ್ ಎಸ್ಟೇಟ್ನಲ್ಲಿ ಬಂಡವಾಳ ಹಾಕಿ ಲಾಸ್ ಮಾಡಿಕೊಂಡನೋ ಆತನನ್ನು ರಾಗಿಣಿ ಬಿಟ್ಟಿದ್ರು. ಬಳಿಕ ರವಿಶಂಕರ್ ಕುಟುಂಬಕ್ಕೆ ರಾಜಕೀಯ ನಂಟಿರುವ ಹಿನ್ನೆಲೆಯಲ್ಲಿ ಆತನ ಮೂಲಕ ರಾಜಕೀಯ ಎಂಟ್ರಿಗೆ ಸಾಕಷ್ಟು ಯತ್ನ ಸಹ ನಡೆಸಿದ್ದರು, ಆಂಧ್ರದಲ್ಲಿ ಬಿಜೆಪಿ ನಾಯಕ ಮುರಳೀಧರ್ ರಾವ್ನ ಭೇಟಿಯಾಗಿ ಬಿಜೆಪಿ ಸೇರುವ ವಿಚಾರವಾಗಿ ಚರ್ಚಿಸಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಮುರಳೀಧರ್ ರಾವ್ R.ಅಶೋಕ್ನ ಭೇಟಿಯಾಗುವಂತೆ ರಾಗಿಣಿಗೆ ಸೂಚಿಸಿದ್ದರಂತೆ.
ಇದನ್ನೂ ಓದಿ ..
ಪತಿಯಿಂದ ನೊಂದ ಮಹಿಳೆಗೆ ನೆರವಾದ ‘ತುಪ್ಪದ ಬೆಡಗಿ’ ರಾಗಿಣಿ