ಸೊಳ್ಳೆ ಕಾಟ.. ಬೆನ್ನು ನೋವು ಆಯ್ತು.. ಈಗ ತುಪ್ಪದ ಬೆಡಗಿಗೆ ಶುರುವಾಯ್ತು ಅಲರ್ಜಿ!

ಬೆಂಗಳೂರು: ಮಡಿವಾಳದ ಕಿದ್ವಾಯಿ ಆಸ್ಪತ್ರೆ ಬಳಿಯಿರುವ ಸಾಂತ್ವನ ಕೇಂದ್ರದಲ್ಲಿ ಸದ್ಯಕ್ಕೆ ಇರಿಸಲಾಗಿರುವ ನಟಿ ರಾಗಿಣಿ ದ್ವಿವೇದಿಗೆ ಅಲರ್ಜಿ ಸಮಸ್ಯೆ ಎದುರಾಗಿದೆಯಂತೆ. ಸದ್ಯ ಅಲರ್ಜಿ ಸಮಸ್ಯೆ ಎದುರಿಸುತ್ತಿರೊ ನಟಿ ರಾಗಿಣಿ ತಕ್ಷಣ ಡಾಕ್ಟರ್ ಕರೆಸುವಂತೆ ಪೊಲೀಸ್​ ಸಿಬ್ಬಂದಿಗೆ ಬೇಡಿಕೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ನಟಿಗೆ ಜ್ವರ ಮತ್ತು ಬೆನ್ನು ನೋವು ಕಾಣಿಸಿಕೊಂಡಿತ್ತು. ಇದೀಗ, ಕಸ್ಟಡಿಯ ಮೂರನೇ ದಿನವಾದ ಇಂದು ರಾಗಿಣಿಗೆ ಅಲರ್ಜಿ ಸಮಸ್ಯೆ ಎದುರಾಗಿದೆ. ನಟಿಗೆ ನೀಡಲಾಗುತ್ತಿರುವ ಊಟದಲ್ಲಿ ಬಳಸಲಾಗಿರುವ ಅಡುಗೆ ಎಣ್ಣೆಯಿಂದ ಸಮಸ್ಯೆಯಾಗಿರಬಹುದು ಎಂದು ತಿಳಿದುಬಂದಿದೆ. […]

ಸೊಳ್ಳೆ ಕಾಟ.. ಬೆನ್ನು ನೋವು ಆಯ್ತು.. ಈಗ ತುಪ್ಪದ ಬೆಡಗಿಗೆ ಶುರುವಾಯ್ತು ಅಲರ್ಜಿ!
Updated By: ಸಾಧು ಶ್ರೀನಾಥ್​

Updated on: Sep 07, 2020 | 12:00 PM

ಬೆಂಗಳೂರು: ಮಡಿವಾಳದ ಕಿದ್ವಾಯಿ ಆಸ್ಪತ್ರೆ ಬಳಿಯಿರುವ ಸಾಂತ್ವನ ಕೇಂದ್ರದಲ್ಲಿ ಸದ್ಯಕ್ಕೆ ಇರಿಸಲಾಗಿರುವ ನಟಿ ರಾಗಿಣಿ ದ್ವಿವೇದಿಗೆ ಅಲರ್ಜಿ ಸಮಸ್ಯೆ ಎದುರಾಗಿದೆಯಂತೆ.

ಸದ್ಯ ಅಲರ್ಜಿ ಸಮಸ್ಯೆ ಎದುರಿಸುತ್ತಿರೊ ನಟಿ ರಾಗಿಣಿ ತಕ್ಷಣ ಡಾಕ್ಟರ್ ಕರೆಸುವಂತೆ ಪೊಲೀಸ್​ ಸಿಬ್ಬಂದಿಗೆ ಬೇಡಿಕೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ನಟಿಗೆ ಜ್ವರ ಮತ್ತು ಬೆನ್ನು ನೋವು ಕಾಣಿಸಿಕೊಂಡಿತ್ತು. ಇದೀಗ, ಕಸ್ಟಡಿಯ ಮೂರನೇ ದಿನವಾದ ಇಂದು ರಾಗಿಣಿಗೆ ಅಲರ್ಜಿ ಸಮಸ್ಯೆ ಎದುರಾಗಿದೆ.

ನಟಿಗೆ ನೀಡಲಾಗುತ್ತಿರುವ ಊಟದಲ್ಲಿ ಬಳಸಲಾಗಿರುವ ಅಡುಗೆ ಎಣ್ಣೆಯಿಂದ ಸಮಸ್ಯೆಯಾಗಿರಬಹುದು ಎಂದು ತಿಳಿದುಬಂದಿದೆ. ಸದ್ಯ, ಅಧಿಕಾರಿಗಳು ವೈದ್ಯರಿಂದ ರಾಗಿಣಿ ಅಲರ್ಜಿಗೆ ಟ್ರೀಟ್‌ಮೆಂಟ್ ಒದಗಿಸಿರೊ ಮಾಹಿತಿ ತಿಳಿದುಬಂದಿದೆ.