ಇಂದು (ಏ.12) ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ. ಅವರು ಭೌತಿಕವಾಗಿ ನಮ್ಮನ್ನು ಅಗಲಿ ಇಂದಿಗೆ 15 ವರ್ಷ ಕಳೆದಿದೆ. ಈ ದಿನದಂದು ಕನ್ನಡ ಚಿತ್ರರಂಗದ ನಟ-ನಟಿಯರು, ರಾಜಕೀಯ ಗಣ್ಯರು ರಾಜ್‌ಕುಮಾರ್ ಅವರನ್ನು ನೆನೆದಿದ್ದಾರೆ. ಅಷ್ಟೇ ಅಲ್ಲ, ಈ ವಿಶೇಷ ದಿನದಂದು ಟ್ವೀಟ್ ಮಾಡುವ ಮೂಲಕ ವರನಟನನ್ನು ನೆನಪಿಸಿಕೊಂಡಿದ್ದಾರೆ.
ಏ.12ರಂದು ಲಕ್ಷಾಂತರ ಜನರು ಅಣ್ಣಾವ್ರ ನೆನಪಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾರೆ. ಅನ್ನದಾನ, ರಕ್ತದಾನ, ಉಚಿತ ಆರೋಗ್ಯ ತಪಾಸಣೆ, ನೇತ್ರದಾನ ನೋಂದಣಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಳ್ಳುತ್ತಾರೆ. ಆದರೆ, ಕೊರೊನಾ ವೈರಸ್ ಕಾರಣದಿಂದಾಗಿ ಕಳೆದೊಂದು ವರ್ಷದಿಂದ ಈ ಎಲ್ಲ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ. ಹೀಗಾಗಿ ಅಭಿಮಾನಿಗಳು ಟ್ವಿಟರ್ನಲ್ಲೇ ರಾಜ್‌ಕುಮಾರ್ ಅವರನ್ನು ಸ್ಮರಣೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಪ್ರತಿಮ ಕಲಾವಿದ, ಕನ್ನಡ ಚಿತ್ರರಂಗದ ಮೇರುನಟ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯತಿಥಿಯಂದು ಅಭಿಮಾನಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ ಅಣ್ಣಾವ್ರು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಎಂದು ಬರೆದುಕೊಂಡಿದ್ದಾರೆ.
ಅಪ್ರತಿಮ ಕಲಾವಿದ, ಕನ್ನಡ ಚಿತ್ರರಂಗದ ಮೇರುನಟ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯತಿಥಿಯಂದು ಅಭಿಮಾನಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ ’ಅಣ್ಣಾವ್ರು’, ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. pic.twitter.com/lgpBiS2Duv
— B.S. Yediyurappa (@BSYBJP) April 12, 2021
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ರಾಜ್ ಅವರನ್ನು ನೆನೆದಿದ್ದಾರೆ. ನಮ್ಮ ಕರುನಾಡಿಗೆ ಅಪಾರ ಸೇವೆ ಸಲ್ಲಿಸಿ ಕನ್ನಡಿಗರ ಮನದಲ್ಲಿ ಸದಾ ರಾಜನಾಗಿ ಉಳಿದಿರುವ ಅಣ್ಣಾವ್ರು ಡಾ. ರಾಜ್ ರವರ ಪುಣ್ಯಸ್ಮರಣೆಯಿಂದು. ಮರೆಯಲಾಗದ ಮಾಣಿಕ್ಯ ಎಂದು ಬರೆದಿದ್ದಾರೆ.
ನಮ್ಮ ಕರುನಾಡಿಗೆ ಅಪಾರ ಸೇವೆ ಸಲ್ಲಿಸಿ ಕನ್ನಡಿಗರ ಮನದಲ್ಲಿ ಸದಾ ರಾಜನಾಗಿ ಉಳಿದಿರುವ ಅಣ್ಣಾವ್ರು ಡಾ|| ರಾಜ್ ರವರ ಪುಣ್ಯಸ್ಮರಣೆಯಿಂದು. ಮರೆಯಲಾಗದ ಮಾಣಿಕ್ಯ pic.twitter.com/UCQYt2Revw
— Darshan Thoogudeepa (@dasadarshan) April 12, 2021
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಟ್ವೀಟ್ ಮಾಡಿ, ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಅತ್ಯಂತ ಜನಪ್ರಿಯ ಚಲನಚಿತ್ರ ನಟ, ಗಾಯಕ, ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಪುಣ್ಯತಿಥಿಯಂದು ನನ್ನ ನಮನಗಳು ಎಂದಿದ್ದಾರೆ.
ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಅತ್ಯಂತ ಜನಪ್ರಿಯ ಚಲನಚಿತ್ರ ನಟ, ಗಾಯಕ, ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಪುಣ್ಯತಿಥಿಯಂದು ನನ್ನ ನಮನಗಳು.#Rajkumar pic.twitter.com/XwjfeGqcJ4
— Pralhad Joshi (@JoshiPralhad) April 12, 2021
ಶಾಸಕಿ ಸೌಮ್ಯಾ ರೆಡ್ಡಿ ಕೂಡ ಟ್ವೀಟ್ ಮಾಡಿದ್ದು, ಕನ್ನಡಿಗರ ಕಣ್ಮಣಿ, ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳನ್ನು ಸಲ್ಲಿಸುತ್ತೇನೆ. ಅಭಿಮಾನಿಗಳ ಮನದಲ್ಲಿ ‘ಅಣ್ಣಾವ್ರು’ ಎಂದೇ ನೆಲೆಸಿರುವ ಡಾ. ರಾಜ್‌ಕುಮಾರ್ ಭೌತಿಕವಾಗಿ ನಮ್ಮನ್ನು ಆಗಲಿ ಇಂದಿಗೆ 15 ವರ್ಷ. ಆದರೆ ಅವರು ನಿರ್ವಹಿಸಿದ ಪಾತ್ರಗಳು, ಸಮಾಜಕ್ಕೆ ನೀಡಿದ ಸಂದೇಶಗಳ ಮೂಲಕ ಸದಾ ನಮ್ಮೊಂದಿಗಿರುತ್ತಾರೆ ಎಂದಿದ್ದಾರೆ.
ಕನ್ನಡಿಗರ ಕಣ್ಮಣಿ, ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳನ್ನು ಸಲ್ಲಿಸುತ್ತೇನೆ.
ಅಭಿಮಾನಿಗಳ ಮನದಲ್ಲಿ ‘ಅಣ್ಣಾವ್ರು’ ಎಂದೇ ನೆಲೆಸಿರುವ ಡಾ. ರಾಜ್‌ಕುಮಾರ್ ಭೌತಿಕವಾಗಿ ನಮ್ಮನ್ನು ಆಗಲಿ ಇಂದಿಗೆ 15 ವರ್ಷ. ಆದರೆ ಅವರು ನಿರ್ವಹಿಸಿದ ಪಾತ್ರಗಳು, ಸಮಾಜಕ್ಕೆ ನೀಡಿದ ಸಂದೇಶಗಳ ಮೂಲಕ ಸದಾ ನಮ್ಮೊಂದಿಗಿರುತ್ತಾರೆ.#Rajkumar pic.twitter.com/dMi6W9Pt4X
— Sowmya | ಸೌಮ್ಯ | http://sowmyareddy.in (@Sowmyareddyr) April 12, 2021
ಏಪ್ರಿಲ್ 2006 ಮಧ್ಯಾಹ್ನ 1ಘಂಟೆಗೆ ಪಾಂಡವರು ಚಿತ್ರದ ಊಟದ ವಿರಾಮ!ಶ್ರೀರಂಗಪಟ್ಟಣದ ಕುಂತಿಬೆಟ್ಟದ ರಸ್ತೆಯಲ್ಲಿನ ಮನೆ!ಅಂದು ಅಂಬರೀಶ ರವರ ಅಭಿಮಾನಿ ಮನೆಯಿಂದ ವಿಶೇಷ ಊಟದ ವ್ಯೆವಸ್ಥೆ ಇತ್ತು ಅಂದು ಅಂಬರೀಶರವರೆ ಎಲ್ಲರಿಗು ಪ್ರೀತಿಯಿಂದ ಊಟಬಡಿಸಿ ತಾವುತಿಂದರು!ಆಗ ಕ್ಯಾರಾವಾನ್ ವ್ಯೆವಸ್ಥೆ ಇರದ ಕಾರಣ ಎಲ್ಲ ನಟರು ಅವರವರ ಕಾರಿನಲ್ಲಿ a/cಹಾಕಿ pic.twitter.com/GRtdf5pWFq
— ನವರಸನಾಯಕ ಜಗ್ಗೇಶ್ (@Jaggesh2) April 12, 2021
ಇದನ್ನೂ ಓದಿ: Rajkumar Death Anniversary: ಡಾ. ರಾಜ್‌ಕುಮಾರ್ ಭೌತಿಕವಾಗಿ ನಮ್ಮೆಲ್ಲರನ್ನು ಅಗಲಿ ಇಂದಿಗೆ 15 ವರ್ಷ!