
ಸೃಜನ್ ಲೋಕೇಶ್ ನಟಿಸಿ, ನಿರ್ದೇಶಿಸಿರುವ ‘ಜಿಎಸ್ಟಿ’ ಸಿನಿಮಾ ನವೆಂಬರ್ 28ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಹಾರರ್ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ ಎಂಬುದು ವಿಶೇಷ. ಈ ಸಿನಿಮಾ ಪ್ರಚಾರಕ್ಕಾಗಿ ಸೃಜನ್ ಅವರು ಸಾಕಷ್ಟು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ರಾಜ್ಕುಮಾರ್ ಬಗ್ಗೆ ಮಾತನಾಡಿದ್ದಾರೆ.
ರವಿಶಂಕರ್ ಗೌಡ ಕೂಡ ‘ಜಿಎಸ್ಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಮೆಚ್ಚುಗೆ ಪಡೆದಿದೆ. ಸಿನಿಮಾ ಹೇಗಿದೆ ಎಂದು ನೋಡಲು ನವೆಂಬರ್ 28ರವರೆಗೆ ಕಾಯಬೇಕು. ಈ ಚಿತ್ರದ ಪ್ರಚಾರದ ವೇಳೆ ರವಿಶಂಕರ್ ಒಂದು ಅಚ್ಚರಿಯ ವಿಷಯ ರಿವೀಲ್ ಮಾಡಿದ್ದಾರೆ.
‘ರಾಜ್ಕುಮಾರ್ ಅವರು ಸೃಜನ್ನ ಚಿಕ್ಕ ಯಜಮಾನರೇ ಎಂದು ಕರೆಯುತ್ತಿದ್ದರು. ಅಣ್ಣಾವ್ರಿಗೆ ಆಶ್ರಯ ಕೊಟ್ಟ ಕುಟುಂಬ ಅದು. ಅದಕ್ಕೆ ಆ ಕುಟುಂಬದ ಮೇಲೆ ಅಷ್ಟು ಗೌರವ’ ಎಂದರು. ‘ನಮ್ಮ ತಾತ (ಸುಬ್ಬಯ್ಯ ನಾಯ್ಡು) ನಾಟಕ ಕಂಪನಿಯಲ್ಲಿ ರಾಜ್ಕುಮಾರ್ ಕೆಲಸ ಮಾಡುತ್ತಿದ್ದರು’ ಎಂದು ಸೃಜನ್ ಹೇಳಿದ್ದಾರೆ.
ರಾಜ್ಕುಮಾರ್ ಅವರು ಎಲ್ಲರಿಗೂ ಸಾಕಷ್ಟು ಗೌರವ ಕೊಡುತ್ತಿದ್ದರು. ಹಿರಿಯರು ಹಾಗೂ ಕಿರಿಯರು ಎಂದು ಅವರಿಗೂ ಬೇಧ–ಭಾವ ತೋರಿಸಿಲ್ಲ. ಈ ಕಾರಣದಿಂದಲೇ ಅವರು ಸಾಕಷ್ಟು ಇಷ್ಟ ಆಗುತ್ತಿದ್ದರು. ರಾಜ್ಕುಮಾರ್ ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ಇತರ ಕಲಾವಿದರನ್ನು ಅವರು ಸಾಕಷ್ಟು ಗೌರವದಿಂದ ಕಾಣುತ್ತಿದ್ದರು.
ಇದನ್ನೂ ಓದಿ: ನನ್ನ ಸಿನಿಮಾ ಗ್ರೇಟ್ ಅಂತ ನಾನು ದೇವರಾಣೆಗೂ ಹೇಳಲ್ಲ: ಸೃಜನ್ ಲೋಕೇಶ್ ಪ್ರಾಮಾಣಿಕ ಮಾತು
ಚಿತ್ರರಂಗಕ್ಕೆ ಸಾಕಷ್ಟು ವಿಲನ್ಗಳನ್ನು ನೀಡಿದ ಕೊಡುಗೆ ಕೂಡ ರಾಜ್ಕುಮಾರ್ಗೆ ಇದೆ. ನಾಟಕ ಕಂಪನಿಯಿಂದ ಬಂದ ಅವರು ನಂತರ ಸೂಪರ್ ಸ್ಟಾರ್ ಆದರು. ಅವರು ನಿಧನ ಹೊಂದಿ ಸಾಕಷ್ಟು ವರ್ಷಗಳು ಕಳೆದರೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಈಗಲೂ ಆಗುತ್ತಿದೆ. ಇದು ಅವರ ಸಾಧನೆಗೆ ಹಿಡಿದ ಕೈಗನ್ನಡಿ ಆಗಿದೆ. ಪರಭಾಷಾ ಕಲಾವಿದರೂ ಕೂಡ ಅವರಿಗೆ ಸಾಕಷ್ಟು ಗೌರವ ನೀಡುತ್ತಿದ್ದರು. ಅವರ ಕುಟುಂಬ ರಾಜಕೀಯದಲ್ಲಿ ಈಗಲೂ ಆ್ಯಕ್ಟಿವ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:14 am, Fri, 28 November 25