
ಆರಂಭದಿಂದಲೂ ಭಿನ್ನ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವ ನಟ ರಕ್ಷಿತ್ ಶೆಟ್ಟಿ ಅವರು ಈಗ 777 ಚಾರ್ಲಿ ಸಿನಿಮಾದ ಟೀಸರ್ ಮೂಲಕ ಭರವಸೆ ಮೂಡಿಸಿದ್ದಾರೆ. ಕಿರಣ್ರಾಜ್ ನಿರ್ದೇಶನದ ಈ ಸಿನಿಮಾದ ಟೀಸರ್ ಭಾನುವಾರ (ಜೂ.6) ರಕ್ಷಿತ್ ಶೆಟ್ಟಿ ಜನ್ಮದಿನದ ಪ್ರಯುಕ್ತ ಬಿಡುಗಡೆ ಆಯಿತು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಈ ಚಿತ್ರ ತೆರೆಕಾಣಲಿದೆ. ಹಾಗಾಗಿ ಈ ಎಲ್ಲ ಭಾಷೆಯಲ್ಲೂ ಟೀಸರ್ ರಿಲೀಸ್ ಮಾಡಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಸೋಮವಾರ ಬೆಳಗ್ಗೆ 11 ಗಂಟೆಗೆ ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಾ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ 777 ಚಾರ್ಲಿ ಚಿತ್ರದ ಟೀಸರ್ ಬಿಡುಗಡೆ ಆಯಿತು. ಒಂದು ದಿನ ಕಳೆಯುವುದರೊಳಗೆ, ಅಂದರೆ ಕೇವಲ 24 ಗಂಟೆಯೊಳಗೆ ಕೋಟಿಗಟ್ಟಲೆ ವೀವ್ಸ್ ಪಡೆಯುವಲ್ಲಿ ಈ ಟೀಸರ್ ಯಶಸ್ವಿ ಆಗಿದೆ. ಕನ್ನಡದಲ್ಲಿ 4.1 ಮಿಲಿಯನ್ (41 ಲಕ್ಷ), ಮಲಯಾಳಂ ಹಾಗೂ ತೆಲುಗಿನಲ್ಲಿ ತಲಾ 2.9 ಮಿಲಿಯನ್ (ಎರಡೂ ಸೇರಿ 58 ಲಕ್ಷ), ತಮಿಳಿನಲ್ಲಿ 2.8 ಮಿಲಿಯನ್ (28 ಲಕ್ಷ) ಹಾಗೂ ಹಿಂದಿಯಲ್ಲಿ 2.3 ಮಿಲಿಯನ್ (23 ಲಕ್ಷ) ಬಾರಿ ಟೀಸರ್ ವೀಕ್ಷಣೆ ಕಂಡಿದೆ.
ಎಲ್ಲ ಭಾಷೆಯನ್ನೂ ಸೇರಿಸಿದರೆ ಒಂದು ದಿನದೊಳಗೆ 777 ಚಾರ್ಲಿ ಟೀಸರ್ಗೆ 15 ಮಿಲಿಯನ್ ವೀವ್ಸ್ ಸಿಕ್ಕಂತಾಗಿದೆ. ಅಂದರೆ, 1.5 ಕೋಟಿ ಜನರು ಈ ಟೀಸರ್ ನೋಡಿದ್ದಾರೆ. ಎರಡನೇ ದಿನವೂ ಯೂಟ್ಯೂಬ್ನಲ್ಲಿ ಚಾರ್ಲಿ ಹವಾ ಮುಂದುವರಿದಿದೆ. ಅಭಿಮಾನಿಗಳಿಗೆ ಮಾತ್ರವಲ್ಲದೆ ಸೆಲೆಬ್ರಿಟಿಗಳಿಗೂ ಕೂಡ ಈ ಟೀಸರ್ ಸಖತ್ ಇಷ್ಟ ಆಗಿದೆ. ಎಲ್ಲ ಭಾಷೆಯಲ್ಲಿಯೂ ಸ್ಟಾರ್ ಕಲಾವಿದರು ಟೀಸರ್ ಹಂಚಿಕೊಳ್ಳುವ ಮಾಡುವ ಸಾಥ್ ನೀಡಿದ್ದಾರೆ.
( 777 ಚಾರ್ಲಿ ಕನ್ನಡ ಟೀಸರ್)
ರಕ್ಷಿತ್ ಶೆಟ್ಟಿ ಮತ್ತು ತಂಡದ ಶ್ರಮವನ್ನು ಕಿಚ್ಚ ಸುದೀಪ್ ಕೂಡ ಮೆಚ್ಚಿಕೊಂಡಿದ್ದಾರೆ. ಟೀಸರ್ ನೋಡಿರುವ ಅವರು ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
‘ಯೋ ಚಾರ್ಲಿಶೆಟ್ಟಿ. 777 ಚಾರ್ಲಿ ಅದ್ಭುತವಾಗಿರುವಂತಿದೆ. ಇದನ್ನು ಮೆಚ್ಚಿಕೊಳ್ಳದ ಹೊರತು ಬೇರೆ ಆಯ್ಕೆಯೇ ಇಲ್ಲ’ ಎಂದು ಸುದೀಪ್ ಹೇಳಿರುವುದರಿಂದ ಚಿತ್ರತಂಡಕ್ಕೆ ನೂರಾನೆ ಬಲ ಬಂದಂತಾಗಿದೆ.
ಇದನ್ನೂ ಓದಿ:
Published On - 9:50 am, Mon, 7 June 21