
ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಪ್ರಯುಕ್ತ ಅವರ ಹೊಸ ಸಿನಿಮಾಗಳು ಅನೌನ್ಸ್ ಆಗುತ್ತಿವೆ. ಹಾಗೆಯೇ ಅವರು ನಟಿಸುತ್ತಿರುವ ಚಿತ್ರಗಳ ಪೋಸ್ಟರ್, ಟೀಸರ್ ಕೂಡ ಬಿಡುಗಡೆಯಾಗಲಿವೆ. ಎಲ್ಲವುಗಳಿಗಿಂತ ಅಭಿಮಾನಿಗಳು ಹೆಚ್ಚು ಕುತೂಹಲದಿಂದ ಕಾಯುತ್ತಿರುವುದು ಉಪ್ಪಿ ನಿರ್ದೇಶನಕ್ಕೆ ಕಮ್ಬ್ಯಾಕ್ ಮಾಡುತ್ತಿರುವ ಕುರಿತ ಅಪ್ಡೇಟ್ಗೆ. ಹೊಸ ಚಿತ್ರದ ಕುರಿತು ಮಾಹಿತಿ ನೀಡುವುದಾಗಿ ಉಪ್ಪಿ ಈ ಹಿಂದೆಯೇ ತಿಳಿಸಿದ್ದಾರೆ. ಇದೀಗ ಅಭಿಮಾನಿಗಳಿಗೆ ಸರ್ಪ್ರೈಸ್ ಒಂದು ಎದುರಾಗಿದೆ. ಹೌದು. ಬಾಲಿವುಡ್, ಟಾಲಿವುಡ್ನ ಹಿಟ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಉಪ್ಪಿ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಆರ್ಜಿವಿ ಟ್ವಿಟರ್ನಲ್ಲಿ ಸದಾ ಆಕ್ಟಿವ್ ಇರುತ್ತಾರೆ. ಅಲ್ಲಿ ತಮ್ಮ ಮುಂದಿನ ಯೋಜನೆಗಳ ಕುರಿತಾಗಿಯೂ ಅವರು ಮಾಹಿತಿ ಹಂಚಿಕೊಳ್ಳುತ್ತಾರೆ. ಇದೀಗ ಉಪೇಂದ್ರ ಅವರ ಜನ್ಮದಿನಕ್ಕೆ ಶುಭಾಶಯಗಳನ್ನು ತಿಳಿಸಿರುವ ಅವರು, ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿಯನ್ನೂ ನೀಡಿದ್ದಾರೆ. ಅದೇನೆಂದರೆ, ಉಪೇಂದ್ರ ಹಾಗೂ ಆರ್ಜಜಿವಿ ಕಾಂಬಿನೇಷನ್ನಲ್ಲಿ ಹೊಸ ಆಕ್ಷನ್ ಚಿತ್ರವೊಂದು ಮೂಡಿಬರಲಿದೆ. ಅದನ್ನು ಸದ್ಯದಲ್ಲಿಯೇ ಪ್ರಾರಂಭಿಸುವುದಾಗಿಯೂ ಆರ್ಜಿವಿ ಘೋಷಿಸಿದ್ದಾರೆ. ಅಚ್ಚರಿಯ ಈ ಸುದ್ದಿಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಆರ್ಜಿವಿ ಹಂಚಿಕೊಂಡಿರುವ ಟ್ವೀಟ್:
ಇಂದು ಬಿಡುಗಡೆಯಾಗಲಿದೆ ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್:
ಉಪೇಂದ್ರ ವೃತ್ತಿ ಜೀವನದಲ್ಲಿಯೇ ವಿನೂತನ ಮಾದರಿಯ ಚಿತ್ರವಾಗಿರುವ ‘ಕಬ್ಜ’ ಚಿತ್ರತಂಡವೂ ಕೂಡ ಚಿತ್ರದ ಕುರಿತ ಬಹುದೊಡ್ಡ ಅಪ್ಡೇಟ್ ನೀಡಲಿದೆ. ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಲು ಚಿತ್ರದ ನಿರ್ದೇಶಕ ಆರ್.ಚಂದ್ರು ನಿರ್ಧರಿಸಿದ್ಧಾರೆ. ಜೊತೆಗೆ ಚಿತ್ರದ ಟೀಸರ್ ಬಿಡುಗಡೆಯ ದಿನಾಂಕವನ್ನೂ ಇಂದು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಕೂಡ ಬಣ್ಣ ಹಚ್ಚುತ್ತಿದ್ದು, ಅಭಿಮಾನಿಗಳು ಈಗಾಗಲೇ ಚಿತ್ರದ ಪೋಸ್ಟರ್ ನೋಡಿ ಫಿದಾ ಆಗಿದ್ದಾರೆ.
ಉಪೇಂದ್ರ ಉಪ್ಪಿ 2 ನಿರ್ದೇಶನದ ನಂತರ ಮತ್ತೆ ಟೈರೆಕ್ಷನ್ ಕ್ಯಾಪ್ ತೊಡಲಿದ್ದು, ಆ ಚಿತ್ರ ಕೂಡ ಇಂದು ಅನೌನ್ಸ್ ಆಗಲಿದೆ. ಹಾಗಾಗಿ ಇಂದು ಉಪ್ಪಿ ಅಭಿಮಾನಿಗಳು ಬಹಳ ಕಾತರದಿಂದ ಆ ಕ್ಷಣಕ್ಕೆ ಕಾಯುತ್ತಿದ್ದಾರೆ.
ಇದನ್ನೂ ಓದಿ:
Vishnuvardhan Birthday: ವಿಷ್ಣುವರ್ಧನ್ ಕುರಿತ ಅಪರೂಪದ ಸಂಗತಿಗಳು ಹಾಗೂ ಅವರು ಪಡೆದ ಪ್ರಶಸ್ತಿಗಳ ವಿವರ ಇಲ್ಲಿವೆ
ಸಲ್ಮಾನ್ ಖಾನ್ ಮಾಡಿದ 30 ಸೆಕೆಂಡ್ ಕೆಲಸಕ್ಕೆ 50 ಲಕ್ಷ ರೂ. ಸಂಬಳ; ಸಲ್ಲು ಬರೆದಿದ್ದು ಒಂದೇ ವಾಕ್ಯ
(Ram Gopal Varma announces his new film with Upendra on his birthday)
Published On - 11:03 am, Sat, 18 September 21