Ramya Divya Spandana: ವಾಷ್​​ರೂಂ ಕನ್ನಡಿ ಎದುರು ಕುಣಿದು ಕುಪ್ಪಳಿಸಿದ ನಟಿ ರಮ್ಯಾ; ಈ ವಿಚಾರವನ್ನು ಗಮನಿಸಿದ್ರಾ?

|

Updated on: Jul 17, 2023 | 7:13 AM

ಮೊದಲು ಸೋಶಿಯಲ್ ಮೀಡಿಯಾಕ್ಕೆ ಮರಳಿದ ರಮ್ಯಾ ನಂತರ ನಟನೆಗೂ ಮರಳುವ ಘೋಷಣೆ ಮಾಡಿದರು. ಈಗ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಬಗೆಯ ಫೋಟೋ, ವಿಡಿಯೋ​ಗಳನ್ನು ಅವರು ಹಂಚಿಕೊಳ್ಳುತ್ತಾರೆ.

Ramya Divya Spandana: ವಾಷ್​​ರೂಂ ಕನ್ನಡಿ ಎದುರು ಕುಣಿದು ಕುಪ್ಪಳಿಸಿದ ನಟಿ ರಮ್ಯಾ; ಈ ವಿಚಾರವನ್ನು ಗಮನಿಸಿದ್ರಾ?
ರಮ್ಯಾ
Follow us on

ನಟಿ ರಮ್ಯಾ (Ramya) ಅವರು ಈಗ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಅವರು ಡಾಲಿ ಧನಂಜಯ್ ಜೊತೆ ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿ ಸಿನಿಮಾ ನಿರ್ಮಾಣದತ್ತ ಗಮನ ಹರಿಸುತ್ತಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತಿದೆ. ಅಲ್ಲದೆ, ಈ ಒಂದು ವಿಚಾರ ಫ್ಯಾನ್ಸ್​ ಗಮನ ಸೆಳೆದಿದೆ.

ರಮ್ಯಾ ಅವರು ರಾಜಕೀಯ ತೊರೆದ ನಂತರ ಯಾರ ಕೈಗೂ ಸಿಗಲಿಲ್ಲ. ಸೋಶಿಯಲ್ ಮೀಡಿಯಾದಿಂದಲೂ ದೂರವಾದರು. ಅವರು ಮತ್ತೆಂದೂ ಚಿತ್ರರಂಗಕ್ಕೆ ಬರುವುದಿಲ್ಲ ಎಂದು ಕೆಲವರು ಭಾವಿಸಿದ್ದರು. ಕೊನೇಪಕ್ಷ ಸೋಶಿಯಲ್ ಮೀಡಿಯಾಕ್ಕಾದರೂ ಅವರು ಕಂಬ್ಯಾಕ್ ಮಾಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದರು. ಮೊದಲು ಸೋಶಿಯಲ್ ಮೀಡಿಯಾಕ್ಕೆ ಮರಳಿದ ರಮ್ಯಾ ನಂತರ ನಟನೆಗೂ ಮರಳುವ ಘೋಷಣೆ ಮಾಡಿದರು. ಈಗ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಬಗೆಯ ಫೋಟೋ, ವಿಡಿಯೋ​ಗಳನ್ನು ಅವರು ಹಂಚಿಕೊಳ್ಳುತ್ತಾರೆ.

ರಮ್ಯಾ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಮ್ಯಾ ವಾಷ್​ರೂಂನ ಕನ್ನಡಿ ಎದುರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಸಖತ್ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ. ‘ನೀವು ಯಾವಾಗಲೂ ಸುಂದರಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ಸಖತ್ ಗ್ಲಾಮರಸ್ ನೀವು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ನನಗೆ ಆ ಅನುಭವಗಳೇ ಆಗಿರಲಿಲ್ಲ’: ಸೂರ್ಯ ಜೊತೆಗಿನ ನೆನಪು ಮೆಲುಕು ಹಾಕಿದ ನಟಿ ರಮ್ಯಾ

ಈ ವಿಡಿಯೋಗೆ ಅವರು ‘Endorphins’ (ಎಂಡೋರ್ಫಿನ್ಸ್) ಎಂದು ಕ್ಯಾಪ್ಶನ್ ನೀಡಿದ್ದಾರೆ. ಇದೊಂದು ಹಾರ್ಮೋನ್​. ದೇಹ ನೋವು ಅಥವಾ ಒತ್ತಡ ಅನುಭವಿಸಿದಾಗ ಈ ಹಾರ್ಮೋನ್​ ಬಿಡುಗಡೆ ಆಗುತ್ತದೆ. ವ್ಯಾಯಾಮ ಮಾಡಿದ ಸಂದರ್ಭದಲ್ಲಿ ಈ ಹಾರ್ಮೋನ್ ದೇಹದಲ್ಲಿ ಉತ್ಪತ್ತಿ ಆಗುತ್ತದೆ. ಎಂಡೋರ್ಫಿನ್‌ಗಳು ನೋವನ್ನು ನಿವಾರಿಸಲು, ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ರಮ್ಯಾ ಆಗತಾನೇ ಜಿಮ್ ಮುಗಿಸಿ ಈ ವಿಡಿಯೋ ಮಾಡಿದ್ದು, ಅದಕ್ಕಾಗಿ ಈ ರೀತಿಯ ಕ್ಯಾಪ್ಶನ್ ನೀಡಿದ್ದಾರೆ ಎಂದು ಅನೇಕರು ಊಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ