Rashmika Mandanna: ‘ನಾನು ಆರು ಭಾಷೆ ಮಾತನಾಡುತ್ತೇನೆ’ ಎಂದು ಹೇಳಿ ಕನ್ನಡದಲ್ಲಿ ತಪ್ಪಾಗಿ ಮಾತನಾಡಿದ ರಶ್ಮಿಕಾ ಮಂದಣ್ಣ

|

Updated on: Jul 11, 2023 | 1:23 PM

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಸ್ಟೇಟಸ್ ಒಂದನ್ನು ರಶ್ಮಿಕಾ ಹಂಚಿಕೊಂಡಿದ್ದರು. ‘ಹಾಯ್ ಮೈ ಲವ್ಸ್’ ಎಂದು ಅವರು ಸ್ಟೇಟಸ್​ನಲ್ಲಿ ಬರೆದುಕೊಂಡು ಕೆಳಗೆ ಪ್ರಶ್ನೆ ಕೇಳಲು ಅವಕಾಶ ನೀಡಿದ್ದರು.

Rashmika Mandanna: ‘ನಾನು ಆರು ಭಾಷೆ ಮಾತನಾಡುತ್ತೇನೆ’ ಎಂದು ಹೇಳಿ ಕನ್ನಡದಲ್ಲಿ ತಪ್ಪಾಗಿ ಮಾತನಾಡಿದ ರಶ್ಮಿಕಾ ಮಂದಣ್ಣ
ರಶ್ಮಿಕಾ
Follow us on

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಒಂದು ವರ್ಗದ ಜನರು ಅವರನ್ನು ಯಾವಾಗಲೂ ದ್ವೇಷ ಮಾಡುತ್ತಾರೆ. ಅದರಲ್ಲೂ ಕನ್ನಡಿಗರಿಗೆ ರಶ್ಮಿಕಾ ಬಗ್ಗೆ ಸಾಕಷ್ಟು ಕೋಪ ಇದೆ. ಇದಕ್ಕೆ ಕಾರಣ ಹಲವು. ಅವರನ್ನು ಸಾಕಷ್ಟು ಮಂದಿ ಟ್ರೋಲ್ ಮಾಡಲೆಂದೇ ಕಾದಿರುತ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರು ಆಸ್ಕ್​ ಮಿ ಎನಿಥಿಂಗ್ ನಡೆಸಿದ್ದರು. ಈ ವೇಳೆ ಅವರಿಗೆ ವಿವಿಧ ರೀತಿಯ ಪ್ರಶ್ನೆಗಳು ಎದುರಾಗಿವೆ. ಅಲ್ಲಿಯೂ ಅವರು ಕನ್ನಡವನ್ನು ತಪ್ಪಾಗಿ ಮಾತನಾಡಿದ್ದಾರೆ.

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಸ್ಟೇಟಸ್ ಒಂದನ್ನು ರಶ್ಮಿಕಾ ಹಂಚಿಕೊಂಡಿದ್ದರು. ‘ಹಾಯ್ ಮೈ ಲವ್ಸ್’ ಎಂದು ಅವರು ಸ್ಟೇಟಸ್​ನಲ್ಲಿ ಬರೆದುಕೊಂಡು ಕೆಳಗೆ ಪ್ರಶ್ನೆ ಕೇಳಲು ಅವಕಾಶ ನೀಡಿದ್ದರು. ‘ಕನ್ನಡದಲ್ಲಿ ಕೆಲವು ಶಬ್ದ ಮಾತನಾಡಿ’ ಎಂದು ರಶ್ಮಿಕಾಗೆ ಕೋರಲಾಯಿತು. ಇದಕ್ಕೆ ಉತ್ತರಿಸಿದ ರಶ್ಮಿಕಾ ‘ಎಲ್ಲರಿಗೂ ಹಾಯ್. ಹೇಗಿದ್ದೀರಾ? ಚೆನ್ನಾಗಿದ್ದೀರಾ? ಯಾವಾಗಲೂ ನೌತಾ (ನಗುತ್ತಾ) ಇರಿ. ನಾನು ನಿಮ್ಮ ಬಗ್ಗೆ ಯಾವಾಗಲೂ ಯೋಚನೆ ಮಾಡುತ್ತಾ ಇರುತ್ತೇನೆ’ ಎಂದು ಹೇಳಿದ್ದಾರೆ.

ಮತ್ತೊಂದು ಪ್ರಶ್ನೆಯಲ್ಲಿ ‘ರಶ್ಮಿಕಾ ನೀವು ಎಷ್ಟು ಭಾಷೆ ಮಾತನಾಡುತ್ತೀರಿ’ ಎಂದು ಕೇಳಲಾಗಿದೆ. ಇದಕ್ಕೆ ಅವರು ಬೆರಳಲ್ಲೆಲ್ಲ ಲೆಕ್ಕ ಹಾಕಿ ‘ಆರು’ ಎಂದು ಉತ್ತರಿಸಿದ್ದಾರೆ. ಈ ಎರಡು ಪ್ರಶ್ನೆಗಳ ವಿಚಾರ ಇಟ್ಟುಕೊಂಡು ರಶ್ಮಿಕಾ ಮಂದಣ್ಣ ಅವರನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ.

ಕನ್ನಡದಲ್ಲಿ ಮಾತನಾಡುವಾಗ ರಶ್ಮಿಕಾ ಮಂದಣ್ಣ ಅವರು ‘ನಗುತ್ತಾ ಇರಿ’ ಅನ್ನೋದನ್ನು ಸರಿಯಾಗಿ ಉಚ್ಚಾರಣೆ ಮಾಡಿಲ್ಲ. ‘ನೌತಾ ಇರಿ’ ಎಂದು ಹೇಳಿದ್ದರು. ‘ನೀವು ಆರು ಭಾಷೆಯನ್ನು ಮಾತನಾಡುತ್ತೀರಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೀರಿ. ಆದರೆ, ಕರ್ನಾಟಕದವರಾಗಿ ಕನ್ನಡವನ್ನೇ ಸರಿಯಾಗಿ ಮಾತನಾಡುವುದಿಲ್ಲ. ಹೀಗಿರುವಾಗ ಎಷ್ಟು ಭಾಷೆ ಕಲಿತು ಏನು ಪ್ರಯೋಜನ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.


ಇದನ್ನೂ ಓದಿ: ‘ಅನಿಮಲ್​’ ಆಗಮನಕ್ಕೆ ಹೊಸ ದಿನಾಂಕ ನಿಗದಿ: ಡಿ.1ಕ್ಕೆ ಬರಲಿದೆ ರಶ್ಮಿಕಾ-ರಣಬೀರ್​ ಜೋಡಿಯ ಚಿತ್ರ

ರಶ್ಮಿಕಾ ಮಂದಣ್ಣ ಅವರನ್ನು ಎಷ್ಟೇ ಟ್ರೋಲ್ ಮಾಡಿದರೂ ಅವರ ಖ್ಯಾತಿ ಮಾತ್ರ ಕಡಿಮೆ ಆಗಿಲ್ಲ. ಅವರು ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಲೇ ಇದ್ದಾರೆ. ಅವರ ನಟನೆಯ ‘ಅನಿಮಲ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ‘ಪುಷ್ಪ 2’, ‘ರೇನ್​ಬೋ’ ಮೊದಲಾದ ಚಿತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ