Rashmika Mandanna: ವಿಜಯ್​ ದೇವರಕೊಂಡ ಅಲ್ಲ; ಉಂಗುರ ತೋರಿಸಿ ಬಾಯ್​ಫ್ರೆಂಡ್​ ಯಾರು ಅಂತ ಹೇಳಿದ ರಶ್ಮಿಕಾ

ಸಿನಿಮಾ ಕೆಲಸಗಳಿಗಾಗಿ ಹೈದರಾಬಾದ್​ನಲ್ಲಿ ರಶ್ಮಿಕಾ ವಾಸವಾಗಿದ್ದಾರೆ. ಇನ್​ಸ್ಟಾಗ್ರಾಮ್​ ಲೈವ್​ ವೇಳೆ ಅವರು ಧರಿಸಿದ ಒಂದು ಉಂಗುರ ಎಲ್ಲರ ಗಮನ ಸೆಳೆದಿದೆ. ಅದರ ಬಗ್ಗೆ ನೆಟ್ಟಿಗರು ಪ್ರಶ್ನೆ ಕೇಳಿದ್ದಾರೆ.

Rashmika Mandanna: ವಿಜಯ್​ ದೇವರಕೊಂಡ ಅಲ್ಲ; ಉಂಗುರ ತೋರಿಸಿ ಬಾಯ್​ಫ್ರೆಂಡ್​ ಯಾರು ಅಂತ ಹೇಳಿದ ರಶ್ಮಿಕಾ
ರಶ್ಮಿಕಾ ಮಂದಣ್ಣ
Edited By:

Updated on: Apr 27, 2021 | 2:05 PM

ನಟಿ ರಶ್ಮಿಕಾ ಮಂದಣ್ಣ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗುತ್ತಿದ್ದಾರೆ. ಕನ್ನಡದಿಂದ ಸಿನಿಮಾ ಪಯಣ ಆರಂಭಿಸಿದ ಈ ಚೆಲುವೆ ಈಗ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಕಾರಣಕ್ಕಾಗಿಯೂ ರಶ್ಮಿಕಾ ಸುದ್ದಿ ಆಗುತ್ತಿರುತ್ತಾರೆ. ನಟ ವಿಜಯ್​ ದೇವರಕೊಂಡ ಜೊತೆಗಿನ ಒಡನಾಟದ ಕಾರಣದಿಂದ ಕೆಲವು ಗಾಸಿಪ್​ಗಳು ಹಬ್ಬಿದ್ದೂ ಉಂಟು. ರಕ್ಷಿತ್​ ಶೆಟ್ಟಿ ಜೊತೆ ನಿಶ್ಚಿತಾರ್ಥ ಮುರಿದುಬಿದ್ದ ಬಳಿಕ ರಶ್ಮಿಕಾ ಸಿಂಗಲ್​ ಆಗಿದ್ದಾರೆ. ಆದರೂ ಇತ್ತೀಚೆಗೆ ಅವರ ಬಾಯ್​ ಫ್ರೆಂಡ್​ ಯಾರು ಎಂಬ ಬಗ್ಗೆ ಪ್ರಶ್ನೆ ಎದುರಾಯಿತು.

ತಮಿಳು, ತೆಲುಗು, ಹಿಂದಿಯಲ್ಲಿ ಸಿನಿಮಾ ಮಾಡಲು ಆರಂಭಿಸಿದ ಬಳಿಕ ರಶ್ಮಿಕಾ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಸಿಕ್ಕಿದ್ದಾರೆ. ಅವರೆಲ್ಲರ ಜೊತೆಗೂ ಸೋಶಿಯಲ್​ ಮೀಡಿಯಾ ಮೂಲಕ ಈ ಕಿರಿಕ್​ ಬೆಡಗಿ ಸಂಪರ್ಕದಲ್ಲಿ ಇದ್ದಾರೆ. ಅಭಿಮಾನಿಗಳ ಜೊತೆ ಮಾತನಾಡುವ ಸಲುವಾಗಿ ಅವರು ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿದ್ದರು. ಒಂದೂವರೆ ಲಕ್ಷಕ್ಕೂ ಅಧಿಕ ಜನರು ಈ ಲೈವ್​ ವೀಕ್ಷಿಸಿದ್ದಾರೆ. ಈ ವೇಳೆ ಹಲವು ಪ್ರಶ್ನೆಗಳನ್ನು ರಶ್ಮಿಕಾಗೆ ಕೇಳಲಾಯಿತು. ಆಗ ಬಾಯ್​ಫ್ರೆಂಡ್​ ವಿಷಯ ಕೂಡ ಪ್ರಸ್ತಾಪ ಆಯಿತು.

‘ನಿಮ್ಮ ಭಾಯ್​ಫ್ರೆಂಡ್​ ಯಾರು’ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿಯೇ ಬಿಟ್ಟರು. ಅದಕ್ಕೆ ರಶ್ಮಿಕಾ ಕಿಂಚಿತ್ತೂ ಬೇಜಾರು ಮಾಡಿಕೊಳ್ಳಲಿಲ್ಲ. ನೇರವಾಗಿ ವಿಷಯಕ್ಕೆ ಬಂದ ಅವರು, ‘ಕೆಲಸವೇ ನನ್ನ ಬಾಯ್​ಫ್ರೆಂಡ್​. ಅದನ್ನು ಬಿಟ್ಟರೆ ನನಗೆ ಬೇರೆ ಯಾವುದಕ್ಕೂ ಸಮಯ ಇಲ್ಲ’ ಎಂದು ಹೇಳಿದರು. ಅಲ್ಲಿಗೆ ತಾವು ಸಿಂಗಲ್​ ಎಂಬುದನ್ನು ರಶ್ಮಿಕಾ ಸ್ಪಷ್ಟಪಡಿಸಿದರು. ವಿಜಯ್​ ದೇವರಕೊಂಡ ಜೊತೆ ಮತ್ತೆ ಯಾವಾಗ ಸಿನಿಮಾ ಮಾಡುತ್ತೀರಿ ಎಂಬ ಪ್ರಶ್ನೆಗೆ, ‘ನೀವು ಈ ಮಾತನ್ನು ಅವರಿಗೇ ಕೇಳಿಬೇಕು ಅಥವಾ ನಿರ್ದೇಶಕರಿಗೆ ಕೇಳಬೇಕು’ ಎಂದು ಉತ್ತರಿಸಿದ್ದಾರೆ.

ಸದ್ಯ ಸಿನಿಮಾ ಕೆಲಸಗಳಿಗಾಗಿ ಹೈದರಾಬಾದ್​ನಲ್ಲಿ ರಶ್ಮಿಕಾ ವಾಸವಾಗಿದ್ದಾರೆ. ಇನ್​ಸ್ಟಾಗ್ರಾಮ್​ ಲೈವ್​ ವೇಳೆ ಅವರು ಧರಿಸಿದ ಒಂದು ಉಂಗುರ ಎಲ್ಲರ ಗಮನ ಸೆಳೆದಿದೆ. ಅದರ ಬಗ್ಗೆಯೂ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅದು ರಶ್ಮಿಕಾ ಪಾಲಿನ ಸ್ಪೆಷಲ್​ ಉಂಗುರವಂತೆ! ‘ಈ ರಿಂಗ್​ ಕೊಟ್ಟಿದ್ದಕ್ಕೆ ಧನ್ಯವಾದಗಳು. ಎಲ್ಲ ಅಭಿಮಾನಿಗಳ ಪರವಾಗಿ ನಾನು ಇದನ್ನು ಸ್ವೀಕರಿಸಿದ್ದೇನೆ. ಇದು ಯಾವಾಗಲೂ ನನ್ನ ಜೊತೆಗೆ ಇರುತ್ತದೆ. ನೀವೆಲ್ಲ ನನಗೆ ತುಂಬ ಸ್ಪೆಷಲ್​. ಅದೇ ಕಾರಣಕ್ಕಾಗಿ ಇದು ನನ್ನ ಜೀವನದ ಭಾಗ ಆಗಿದೆ. ನನ್ನ ಜನರು ಇದನ್ನು ನನಗೆ ಕೊಟ್ಟಿದ್ದು’ ಎಂದು ಅಭಿಮಾನಿಗಳ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ ರಶ್ಮಿಕಾ.

ಸದ್ಯ ಲಾಕ್​ಡೌನ್​ ಇರುವ ಕಾರಣಕ್ಕೆ ರಶ್ಮಿಕಾ ಕರ್ನಾಟಕ್ಕೆ ಬರಲು ಸಾಧ್ಯವಾಗಿಲ್ಲ. ಅಲ್ಲು ಅರ್ಜುನ್​ ಜೊತೆಗಿನ ‘ಪುಷ್ಪ’ ಸೇರಿದಂತೆ ಅನೇಕ ಸಿನಿಮಾ ಕೆಲಸಗಳ ಸಲುವಾಗಿ ಹೈದರಾಬಾದ್​ನಲ್ಲೇ ಅವರು ಕಾಲ ಕಳೆಯುತ್ತಿದ್ದಾರೆ. ಕುಟುಂಬದವರನ್ನು ಭೇಟಿ ಮಾಡದೇ ತಿಂಗಳುಗಳೇ ಕಳೆದಿವೆ ಎಂದು ಅವರು ಹೇಳಿದ್ದಾರೆ. ಬಾಲಿವುಡ್​ನಲ್ಲಿ ‘ಗುಡ್​ ಬೈ’, ‘ಮಿಷನ್​ ಮಜ್ನು’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾಗೆ ಮಂಡಿಯೂರಿ ಪ್ರಪೋಸ್ ಮಾಡಿದ ವಿಜಯ್ ದೇವರಕೊಂಡ; ವಿಡಿಯೋ ವೈರಲ್

Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಬದುಕು ಬದಲಾಯಿಸಿದ ಐದು ಪ್ರಮುಖ ಘಟನೆಗಳು!​

Published On - 1:20 pm, Tue, 27 April 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us